'ಜೆಡಿಎಸ್‌ಗೆ ವೋಟು ಕೊಟ್ಟರೆ ಅದು ಕಾಂಗ್ರೆಸ್‌ಗೆ ಹೋಗುತ್ತದೆ'

By: ವಿಜಯಪುರ ಪ್ರತಿನಿಧಿ
Subscribe to Oneindia Kannada
   'ಜೆಡಿಎಸ್‌ಗೆ ವೋಟು ಕೊಟ್ಟರೆ ಅದು ಕಾಂಗ್ರೆಸ್‌ಗೆ ಹೋಗುತ್ತದೆ' | Oneindia Kannada

   ವಿಜಯಪುರ, ಡಿಸೆಂಬರ್ 03 : 'ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿನ ಮಂತ್ರಿಗಳು, ಮಂತ್ರಿಗಳ ಮಕ್ಕಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.

   ಬಂಡಾಯದ ಬಿಸಿ, ಬಿಎಸ್‌ವೈ ಭಾಷಣದ ವೇಳೆ ಮೈಕ್ ಕಿತ್ತು ಆಕ್ರೋಶ!

   ವಿಜಯಪುರದ ಸಿಂಧಗಿಯಲ್ಲಿ ಭಾನುವಾರ ಬಿಜೆಪಿ ಪರಿವರ್ತನಾ ಯಾತ್ರೆ ನಡೆಯಿತು. ಯಡಿಯೂರಪ್ಪ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

   ಪರಿವರ್ತನಾ ಯಾತ್ರೆಯ ಸಮಾವೇಶಕ್ಕೂ ಮೊದಲು ಸಿಂಧಗಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಬೈಕ್ ಜಾಥಾ ನಡೆಸಿದರು. ಸುಮಾರು ಎರಡು ಸಾವಿರಕ್ಕೂ ಅಧಿಕ ಕಾರ್ಯಕರ್ತರು ಜಾಥಾದಲ್ಲಿ ಪಾಲ್ಗೊಂಡಿದ್ದರು.

   ಏ... ಎಂ.ಬಿ.ಪಾಟೀಲ ನಿನ್ನನ್ನು ಜೈಲಿಗೆ ಕಳಿಸಿಯೇ ತೀರುತ್ತೇನೆ: ಯಡಿಯೂರಪ್ಪ

   ಸಮಾವೇಶಕ್ಕೂ ಮೊದಲು ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು, 'ವಿಜಯಪುರದ ಇಂಡಿ ಪಟ್ಟಣದಲ್ಲಿ ದೊಡ್ಡ ಪ್ರಮಾಣದ ಸಮಾವೇಶ ನಡೆದಿದೆ. ಒಬ್ಬರು ಹೆಸರು ಹೇಳಿದಕ್ಕೆ ತಪ್ಪು ತಿಳಿದುಕೊಂಡು ಮೈಕ್ ಕಸಿದುಕೊಂಡರು. ಕಾರ್ಯಕರ್ತರ ಜೊತೆಗೆ ಸಮಾಲೋಚನೆ ಮಾಡಲಾಗಿದೆ. ಎಲ್ಲರು ಒಟ್ಟಾಗಿ ಒಂದಾಗಿ ಹೋಗಬೇಕು, ಅಭ್ಯರ್ಥಿ ಯಾರು ಆಗಬೇಕೆಂದು? ಚರ್ಚೆ ಮಾಡಿ ಆಯ್ಕೆ ಮಾಡಲಾಗುತ್ತದೆ' ಎಂದು ತಿಳಿಸಿದ್ದೇನೆ' ಎಂದು ಸ್ಪಷ್ಟನೆ ನೀಡಿದರು.

   ಕರ್ನಾಟಕದಲ್ಲಿ ಮರಳು ಇಲ್ವಾ?

   ಕರ್ನಾಟಕದಲ್ಲಿ ಮರಳು ಇಲ್ವಾ?

   ಸಮಾವೇಶದಲ್ಲಿ ಮಾತನಾಡಿದ ಯಡಿಯೂರಪ್ಪ ಅವರು, 'ಮಲೇಶಿಯಾದಿಂದ ಮರಳು ತಂದು ಮಾರಾಟಕ್ಕೆ ಹೊರಟಿದ್ದಾರೆ, ಯಾಕೆ ಸಿದ್ದರಾಮಯ್ಯ ಅವರೇ ಕರ್ನಾಟಕದಲ್ಲಿ ಮರಳು ಇಲ್ವಾ?' ಎಂದು ಪ್ರಶ್ನೆ ಮಾಡಿದರು.

   ಕಾಂಗ್ರೆಸ್‌ಗೆ ಓಟು ಹೋಗುತ್ತದೆ

   ಕಾಂಗ್ರೆಸ್‌ಗೆ ಓಟು ಹೋಗುತ್ತದೆ

   'ಜೆಡಿಎಸ್ ಅಪ್ಪ-ಮಕ್ಕಳ ಪಕ್ಷವಾಗಿದೆ. ನಿಮಗೆ ಗೊತ್ತಿದ್ದೊ ಗೊತ್ತಿಲ್ಲದೆಯೋ ಒಂದು ಓಟ್ ಅನ್ನು ಕೊಟ್ರೆ ಅದು ಕಾಂಗ್ರೆಸ್‌ಗೆ ಬದಲಾಗುತ್ತದೆ ಅನ್ನೋದು ನೆನಪಿರಲಿ. ಅಪ್ಪ-ಮಕ್ಕಳ ಪಕ್ಷವನ್ನು ನಂಬಬೇಡಿ. ಬಿಜೆಪಿ ಹಾಗೂ ಜೆಡಿಎಸ್ ಸಮಿಶ್ರ ಸರ್ಕಾರವಿದ್ದಾಗ ನನಗೆ ಬೇಡಿಕೆಗಳನಿಟ್ಟು ರಾಜ್ಯ ಹಾಳು ಮಾಡೋಕೆ ಹೊರಟಿದ್ದರು' ಎಂದು ಆರೋಪಿಸಿದರು.

   ತಾಲೂಕು ಕೇಂದ್ರವನ್ನಾಗಿ ಮಾಡುವೆ

   ತಾಲೂಕು ಕೇಂದ್ರವನ್ನಾಗಿ ಮಾಡುವೆ

   'ನಾನು ಸಿಎಂ ಆದ ಮೂರು ತಿಂಗಳಿನಲ್ಲಿ ಆಲಮೇಲ್ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಮಾಡುತ್ತೇನೆ' ಎಂದು ಯಡಿಯೂರಪ್ಪ ಘೋಷಣೆ ಮಾಡಿದರು.

   ಎಂ.ಬಿ.ಪಾಟೀಲ್ ವಿರುದ್ಧ ಆಕ್ರೋಶ

   ಎಂ.ಬಿ.ಪಾಟೀಲ್ ವಿರುದ್ಧ ಆಕ್ರೋಶ

   'ಜನವರಿ ಕೊನೆಯಲ್ಲಿ ನಾನು, ಜಗದೀಶ್ ಶೆಟ್ಟರ್ ಬರುತ್ತೇವೆ. ನೀನು ಅಧಿಕಾರಿಗಳನ್ನು ಕರೆದುಕೊಂಡು ಬಾ, ನೀರಾವರಿ ಹಗರಣ ಬಯಲು ಮಾಡುತ್ತೇನೆ. ತಾಕತ್ತಿದ್ರೆ ಬಾ ಎಂದಿದ್ದೇನೆ. ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು'.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   'If you cast your Vote to JDS, that will go to Congress kitty' Karnataka BJP president B.S.Yeddyurappa told, while addressing parivarthana yatra in Sindagi, Vijayapura district on Dec 3rd 2017.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ