ಗಾಳಿಯಲ್ಲಿ ಗುಂಡು ಹಾರಿಸಿದ ಬಬಲೇಶ್ವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪುತ್ರ- ಗೂಂಡಾಗಳಿಗೆ ಟಿಕೆಟ್ ಎಂದು ಕಾಂಗ್ರೆಸ್ ಕಿಡಿ
ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರದಲ್ಲಿ ಚುನಾವಣಾ ಕಿಚ್ಚು ಹೆಚ್ಚಾಗಿದೆ. ಈ ನಡುವೆ ಬಿಜೆಪಿ ಗೂಂಡಾಗಳಿಗೆ ಟಿಕೆಟ್ ನೀಡಿದೆ ಎಂದು ಕೆಪಿಸಿಸಿ ವಕ್ತಾರ ಸಂಗಮೇಶ ಬಬಲೇಶ್ವರ ಆರೋಪ ಮಾಡಿದ್ದಾರೆ.
ಬಿಜೆಪಿ ಟಿಕೆಟ್ ಸಿಕ್ಕಿದ್ದಕ್ಕೆ ವಿಜುಗೌಡ ಪಾಟೀಲ್ ಪುತ್ರ ಸಮರ್ಥಗೌಡ ಪಿಸ್ತೂಲ್‌ನಿಂದ ಗಾಳಿಯಲ್ಲಿ ಮೂರು ಸುತ್ತಿನ ಗುಂಡು ಹಾರಿಸಿ ವಿಚಿತ್ರವಾಗಿ ಸಂಭ್ರಮಿಸಿದ್ದರು. ಈ ವಿಡಿಯೋ ವೈರಲ್ ಆಗಿದೆ. ಇದನ್ನು ಸಂಗಮೇಶ ಪ್ರಶ್ನೆ ಮಾಡಿದ್ದಾರೆ. ಯಾವ ಆಧಾರದ ಮೇಲೆ ಇವರಿಗೆ ಟಿಕೆಟ್ ಕೊಟ್ಟಿದ್ದೀರಿ? ಎಂದು ಬಿಜೆಪಿ ವರಿಷ್ಠರಿಗೆ ಕೆಪಿಸಿಸಿ ವಕ್ತಾರ ಸಂಗಮೇಶ ಬಬಲೇಶ್ವರ ಪ್ರಶ್ನೆ ಮಾಡಿದ್ದಾರೆ. 'ಗೂಂಡಾಗಳಿಗೆ ಬಿಜೆಪಿ ಟಿಕೆಟ್ ಕೊಟ್ಟಿದೆ' ಎಂದು ಬಿಜೆಪಿ ವಿರುದ್ಧ ಸಂಗಮೇಶ ವಾಗ್ದಾಳಿ ಮಾಡಿದ್ದಾರೆ.

ಸಮರ್ಥಗೌಡ ಗಾಳಿಯಲ್ಲಿ ಗುಂಡು ಹಾರಿಸದ ವಿಡಿಯೋ ಸಾಮಾಝಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಜಯಪುರದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಅಲಗೂರು, ಮುಖಂಡ ಸಂಗಮೇಶ ಅವರು ಸಮರ್ಥಗೌಡ ಅವರ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಮಾಧ್ಯಮಗೋಷ್ಠಿ ಕರೆದು ಗುಂಡು ಹಾರಿಸಿದ ವಿಡಿಯೋ ತೋರಿಸಿದ್ದಾರೆ.
ಬಬಲೇಶ್ವರ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿ ವಿಜುಗೌಡ ಅವರಿಗೆ ಟಿಕೆಟ್ ನೀಡಿದೆ. ಇದೇ ಸಂಭ್ರಮದಲ್ಲಿ ವಿಜುಗೌಡ ಪುತ್ರ ಸಮರ್ಥಗೌಡ ಮನೆ ಮುಂದೆ ಐದಾರು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ವಿಡಿಯೋವನ್ನು ರಿಲೀಸ್ ಮಾಡಿದ ಬಳಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಗಲೂರು, ಮುಖಂಡ ಸಮಘಮೇಶ ಅವರು ಬಬಲೇಶ್ವರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಿಂದ ಗೂಂಡಾಗಿರಿ ನಡೆಯುತ್ತಿದೆ. ಇಂತಹವರು ಅಭ್ಯರ್ಥಿ ಆಗಿದ್ದಾರೆ. ಬಿಜೆಪಿಯ ಕೇಂದ್ರ ಸಚಿವ ಅಮಿತ್ ಶಾ ಹಾಗೂ ಇತರೆ ನಾಯಕರು ಕ್ರಮಕೈಗೊಳ್ಳಬೇಕು ಎಮದು ಆಗ್ರಹಿಸಿದ್ದಾರೆ.
ಎಂಬಿ ಪಾಟೀಲ್
ಈ ಬಾರಿ ಕಾಂಗ್ರೆಸ್ ಎಂಬಿ ಪಾಟೀಲ್ ಅವರನ್ನು ಬಬಲೇಶ್ವರದಿಂದ ಕಣಕ್ಕೆ ಇಳಿಸಿದೆ. ಎಂಬಿ ಪಾಟೀಲ್ ಅವರು ಕಾಂಗ್ರೆಸ್‌ನ ಪ್ರಭಾವಿ ನಾಯಕರಾಗಿದ್ದಾರೆ. 2013ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಎಂಬಿ ಪಾಟೀಲ್ ಅವರು ಜಲಸಂಪನ್ಮೂಲ ಹಾಗೂ ಗೃಹ ಖಾತೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಒಂದು ಬಾರಿ ಲೋಕಸಭೆ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು BLDE ಸಂಘದ ಅಧ್ಯಕ್ಷರು ಹೌದು. ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಎಂ ಬಿ ಪಾಟೀಲ್ ಪ್ರತಿಷ್ಠಾನದ ಮೂಲಕ ನಿರ್ಗತಿಕ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಮತ್ತು ಪುಸ್ತಕಗಳನ್ನು ವಿತರಿಸುವುದು, ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ತರಗತಿಗಳನ್ನು ಸ್ಥಾಪಿಸಲು ಸಹಾಯ ಮಾಡುವುದು, ವಿಜಯಪುರ ಜಿಲ್ಲೆಯಾದ್ಯಂತ ತೋಟಗಾರಿಕೆ ಅಭಿಯಾನಗಳನ್ನು ಆಯೋಜಿಸುವುದು ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ವಿಜುಗೌಡ ಪಾಟೀಲ್
ಬಿಜೆಪಿ ಬಬಲೇಶ್ವರ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಎಂಬಿ ಪಾಟೀಲ್ ಅವರು ಮೂರು ಬಾರಿ ಜಯಗಳಿಸಿದ್ದಾರೆ. ಮೂರು ಬಾರಿಯೂ ಎಂಬಿ ಪಾಟೀಲ್ ವಿರುದ್ಧ ಬಿಜೆಪಿಯ ವಿಜುಗೌಡ ಪಾಟೀಲ್ ಅವರು ಸೋಲು ಅನುಭವಿಸಿದ್ದಾರೆ. ಈ ಬಾರಿಯೂ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅವರ ನಿರಂತರ ಸೋಲಿನಿಮದಾಗಿ ಟಿಕೆಟ್ ಕೈತಪ್ಪುವ ಸಾಧ್ಯತೆಗಳು ಹೆಚ್ಚಾಗಿತ್ತು. ಕೊನೆಗೆ ಕೇಂದ್ರ ಮಟ್ಟದಲ್ಲಿ ಬಿಜೆಪಿ ವಿಜುಗೌಡ ಪಾಟೀಲ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.












Click it and Unblock the Notifications