Get Updates
Get notified of breaking news, exclusive insights, and must-see stories!

ಪೋಷಕರ ಕಣ್ಮುಂದೆಯೇ ಭೀಮಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವತಿ

ವಿಜಯಪುರ, ಅಕ್ಟೋಬರ್ 26: ಯುವತಿಯೊಬ್ಬಳು ಭೀಮಾ ನದಿಗೆ ಹಾರುವ ಮೂಲಕ ಪೋಷಕರ ಕಣ್ಮುಂದೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ಭೀಮಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಐಶ್ವರ್ಯ ಶ್ರೀಪಾಲ ಕಬ್ಬಿನ(20) ಎಂದು ಗುರುತಿಸಲಾಗಿದೆ. ಮೂಲತಃ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ನಿವಾಸಿಯಾಗಿರುವ ಈಕೆ, ತನ್ನ ಕುಟುಂಬದವರೊಂದಿಗೆ ಹೋಗುತ್ತಿದ್ದ ವೇಳೆ ದಾರಿ ಮಧ್ಯೆ ನದಿಗೆ ಹಾರಿದ್ದಾಳೆ.

ಐಶ್ವರ್ಯಾ ತನ್ನ ಕುಟುಂಬಸ್ಥರ ಜೊತೆ ಗಾಣಗಾಪುರ ದತ್ತಾತ್ರೆಯ ದೇವಸ್ಥಾನಕ್ಕೆ ಹೋಗುತ್ತಿದ್ದಳು. ಈ ವೇಳೆ ವಿಜಯಪುರ ಜಿಲ್ಲೆಯ ಆಲಮೇಲ ಮತ್ತು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕು ನಡುವೆ ಭೀಮಾನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಬಳಿ ಬರುತ್ತಿದ್ದಂತೆಯೇ ವಾಹನವನ್ನು ನಿಲ್ಲಿಸುವಂತೆ ಹೇಳಿದ್ದಾಳೆ.

Vijayapura: A Young Woman Committed Suicide By Jumping Into The River Bhima

Recommended Video

      ಎಲ್ಲರೂ BJPಗೆ ಸೇರೋದು ಪಕ್ಕ!! | Oneindia Kannada

      ಅಲ್ಲದೆ ನಾನು ನದಿಗೆ ನಾಣ್ಯ ಹಾಕಬೇಕು ಎಂದು ಹೇಳಿ ವಾಹನದಿಂದ ಇಳಿದು ಸೇತುವೆಯ ಮೂಲೆಗೆ ಹೋಗಿ ತಕ್ಷಣವೇ ನದಿಗೆ ಹಾರಿದ್ದಾಳೆ. ತಮ್ಮ ಕಣ್ಮುಂದೆಯೇ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಪೋಷಕರ ದುಃಖ ಮಡುಗಟ್ಟಿದೆ. ಯುವತಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನೆಂದು ಇನ್ನು ತಿಳಿದುಬಂದಿಲ್ಲ. ಕಲಬುರಗಿ ಜಿಲ್ಲೆಯ ಗಾಣಗಾಪುರ ದತ್ತಾತ್ರೆಯ ದೇವಸ್ಥಾನಕ್ಕೆ ಹೋಗುವಾಗ ಈ ಘಟನೆ ನಡೆದಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+