ವಿಜಯಪುರ: PSI ಮಹಿಳೆಯೊಂದಿಗಿನ ವಾಟ್ಸಪ್ ಚಾಟ್ ಬಟಾಬಯಲು
ವಿಜಯಪುರ, ಡಿಸೆಂಬರ್ 6: "ಐ ಲೈಕ್ ಯು ಡಿಯರ್, ಯು ಆರ್ ಸೋ ಬ್ಯೂಟಿಫುಲ್ ಡಿಯರ್, ಯು ಲುಕ್ ಲೈಕ್ ಮಾಡೆಲ್" ಹೀಗೆ ನಾನಾ ಶಬ್ಧಗಳಿಂದ ವರ್ಣಿಸಿ ಯುವತಿಯನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲು ಪೊಲೀಸ್ ಇನ್ಸ್ ಪೆಕ್ಟರ್ ಆಡಿದ ಬಣ್ಣದ ಮಾತುಗಳು ಇವು.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ ಪೊಲೀಸ್ ಠಾಣೆಯ ಪಿಎಸ್ ಐ ಪ್ರಕಾಶ್ ರಾಠೋಡ್ ಎನ್ನುವರು ರಾತ್ರಿಯಾದರೆ ಸಾಕು ವಾಟ್ಸಪ್ ಮೂಲಕ ಮಹಿಳೆಯೊಬ್ಬರ ವಾಟ್ಸಪ್ ಗೆ ಸಂದೇಶಗಳ ಸುರಿಮಳೆ ಸುರಿಸುತ್ತಾರೆ. ಪೊಲೀಸಪ್ಪನ ಅಸಭ್ಯ ಸಂದೇಶಗಳಿಂದ ನೊಂದ ಮಹಿಳೆ ಇದೀಗ ಪೊಲೀಸ್ ವರಿಷ್ಠಾಧಿಕಾರಿಯ ಮೊರೆ ಹೋಗಿದ್ದಾರೆ.

ಪ್ರಕಾಶ್ ರಾಠೋಡ್ ಈ ಹಿಂದೆ ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮಹಿಳೆ ವಾಟ್ಸಪ್ ಗೆ ಅಸಭ್ಯವಾಗಿ ಸಂದೇಶಗಳನ್ನು ಕಳುಹಿಸಿದ್ದಾರೆ. ಈ ಬಗ್ಗೆ ಮಹಿಳೆ ಪ್ರಕಾಶ ರಾಠೋಡ್ ವಿರುದ್ಧ ಬಾಗಲಕೋಟೆ ಎಸ್ಪಿಗೆ ದೂರು ನೀಡಿದ್ದಾರೆ.

ಆದರೆ, ಪಿಎಸ್ ಐ ಪ್ರಕಾಶ್ ರಾಠೋಡ್ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. "ಇದು ನನ್ನ ವಿರುದ್ದ ನಡೆದ ಷಡ್ಯಂತ್ರ. ಬೇರೆಯವರೇ ನನ್ನ ಹೆಸರಿನಲ್ಲಿ ಚಾಟ್ ಮಾಡಿದ್ದಾರೆ. ನಾನು ಯುವತಿಯೊಂದಿಗೆ ಚಾಟ್ ಮಾಡಿಲ್ಲ. ಯುವತಿ ಬಾಗಲಕೋಟೆ ಎಸ್ಪಿ ಅವರಿಗೆ ದೂರು ನೀಡಿದ್ದು ಗೊತ್ತಿಲ್ಲ ನಕಲಿ ವಾಟ್ಸಪ್ ಐಡಿ ಸೃಷ್ಟಿಸಿ ಚಾಟ್ ಮಾಡಿದ್ದಾರೆ ಎಂದು ಸ್ಪಷ್ಟ ಪಡಿಸಿದ್ದಾರೆ.
ಈ ಪ್ರಕರಣದ ಬಗ್ಗೆ ಪೊಲೀಸ್ ಉನ್ನತಾಧಿಕಾರಿಗಳು ತನಿಖೆ ನಡೆಸಿದರೆ ಮಾತ್ರ ಸತ್ಯಾಸತ್ಯತೆ ಏನು ಎಂಬುವುದು ಹೊರ ಬರಲಿದೆ.












Click it and Unblock the Notifications