ಉಡುಪಿಗೂ ಬಂತು ಅಲ್ ಟೆರೇನ್ ಬೈಕ್, ಕಾಯಕ್ ಬೋಟ್

By: ಉಡುಪಿ ಪ್ರತಿನಿಧಿ
Subscribe to Oneindia Kannada

ಉಡುಪಿ, ಏಪ್ರಿಲ್ 21: ಕುಂದಾಪುರದ ಪ್ರತಿಷ್ಠಿತ ಯುವ ಮೆರಿಡಿಯನ್ ಗ್ರೂಪ್ ಪ್ರವಾಸಿಗರಿಗೆ ನೂತನ ಕೊಡುಗೆ ನೀಡಿದೆ. ಬೀಚ್ ಬೈಕ್ ರೈಡಿಂಗ್ ನ ಆಲ್ ಟೆರೇನ್ ಬೈಕ್ ಹಾಗೂ ಒಳನಾಡು ಹಿನ್ನೀರು ಪ್ರದೇಶದಲ್ಲಿ ಆರಾಮವಾಗಿ ಪಯಣಿಸಲು ಅನುಕೂಲವಾದ ಕಾಯಕ್ ಬೋಟನ್ನು ಸೌಲಭ್ಯವನ್ನು ಆರಂಭಿಸಿದೆ.

ದೇಶ ವಿದೇಶಗಳಲ್ಲಿ ಅಲ್ಲದೆ ಪಣಂಬೂರು, ಉಡುಪಿಗಳಲ್ಲಿ ಈಗಾಗಲೇ ಪ್ರವಾಸಿಗರ ಮನ ಗೆದ್ದಿರುವ ಆಲ್ ಟೆರಿಯನ್ ಬೈಕ್ ನಲ್ಲಿ ಸಮುದ್ರ ತೀರವಲ್ಲದೆ ಕಡಿದಾದ ಹಾದಿಯಲ್ಲಿ ಸುಲಭವಾಗಿ ಪ್ರಯಾಣಿಸಬಹುದು.[ಬಾಬ್ರಿ ಮಸೀದಿ: ಉಮಾಭಾರತಿ ರಾಜೀನಾಮೆ ಅಗತ್ಯವಿಲ್ಲ: ಪೇಜಾವರಶ್ರೀ]

Youth Meridian Group started boating service in Kundapur for tourists

ಪ್ರವಾಸಿಗರ ಅನುಕೂಲವಾಗುವ ನಿಟ್ಟಿನಲ್ಲಿ ಕೋಟೇಶ್ವರದ ಯುವ ಮೆರಿಡಿಯನ್ ಗ್ರೂಪ್ ಕುಂದಾಪುರಕ್ಕೂ ಈ ಸೌಲಭ್ಯ ಒದಗಿಸಿದ್ದು, ಈಗಾಗಲೇ ಅಲ್ ಟೆರೇನ್ ಬೈಕ್ ನ ನುರಿತ ರೈಡರ್ ನಫೀಜ್ ಪ್ರವಾಸಿಗರಿಗೆ ಇದರ ಪರಿಚಯ ಮಾಡಿಕೊಡುತ್ತಿದ್ದಾರೆ.

Youth Meridian Group started boating service in Kundapur for tourists

ಇದೇ ರೀತಿ ಪ್ರವಾಸಿಗರಿಗೆ ಕುಟುಂಬ ಸಮೇತರಾಗಿ ಪಯಣಿಸಬಹುದಾದ ಲೈಫ್ ಪ್ಯಾಕೇಜ್ ವ್ಯವಸ್ಥೆ ಒಳಗೊಂಡ ಕಾಯಕ್ ಬೋಟ್ ಸೇವೆಯನ್ನೂ ಆರಂಭಿಸಿದೆ.[ಅಮೀನ್ ಮಟ್ಟು ವಿರುದ್ಧ ಮಾದಾರ ಚನ್ನಯ್ಯ ಸ್ವಾಮೀಜಿ ಗಂಭೀರ ಆರೋಪ]

ಬೇಸಿಗೆಯ ಸಮಯದಲ್ಲಂತೂ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ಹಾಗಾಗಿ ಪ್ರವಾಸಿಗರಿಗೆ ಅನುಕೂಲಕವಾಗುವ ದೃಷ್ಠಿಯಿಂದ ಸಕಲ ವ್ಯವಸ್ಥೆಯನ್ನು ಒಳಗೊಂಡ ಈ ಕಾಯಕ್ ಬೋಟ್ ಸೇವೆ ಆರಂಭಿಸಲಾಗಿದೆ.

Youth Meridian Group started boating service in Kundapur for tourists

ಅಲ್ ಟೆರೇನ್ ಬೈಕ್ ನಲ್ಲಿ ಬೀಚ್ ರೈಡಿಂಗ್ ಮಾಡುವ ಅವಕಾಶ ಪ್ರವಾಸಿಗರಿಗಿದ್ದರೆ, ಕಾಯಕ್ ಬೋಟ್ ನಲ್ಲಿ ಹಿನ್ನೀರಿನ ಪ್ರವಾಸಿ ತಾಣಗಳಲ್ಲಿ ಸ್ವಚ್ಛಂದವಾಗಿ ವಿಹರಿಸಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Youth Meridian group donates all terrain vehicle and boat called R -Teran to improve tourist in Kundapur, Udupi.
Please Wait while comments are loading...