• search
 • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಹೆದರಿ ಸಭೆಯಿಂದ ಜಯಮಾಲಾ ಜೂಟ್

|
   ಸಚಿವೆ ಜಾಯಮಾಲರನ್ನ ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಕಾರ್ಯಕರ್ತರು | Oneindia Kannada

   ಉಡುಪಿ, ಅಕ್ಟೋಬರ್ 2: ಜಿಲ್ಲಾ ಉಸ್ತುವಾರಿ ಸಚಿವೆಯನ್ನು ಕಾಂಗ್ರೆಸ್ ಕಾರ್ಯಕರ್ತರು ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡು ಭಾರೀ ಮುಜುಗರಕ್ಕೆ ಈಡು ಮಾಡಿದ ಪ್ರಸಂಗ ಉಡುಪಿಯಲ್ಲಿ ನಡೆದಿದೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಅವರಿಗೆ ಸ್ವ ಪಕ್ಷೀಯರಿಂದಲೇ ಇರಿಸುಮುರಿಸು ಉಂಟಾಗಿದೆ.

   ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಮಂಗಳವಾರ ಬಂದ ಸಚಿವೆ ಜಯಮಾಲಾ ಅವರ ವಿರುದ್ಧ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಈ ಕೂಡಲೇ ಎತ್ತಂಗಡಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.

   ಜಯಮಾಲಾ ನನಗಿಂತಲೂ ಹೆಚ್ಚು ಗ್ಲ್ಯಾಮರಸ್ ಎಂದ ಪ್ರಮೋದ್ ಮಧ್ವರಾಜ್

   ಭಾರತ್ ಬಂದ್ ವೇಳೆ ಪೊಲೀಸರು ಹಾಗೂ ಕಾಂಗ್ರೆಸ್ ಕಾರ್ತಯಕರ್ತರ ನಡುವೆ ನಡೆದ ಘರ್ಷಣೆ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಬಂದ್ ವೇಳೆ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸರ ಲಾಠಿ ಚಾರ್ಜ್ ಪ್ರಕರಣ ಮುಂದಿಟ್ಟು, ಸಚಿವೆ ಜಯಮಾಲಾ ಅವರ ವಿರುದ್ದ ಕಿಡಿ ಕಾರಿದ್ದಾರೆ.

   ಲಾಠಿ ಚಾರ್ಜ್ ಆದಾಗ ಜಯಮಾಲಾ ಅವರು ಕಾರ್ಯಕರ್ತರ ಕಷ್ಟ ಕೇಳಿಲ್ಲ. ಕನಿಷ್ಠ ಪಕ್ಷ ಆಸ್ಪತ್ರೆಗೆ ದಾಖಲಾದವರ ಆರೋಗ್ಯ ವಿಚಾರಿಸಿಲ್ಲ. ಆದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಮನೆಯಲ್ಲಿ ಗಣಪತಿ ಇಟ್ಟಾಗ ಊಟ ಮಾಡಲು ಹೋಗಿದ್ದಿರಿ ಎಂದು ಜಯಮಾಲಾ ವಿರುದ್ದ ಯುವ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಡಿಸಿದ್ದಾರೆ.

   ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ತೀರ್ಪು: ಸಚಿವೆ ಜಯಮಾಲಾ ಸ್ವಾಗತ

   ಕಾರ್ಯಕರ್ತರನ್ನು ಸಚಿವೆ ಜಯಮಾಲಾ ಸಮಾಧಾನ ಪಡಿಸಲು ಮುಂದಾಗಿದ್ದಾರೆ. ಆದರೂ ನ್ಯಾಯಕ್ಕಾಗಿ ಆಗ್ರಹಿಸಿ ಕಾರ್ಯಕರ್ತರು ಪಟ್ಟು ಹಿಡಿದಾಗ ಸಚಿವೆ ಜಯಮಾಲಾ ಕೆಂಡಾಮಂಡಲರಾಗಿದ್ದಾರೆ. ಮಾಧ್ಯಮಗಳನ್ನು ಮುಂದಿಟ್ಟುಕೊಂಡು ಹೆದರಿಸಲು ಬರಬೇಡಿ ಎಂದು ಹೇಳಿ, ಈ ರೀತಿಯ ವರ್ತನೆಯಿಂದ ನನಗೆ ತುಂಬಾ ಕೋಪ ಬರುತ್ತದೆ ಎನ್ನುತ್ತಾ ಕಾರು ಹತ್ತಿ ಹೊರಟೇಬಿಟ್ಟಿದ್ದಾರೆ.

   English summary
   Embarrassed Udupi district in charge minister Jayamala leaves congress office as youth Congress workers slams on her silence on police lathi charge during Bharath Bandh.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X