ಉಡುಪಿ: ಅತಿಯಾದ ಮದ್ಯ ಸೇವನೆಯಿಂದ ಯುವಕನ ಸಾವು

ಉಡುಪಿ, ಮೇ 7: ಉಡುಪಿಯಲ್ಲಿ ಮದ್ಯವ್ಯಸನಿಗಳ ಕಾಟ ಮಿತಿ ಮೀರುತ್ತಲೇ ಇದ್ದು, ಇಂದು ಓರ್ವ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಮತ್ತೋರ್ವ ಅಸ್ವಸ್ಥಗೊಂಡು ಪ್ರಾಣ ಕಳೆದುಕೊಂಡಿದ್ದಾನೆ.

ಕಟಪಾಡಿಯಲ್ಲಿ ವಿಪರೀತ ಕುಡಿತದ ಚಟ ಇರುವ ವ್ಯಕ್ತಿ ನೇಣುಬಿಗಿದು ಶರಣಾಗಿದ್ದಾನೆ. ಚಂದ್ರಕಾಂತ್ 32 ಆತ್ಮಹತ್ಯೆಗೆ ಶರಣಾದ ಯುವಕ. ಇನ್ನೊಂದೆಡೆ ಉಡುಪಿ ನಗರದ ಪ್ರಮುಖ ಪಾದಚಾರಿ ರಸ್ತೆಯಲ್ಲಿ ಮದ್ಯಪಾನ‌ ಮಾಡಿ ಅಸ್ವಸ್ಥಗೊಂಡ ಯುವಕ ಮೃತಪಟ್ಟಿದ್ದಾನೆ.

ಅತಿಯಾದ ಮದ್ಯಸೇವನೆ ಮಾಡಿ ಅಸ್ವಸ್ಥಗೊಂಡು ಬಿದ್ದಿದ್ದ ಅಪರಿಚಿತ ಯುವಕನನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು. ಆದರೆ ಯುವಕ ಚಿಕಿತ್ಸೆಗೆ ಸ್ಪಂದಿಸದ ಕಾರಣ ಮೃತಪಟ್ಟಿದ್ದಾನೆ.

Young Man Died From Excessive Alcohol Consumption In Udupi

ಅತಿಯಾದ ಮದ್ಯಸೇವನೆಯು ಯುವಕನ ಸಾವಿಗೆ ಕಾರಣ ಎಂದು ತಿಳಿದು ಬಂದಿದೆ. ಯುವಕನ ವಿಳಾಸ ತಿಳಿದು ಬಂದಿಲ್ಲ. ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿ ಇಡಲಾಗಿದೆ. ವಾರಸುದಾರರು ತುರ್ತು ಅಜ್ಜರಕಾಡು ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸವಂತೆ, ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ವಿನಂತಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+