ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ: ಕಡಿಯಾಳಿ ದೇವಾಲಯದ ಧ್ವಜಸ್ತಂಭಕ್ಕೆ ಪ್ರದಕ್ಷಿಣೆ ಹಾಕಿದ ಗರುಡ!

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜ 20: ಸುಮಾರು ಎಂಟು ನೂರು ವರ್ಷಗಳ ಇತಿಹಾಸವಿರುವ ಕಡಿಯಾಳಿ ಶ್ರೀಮಹಿಷಮರ್ಧಿನಿ ದೇವಾಲಯದ ನೂತನ ಧ್ವಜಸ್ತಂಭದ (ಕೊಡಿಮರ) ಪಾದುಕಾ ಶಿಲಾನ್ಯಾಸ ಮತ್ತು ವೇದವ್ಯಾಸ ಯಾಗಶಾಲೆ ಉದ್ಘಾಟನೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆದಿದೆ.

ಉಡುಪಿ ಅಷ್ಟಮಠಗಳಲ್ಲಿ ಒಂದಾದ ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಶ್ರೀಗಳು ಕೊಡಿಮರ ಮತ್ತು ಯಾಗಶಾಲೆಯನ್ನು ಲೋಕಾರ್ಪಣೆಗೊಳಿಸಿದರು. ಮಾರ್ಚ್ 24ರಂದು ಬೆಳಿಗ್ಗೆ 7 ಗಂಟೆಗೆ ಧ್ವಜಸ್ತಂಭ ಪ್ರತಿಷ್ಠೆ ಕಲಶಾಭಿಷೇಕ, 9:45ಗಂಟೆಗೆ ಒದಗುವ ವೃಷಭ ಲಗ್ನ ಸುಮೂರ್ತದಲ್ಲಿ ಶ್ರೀ ದೇವಿಗೆ ಬ್ರಹ್ಮಕಲಶಭಿಷೇಕ, ಮಹಾ ಅನ್ನಸಂತರ್ಪಣೆ ನಡೆಯಲಿದೆ.

ರಾಮಮಂದಿರ ನಿರ್ಮಾಣದ ವೇಳೆಗೆ ಬಡವರಿಗೆ ಮನೆ ಕಟ್ಟಿಸಿಕೊಡೋಣ -ಪೇಜಾವರ ಶ್ರೀರಾಮಮಂದಿರ ನಿರ್ಮಾಣದ ವೇಳೆಗೆ ಬಡವರಿಗೆ ಮನೆ ಕಟ್ಟಿಸಿಕೊಡೋಣ -ಪೇಜಾವರ ಶ್ರೀ

ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕಾಣಿಯೂರು ಮಠದ ಶ್ರೀಗಳು, "ಪ್ರತಿಮೆಯ ಮೂಲಕ ಭಗವಂತನನ್ನು ಆರಾಧಿಸುವುದು ಮತ್ತೊಂದು ಯಾಗ ಮಾಡಿ ಅಗ್ನಿ ಮೂಲಕ ಭಗವಂತನನ್ನು ಕಾಣುವುದು ಅಗ್ನಿಯ ಮೂಲಕ ಭಗವಂತನನ್ನು ಆರಾಧಿಸಿದರೆ ಭಕ್ತ ಇಷ್ಟಾರ್ಥಗಳನ್ನು ಕೂಡಲೇ ಅನುಗ್ರಹಿಸುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿದೆ" ಎಂದು ಹೇಳಿದರು.

Yagashala And Dhwaja Sthambha Inaguarated In Kadiyali Temple, Udupi

"ಕಡಿಯಾಳಿ ದೇವಸ್ಥಾನ ಈಗ ಅತ್ಯಂತ ವೈಭವೀಕರಣದ ಸಾನಿಧ್ಯ ಹೊಂದಿದೆ. ಇಲ್ಲಿ ಕಾಷ್ಯ ಶಿಲ್ಪಕ್ಕೆ ಭಕ್ತರು ಮಾರುಹೋಗುತ್ತಿದ್ದಾರೆ ಮುಂದೆ ಇದೊಂದು ರಾಜ್ಯದಲ್ಲೇ ಅತ್ಯಂತ ಪವಿತ್ರ ಪ್ರವಾಸಿ ತಾಣವಾಗಿ ಮೂಡಿಬರಲಿ ಅಲ್ಲದೆ ಉಡುಪಿ ಶ್ರೀ ಕೃಷ್ಣನಿಗೂ, ಕಡಿಯಾಳಿಯ ದೇವಿಗೂ ಅವಿನಾಭಾವ ಸಂಬಂಧ ಇದೆ. ಅಲ್ಲಿಗೆ ಬಂದ ಭಕ್ತರು ಇಲ್ಲಿಗೆ ಬಂದು ದೇವಿಯ ದರ್ಶನ ಮಾಡಿ ಧನ್ಯರಾಗುತ್ತಾರೆ"ಎಂದು ಶ್ರೀಗಳು ಆಶೀರ್ವಚನ ನೀಡಿದರು.

"ಮುಂದಿನ ದಿನಗಳಲ್ಲಿ ವ್ಯಾಘ್ರ ಪಿಲಿಚಾಮುಂಡಿ ಮತ್ತು ಇತರ ಪರಿವಾರ ದೈವಗಳ ಜೀರ್ಣೋದ್ಧಾರ ಕಾಮಗಾರಿ ಶೀಘ್ರದಲ್ಲೇ ನಡೆಸಲಾಗುವುದು. ಇದೀಗ ಧ್ವಜಸ್ತಂಭಕ್ಕೆ ಸಂಪೂರ್ಣ ತಾಮ್ರ ಮತ್ತು ಹಿತ್ತಾಳೆಯನ್ನು ಹೊದಿಸಿ ವಿಜೃಂಭಣೆಯಿಂದ ಧ್ವಜ ಪ್ರತಿಷ್ಠೆ ನಡೆಸಲಾಗುವುದೆಂದು ನಿಶ್ಚಯಿಸಿ ಸಂಜೆ 5ಗಂಟೆಗೆ ಹಾಲಿಟ್ಟು ಸೇವೆ, ಧೂಳಿಮಂಡಲ ಸೇವೆ, ಸಣ್ಣ ರಂಗ ಪೂಜೆ ನಡೆಯಲಿದೆ" ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ಕಟ್ಟೆ ರವಿರಾಜ.ವಿ.ಆಚಾರ್ಯ ತಿಳಿಸಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರ್ವಹಿಸಿದರು.

ಧ್ವಜಸ್ತಂಬಕ್ಕೆ ಪ್ರದಕ್ಷಿಣೆ ಹಾಕಿದ ಗರುಡ:

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕ್ಷೇತ್ರದ ಕಡಬ ತಾಲೂಕಿನ ಬಳ್ಪ ಗ್ರಾಮದಲ್ಲಿ ಈ ಕೊಡಿಮರವನ್ನು ಆಯ್ಕೆ ಮಾಡಿ ತರಲಾಗಿತ್ತು. ಇದಕ್ಕೆ 586 ಲೀಟರ್ ಸಂಪೂರ್ಣ ಸಾವಯವ ಎಳ್ಳೆಣ್ಣೆಯನ್ನು ಹಾಕಿ 4 ತಿಂಗಳು ಇಡಲಾಗಿತ್ತು.

Yagashala And Dhwaja Sthambha Inaguarated In Kadiyali Temple, Udupi

ಸುಮಾರು 65 ಅಡಿ ಎತ್ತರದ ಈ ಕೊಡಿಮರ ಜಿಲ್ಲೆಯಲ್ಲೆ ಅತ್ಯಂತ ಎತ್ತರದ ಕೊಡಿ ಮರ ಎನ್ನಲಾಗಿದೆ. ಈ ಕೊಡಿ ಮರವನ್ನು ಇಂದು ಪ್ರತಿಷ್ಠೆ ಮಾಡಿದ ತಕ್ಷಣ ಗರುಡ ಬಂದು ಮೂರು ಸುತ್ತು ಪ್ರದಕ್ಷಿಣೆ ಹಾಕಿದ್ದನ್ನು ನೋಡಿ ಇಲ್ಲಿ ಸೇರಿದ ಜನ ಪುಳಕಿತಗೊಂಡರು.

English summary
Yagashala And Dhwaja Sthambha Inaguarated In Kadiyali Temple, Udupi. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X