ಮೋದಿ ಮತ್ತೆ ಪ್ರಧಾನಿಯಾಗುವುದಾದರೆ ಬಲಭಾಗದಿಂದ ಪ್ರಸಾದ ಕೊಡು ದೇವೀರಮ್ಮ

Recommended Video

      ಮೋದಿ ಮತ್ತೆ ಪ್ರಧಾನಿಯಾಗುವುದಾದರೆ ಬಲಭಾಗದಿಂದ ಪ್ರಸಾದ ಕೊಡು ದೇವೀರಮ್ಮ | Oneindia Kannada

      ಚಿಕ್ಕಮಗಳೂರು, ಏ 20: ನರೇಂದ್ರ ಮೋದಿಯವರು ಮತ್ತೆ ಈ ದೇಶದ ಪ್ರಧಾನಿಯಾಗಬೇಕು ಎಂದು ಹಲವಾರು ಕಡೆ, ಹೋಮ ಹವನ, ಜನಜಾಗೃತಿ ಮೂಡಿಸುವ ಕೆಲಸಗಳು ನಡೆಯುತ್ತಿರುವುದು ಗೊತ್ತೇ ಇದೆ.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಐತಿಹಾಸಿಕ ದೇವೇರಮ್ಮ ದೇವಾಲಯದಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ ಮುಂದುವರಿಯುತ್ತಾರಾ ಎನ್ನುವ ಪ್ರಶ್ನೆಯನ್ನು ದೇವೀರಮ್ಮ ತಾಯಿಯ ಮುಂದೆ ಇಡಲಾಗಿತ್ತು.

      'ಮೋದಿ ಮತ್ತೆ ಪ್ರಧಾನಿಯಾದರೆ ಬಲಭಾಗದಿಂದ ಪ್ರಸಾದ ಕೊಡು, ಇಲ್ಲಾಂದರೆ ಎಡಭಾಗದಿಂದ ಪ್ರಸಾದ ಕೊಡು ತಾಯಿ' ಎಂದು ಅರ್ಚಕರು ದೇವೀರಮ್ಮ ಬಳಿ ಪ್ರಾರ್ಥಿಸುತ್ತಿರುವ ವಿಡಿಯೋ ಒಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

      Whether Modi will become PM again, prayer at Deveramma Temple, what answer godees has given

      ಈ ದೇಶದ ಏಳಿಗೆಗೋಸ್ಕರ ನರೇಂದ್ರ ಮೋದಿಯವರೇ ನೆಕ್ಸ್ಟ್ ಈ ದೇಶದ ಪ್ರಧಾನಿಯಾಗುತ್ತಾರೆ, ಈ ದೇಶವನ್ನು ಸಂರಕ್ಷಣೆ ಮಾಡಿ ಕಾಪಾಡುತ್ತಾರೆ ಎಂದಾದರೆ ಬಲಗಡೆ ಪ್ರಸಾದ ಕೊಡು ತಾಯಿ.. ಎಂದು ಮೂರು ಬಾರಿ ಅರ್ಚಕರು ಪ್ರಾರ್ಥಿಸಿದ ಹತ್ತು ಸೆಕೆಂಡಿನ ನಂತರ ಬಲಭಾಗದಿಂದ, ದೇವರಿಗೆ ಹಾಕಿದ ಮಲ್ಲಿಗೆ ಹೂವು ಕೆಳಗೆ ಬೀಳುತ್ತದೆ.

      ಮಲೆನಾಡು, ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯ ಹಲವು ದೇವಾಲಯಗಳಲ್ಲಿ ಈ ರೀತಿ ಪ್ರಸಾದ ಕೇಳುವ ಪದ್ದತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ದೇವೀರಮ್ಮ ದೇವಾಲಯದ ಈ ವಿಡಿಯೋದ ಸತ್ಯಾಸತ್ಯತೆ ಇನ್ನೂ ತಿಳಿಯಬೇಕಷ್ಟೇ.. ಆದರೆ ಈ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

      Whether Modi will become PM again, prayer at Deveramma Temple, what answer godees has given

      ವೃಶ್ಚಿಕ ರಾಶಿಯವರಾದ ನರೇಂದ್ರ ಮೋದಿ ಅವರಿಗೆ ಸದ್ಯಕ್ಕೆ ಸಾಡೇಸಾತ್ ನಡೆಯುತ್ತಿದೆ. ಜನವರಿ 26ಕ್ಕೆ ಧನು ರಾಶಿ ಪ್ರವೇಶ ಮಾಡುವ ಶನಿ ಗ್ರಹದಿಂದ ಮೋದಿ ಅವರಿಗೆ ತೊಂದರೆಯಾಗುತ್ತದೆ ಎಂದು ಜನವರಿ 2017ರ ಮೊದಲ ವಾರದಲ್ಲಿ ಮೋದಿ ಅಭಿಮಾನಿಗಳು ನವಚಂಡಿಕಾ ಮಹಾಯಾಗ ಕೊಲ್ಲೂರು ಕ್ಷೇತ್ರದಲ್ಲಿ ನಡೆಸಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+