ಪ್ರೊ.ಯು.ಆರ್‌. ರಾವ್‌ ನಿಧನಕ್ಕೆ ಪೇಜಾವರ ಶ್ರೀ ಸಂತಾಪ

Posted By:
Subscribe to Oneindia Kannada

ಉಡುಪಿ, ಜುಲೈ 24: ಇಸ್ರೋ ಮಾಜಿ ಅಧ್ಯಕ್ಷ, ಅಪ್ರತಿಮ ವಿಜ್ಞಾನಿ ಪ್ರೊ.ಯು.ಆರ್‌. ರಾವ್‌ ಅವರ ನಿಧನಕ್ಕೆ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದ್ದಾರೆ. 'ಭಾರತದ ಬಾಹ್ಯಾಕಾಶ ಕ್ಷೇತ್ರದ ಕಾರ್ಯಕ್ರಮಗಳಿಗೆ ರಾವ್‌ ಅವರ ಗಮನಾರ್ಹ ಕೊಡುಗೆಯನ್ನು ಎಂದಿಗೂ ಮರೆಯಲಾಗದು,' ಎಂದು ಅವರು ಹೇಳಿದ್ದಾರೆ .

ಬಾಹ್ಯಾಕಾಶ ವಿಜ್ಞಾನಿ, ಇಸ್ರೋ ಮಾಜಿ ಅಧ್ಯಕ್ಷ ಯುಆರ್ ರಾವ್ ನಿಧನ

"ಇದು ಅತ್ಯಂತ ದುಃಖದ ಘಟನೆಯಾಗಿದೆ. ರಾವ್ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿದ್ದರು. ಅವರೊಬ್ಬ ಕರ್ನಾಟಕ ಮತ್ತು ಉಡುಪಿ ಹೆಮ್ಮೆ ಪಡುವ ವಿಜ್ಞಾನಿ," ಎಂದು ಪೇಜಾವರ ಶ್ರೀಗಳು ಹೇಳಿದರು.

Udupi Pejawara Shree saddened by demise of renowned scientist Professor UR Rao

"ಆರೋಗ್ಯ ವಿಚಾರಿಸಲೆಂದು ಫೋನ್ ನಂಬರ್ ತರಿಸಿಕೊಂಡಿದ್ದೆ. ಆದರೆ ಅಷ್ಟರಲ್ಲೇ ಯು.ಆರ್ ರಾವ್ ಅಗಲಿದ್ದಾರೆ. ಇದು ನನ್ನ ಮನಸ್ಸಿಗೆ ಖೇದವಾಗಿದೆ," ಎಂದರು.

ಉಡುಪಿ ರಾಮಚಂದ್ರರಾಯರಿಗೆ ಸದಾ ಅದೇ ಧ್ಯಾನ - ವಿಜ್ಞಾನ

"ಅವರಿಗೆ ಪರಮಾತ್ಮ ಸದ್ಗತಿ ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ಅವರಿಗೆ ಎಷ್ಟು ಗೌರವ ಕೊಡಬೇಕೋ ಅಷ್ಟು ಕೊಟ್ಟಿಲ್ಲ. ಆದ್ರೆ ಈಗ ಅದರ ಚರ್ಚೆ ಮಾಡಿ ಪ್ರಯೋಜನವಿಲ್ಲ. ಯು.ಆರ್ ರಾವ್ ಗೆ ಭಾರತೀಯರೆಲ್ಲರು ಕೃತಜ್ಞತೆ ಅರ್ಪಿಸಬೇಕು," ಎಂದು ಪೇಜಾವರ ಶ್ರಿ ಸಂತಾಪ ವ್ಯಕ್ತಪಡಿಸಿದರು.

Iftar get together, Udupi : Pratap Simha supports Pejawara Shri | Oneindia Kannada

ಪ್ರೊ.ಯು.ಆರ್‌. ರಾವ್‌ ಅವರು ಭಾನುವಾರ ತಡರಾತ್ರಿ 2.55ಕ್ಕೆ ಬೆಂಗಳೂರಿನ ಇಂದಿರಾ ನಗರದಲ್ಲಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಪತ್ನಿ ಯಶೋಧ ರಾವ್‌, ಪುತ್ರ ಮಧನ್‌ ರಾವ್‌, ಪುತ್ರಿ ಮಾಲಾ ರಾವ್‌ ರನ್ನು ಅವರು ಅಗಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Udupi Pejawara Vishwesha Teertha Swamiji on Monday expressed grief over the passing away of internationally renowned scientist Professor UR Rao to media persons here on July 24.
Please Wait while comments are loading...