ಮೋದಿಯ ಪಡಿಯಚ್ಚು ಉಡುಪಿಯ ಅಡುಗೆ ಭಟ್ಟ ಸದಾನಂದ ನಾಯಕ್

Posted By:
Subscribe to Oneindia Kannada

ಉಡುಪಿ, ಜನವರಿ 12 : ದೇಶದಲ್ಲಿ ಎಲ್ಲಿ ನೋಡಿದರೂ ಮೋದಿ ಹವಾ. ಚುನಾವಣೆ ಬಂದರೆ ಪ್ರಧಾನಿ ಮೋದಿನೇ ಸ್ಟಾರ್ ಪ್ರಚಾರಕರು. ಹಾಗಂತ ಎಲ್ಲ ಕಡೆಯೂ ಅವರೇ ಹೋಗೋಕಾಗುತ್ತಾ? ಹಾಗಾಗಿ ಈಗ ಮೋದಿ ಅವರಂತೆ ಕಾಣುವವರಿಗೆ ಭಾರೀ ಬೇಡಿಕೆ ಇದೆ.

ಉಡುಪಿಯ ಸದಾನಂದ ನಾಯಕ್ ಎಂಬ ಮೋದಿ ತದ್ರೂಪಿನಂತೆ ಇರುವವರಿಗೆ ಭಾರೀ ಬೇಡಿಕೆ. ಗುಜರಾತ್ ಚುನಾವಣೆಯಲ್ಲಿ ಭಾಗವಹಿಸಿ ಬಂದ ಸದಾನಂದ ನಾಯಕ್ ಈಗ ಕರ್ನಾಟಕ ಚುನಾವಣೆಯತ್ತ ಮುಖ ಮಾಡಿದ್ದಾರೆ. ಬಿಜೆಪಿಯ ಅಭಿಮಾನಿ ಆಗಿರುವ ಅವರನ್ನು ನೋಡಿದರೆ, ಎಂಥವರೂ ಅರೆಕ್ಷಣ ಅವಾಕ್ ಆಗುತ್ತಾರೆ. ಕೆಲವರಂತೂ ಗಾಬರಿಯಿಂದ ಎರಡೂ ಕೈ ಎತ್ತಿ ನಮಸ್ಕರಿಸಿದ್ದಿದೆ.

ವಿಜಯನಗರದ ಪರಿವರ್ತನಾ ಯಾತ್ರೆಯಲ್ಲಿ ಮೋದಿ ಮೋಡಿ!

ಉಡುಪಿ ಜಿಲ್ಲೆ, ಹಿರಿಯಡ್ಕ ನಿವಾಸಿ ಸದಾನಂದ ನಾಯಕ್ ಅವರದ್ದು ಥೇಟ್ ಮೋದಿ ಥರ ನಿಲುವು, ಹಾವಭಾವ, ಮಾತುಕತೆ. ಮೇಲಾಗಿ ಬಿಜೆಪಿಯಲ್ಲಿ ಮೋದಿಯವರ ಕಟ್ಟರ್ ಅಭಿಮಾನಿ . ಉಡುಪಿಯ ಸದಾನಂದ ನಾಯಕ್ ಗೆ ಈಗ ಎಲ್ಲಿಲ್ಲದ ಬೇಡಿಕೆ. ಕರ್ನಾಟಕ ಮಾತ್ರವಲ್ಲ, ಗುಜರಾತ್ ನಲ್ಲೂ ಈ 'ಉಡುಪಿ ಮೋದಿ'ಯದ್ದೇ ಹವಾ.

ಸಂಕ್ರಾಂತಿ ವಿಶೇಷ ಪುಟ

ಕಾಂಗ್ರೆಸ್ ನಿಂದಲೂ ಆತಿಥ್ಯ

ಕಾಂಗ್ರೆಸ್ ನಿಂದಲೂ ಆತಿಥ್ಯ

ಗುಜರಾತ್ ಚುನಾವಣಾ ಪ್ರಚಾರದಲ್ಲಿ ಇವರೇ ಪ್ರಧಾನ ಆಕರ್ಷಣೆ. ಬಿಜೆಪಿ ಮಾತ್ರ ಅಲ್ಲ, ಕಾಂಗ್ರೆಸ್ ಕಚೇರಿಗೂ ಕರೆದು, ಇವರಿಗೆ ಆತಿಥ್ಯ ನೀಡಿದ್ದರಂತೆ. ಅಲ್ಲಿ ಪ್ರಚಾರ ಮುಗಿಸಿ, ಉಡುಪಿಗೆ ಮರಳಿರುವ ಸದಾನಂದ ನಾಯಕ್ ಅವರಿಗೆ ಕರ್ನಾಟಕ ಚುನಾವಣೆಯೇ ಮುಂದಿನ ಗುರಿ.

ವೃತ್ತಿಯಿಂದ ಅಡುಗೆ ಭಟ್ಟ

ವೃತ್ತಿಯಿಂದ ಅಡುಗೆ ಭಟ್ಟ

ಪ್ರಧಾನಿ ಮೋದಿ ಅವರು ಬಾಲ್ಯದಲ್ಲಿ ಚಾಯ್ ವಾಲಾ. ಆದರೆ ಉಡುಪಿಯ ಸದಾನಂದ ನಾಯಕ್ ಅಡುಗೆ ಭಟ್ಟ. ಎರಡು ವರ್ಷದ ಹಿಂದೆ ಹರಿದ್ವಾರಕ್ಕೆ ಪ್ರವಾಸ ಹೋದ ತಂಡದಲ್ಲಿ ಇವರು ಅಡುಗೆ ಕಾರ್ಯ ನಿರ್ವಹಿಸುತ್ತಾ ಇದ್ದರು. ಪ್ರವಾಸ ಇದ್ದ ಕಾರಣ ಗಡ್ಡ ತೆಗೆದಿರಲಿಲ್ಲ. ಗಡ್ಡ ಬಿಟ್ಟ ನಾಯಕ್ ರನ್ನು ನೋಡಿದ ಉತ್ತರ ಭಾರತದ ಜನ ಮೋದಿ ಅಂತ ಮುಗಿಬಿದ್ದರು.

ವಿವೇಕಾನಂದರ ಮರು ಜನ್ಮವೇ ನರೇಂದ್ರ ಮೋದಿಯೇ?: ಜಾತಕ ವಿಶ್ಲೇಷಣೆ

ನರೇಂದ್ರ ಮೋದಿ ಛಾಯೆ

ನರೇಂದ್ರ ಮೋದಿ ಛಾಯೆ

ಆವತ್ತೇ ಸದಾನಂದ ನಾಯಕ್ ಅವರಿಗೆ ತಮ್ಮ ರೂಪದಲ್ಲಿ ನರೇಂದ್ರ ಮೋದಿಯ ಛಾಯೆ ಇದೆ ಅಂತ ಅರಿವಿಗೆ ಬಂದಿದ್ದು. ಆ ದಿನದಿಂದ ಒಂದು ಕ್ಷಣ ವಿರಾಮ ಇಲ್ಲದೇ ಬಿಜೆಪಿ ಪರ ಸಂಚಾರ ಮಾಡುತ್ತಿದ್ದಾರೆ. ಇವರ ಜೊತೆ ಗೋವಾ ಮೂಲದ ಅಗಸ್ಟಿನ್ ಡಿ ಅಲ್ಮೆಡಾ ಕೈ ಜೋಡಿದ್ದಾರೆ.

ಸೆಲ್ಫಿಗೆ ಮುಗಿಬೀಳುವ ಜನ

ಸೆಲ್ಫಿಗೆ ಮುಗಿಬೀಳುವ ಜನ

ಮಹಾತ್ಮ ಗಾಂಧಿಯನ್ನು ಹೋಲುವ ಅಗಸ್ಟಿನ್ ಡಿ ಅಲ್ಮೆಡಾ ಎಲ್ಲೇ ಹೋದರೂ ಒಟ್ಟಿಗಿರುತ್ತಾರೆ. ಈ ಜೋಡಿ ಗುಜರಾತ್ ನಲ್ಲಿ ಮಾಡಿದ ಮೋಡಿ ಅಷ್ಟಿಷ್ಟಲ್ಲ. ರಾಷ್ಟ್ರೀಯ ಮಾಧ್ಯಮಗಳಲ್ಲೂ ಇವರು ಮಿಂಚಿದ್ದರು. ಸದಾನಂದ ನಾಯಕ್ ಅವರಿಗೆ ಹೋದಲ್ಲೆಲ್ಲಾ ಸೆಲ್ಪೀಗೆ ಪೋಸ್ ಕೊಡುವುದೇ ದೊಡ್ಡ ಕೆಲಸ. ಎಲ್ಲೇ ಹೋದರೂ ಜನ ಇವರಿಗೆ ಮುಗಿಬೀಳ್ತಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi’s look-alike Udupi Sadananda Nayak worked for BJP in Gujarat elections. Sadananda Nayak is now in great demand for the striking resemblance he bears to Prime Minister Narendra Modi. Now Nayak ready for next assembly elections of Karnataka.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ