ಉಡುಪಿ: ದೇಶಭಕ್ತಿ ಸಾರಲು ಹೀಗೊಂದು ಸಾಹಸೀ ನಡಿಗೆ
ದೇಶಭಕ್ತಿ ಸಾರಲು ಇಲ್ಲೊಬ್ಬ ವ್ಯಕ್ತಿ ತನ್ನ ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಕಾಲ್ನಡಿಗೆಯಲ್ಲೇ ಉಡುಪಿಯಿಂದ ಮುಂಬೈಗೆ ನಡೆಯಲು ಹೊರಟಿದ್ದಾರೆ. ಈ ಮೂಲಕ ಪ್ರತಿ ಜನರಲ್ಲಿ ದೇಶಭಕ್ತಿಯ ಜಾಗೃತಿ ಮೂಡಿಸಲು ಸಜ್ಜಾಗಿದ್ದಾರೆ.
ಉಡುಪಿ, ಮಾರ್ಚ್ 30: ದೇಶಭಕ್ತಿ ಸಾರಲು ಇಲ್ಲೊಬ್ಬ ವ್ಯಕ್ತಿ ತನ್ನ ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಕಾಲ್ನಡಿಗೆಯಲ್ಲೇ ಉಡುಪಿಯಿಂದ ಮುಂಬೈಗೆ ನಡೆಯಲು ಹೊರಟಿದ್ದಾರೆ. ಈ ಮೂಲಕ ಪ್ರತಿ ಜನರಲ್ಲಿ ದೇಶಭಕ್ತಿಯ ಜಾಗೃತಿ ಮೂಡಿಸಲು ಸಜ್ಜಾಗಿದ್ದಾರೆ.
ಇವರು ಮತ್ಯಾರೂ ಅಲ್ಲ ಮೂಲತಃ ಉಡುಪಿ ಜಿಲ್ಲೆಯ ಕಡೆಕಾರ್ ನ ಜಯಪ್ರಕಾಶ ಶೆಟ್ಟಿ. 43 ವಯಸ್ಸಿನ ಇವರು ದೇಶಭಕ್ತಿಯ ಪ್ರತೀಕವಾದ ರಾಷ್ಟ್ರ ಧ್ವಜವನ್ನು ಹಿಡಿಕೊಂಡು ದಿನಕ್ಕೆ ಸುಮಾರು 50 ಕಿ.ಮೀ ಕಾಲ್ನಡಿಗೆಯಲ್ಲೇ ನಡೆದುಕೊಂಡು ಉಡುಪಿಯಿಂದ ಮುಂಬೈಗೆ 914 ಕಿಲೋಮೀಟರ್ ಪಯಣ ಆರಂಭಿಸಿದ್ದಾರೆ.[ಕೋರ್ಟ್ ಮೆಟ್ಟಿಲೇರಿದ ಹಾಜಿ ಅಬ್ದುಲ್ಲಾ ಆಸ್ಪತ್ರೆ ಖಾಸಗೀಕರಣ]
ತ್ರಿವರ್ಣ ಧ್ವಜದ ಗರಿಮೆ ಎಲ್ಲೆಡೆ ಸಾರಲು ಹಾಗೆಯೇ ದೇಶಭಕ್ತಿ ಇಮ್ಮಡಿಗೊಳಿಸುವ ಸಲುವಾಗಿ ಈ ಪಯಣ ಆರಂಭಿಸಿದ್ದಾರೆ. ಜಯಪ್ರಕಾಶ್ ಶೆಟ್ಟಿ ಊಹೆಗೂ ಮೀರಿದ ಸಾಧನೆ ಮಾಡಲಿದ್ದು, ಕಾಲ್ನಡಿಗೆಯಲ್ಲೇ ಕೊಂಕಣ ತೀರದ ಉದ್ದಗಲಕ್ಕೂ ದೇಶಭಕ್ತಿಯನ್ನು ಸಾರುವ ಗುರಿಯನ್ನು ಹೊಂದಿದ್ದಾರೆ.

ಪಯಣ ಆರಂಭ
ಈಗಾಗಲೇ ಇವರು ಮಾರ್ಚ್ 25 ರಂದು ಉಡುಪಿ ಜಿಲ್ಲೆಯ ಕಡೇಕಾರ್ ನಿಂದ ಕಾಲ್ನಡಿಗೆಯಲ್ಲೇ ತ್ರಿವರ್ಣ ಧ್ವಜದೊಂದಿಗೆ ತಮ್ಮ ಪಯಣ ಆರಂಭಿಸಿದ್ದು, ಏಪ್ರಿಲ್ 14ಕ್ಕೆ ಮುಂಬೈ ತಲುಪಲಿದ್ದಾರೆ.
ಜಯಪ್ರಕಾಶ್ ಶೆಟ್ಟಿ ಮುಂಬೈಯ ಇಂಟೆಲ್ನ ಜಾಗತಿಕ ಸೇವಾ ( ಬಿಪಿಓ) ಕಂಪೆನಿಯಲ್ಲಿ ವೃತ್ತಿಯಲ್ಲಿದ್ದಾರೆ. ಹಾಗಾದರೆ ಇವರಿಗೆ ದೇಶಪ್ರೇಮಕ್ಕೆ ಪ್ರೇರಣೆ ಎಲ್ಲಿಂದ ಬಂತು ಎನ್ನುವ ಪ್ರಶ್ನೆ ಮೂಡುವುದಂತೂ ಸಹಜ. ಇಲ್ಲಿದೆ ಅದಕ್ಕೆ ಉತ್ತರ.

ರಷ್ಯನ್ ಪಾರ್ಟಿಯಲ್ಲಿ ಜ್ಞಾನೋದಯ
ಜಯಪ್ರಕಾಶ್ಗೆ ದೇಶ ಪ್ರೇಮ ಪ್ರದರ್ಶಿಸಲು ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ಸ್ಪೂರ್ತಿ ನೀಡಿದ್ದು ಗೋವಾದಲ್ಲಿ ನಡೆದ ರಷ್ಯನ್ ಪಾರ್ಟಿ.
ಜಯಪ್ರಕಾಶ್ ಶೆಟ್ಟಿ ಗೋವಾದಲ್ಲಿ ನಡೆದ ರಷ್ಯನ್ ಪಾರ್ಟಿಗೆ ಹೋಗಿದ್ದರು. ಅಲ್ಲಿ ಪಾರ್ಟಿಯ ಕೊನೆಯಲ್ಲಿ ರಷ್ಯಾದ ರಾಷ್ಟ್ರಗೀತೆಯನ್ನು ಹಾಡಲಾಯಿತು. ಈ ಸಂದರ್ಭ ನೆರೆದವರೆಲ್ಲಾ ರಷ್ಯನ್ ರಾಷ್ಟ್ರಗೀತೆಗೆ ಗೌರವ ನೀಡುವ ಸಲುವಾಗಿ ನಿಂತಿದ್ದರು. ಆದರೆ ಜಯಪ್ರಕಾಶ್ ಮಾತ್ರ ಕೂತಿದ್ದರು.
ಇದನ್ನು ಕಂಡ ರಷ್ಯಾದ ಒಬ್ಬ ವ್ಯಕ್ತಿ ಜಯಪ್ರಕಾಶ್ ಬಳಿ ಬಂದು ಅವರಿಗೆ ನಿಂತು ರಾಷ್ಟ್ರಗೀತೆಗೆ ಗೌರವ ಸೂಚಿಸಲು ಕೇಳಿಕೊಂಡನು. ಆಗ ಜಯಪ್ರಕಾಶ್ ಅವರಿಗೆ ದೇಶಭಕ್ತಿಯ ಅರಿವಾಯಿತಂತೆ.[ಜಲಸಂರಕ್ಷಣೆಯ ಸಂಕಲ್ಪ ಮಾಡಿದ ಉಡುಪಿಯ ಜೋಸೆಫ್]

ಆಲೋಚನೆಯೇ ಯಾತ್ರೆಗೆ ಮೂಲ
ದೇಶದ ಹಲವಾರು ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಭಾರತೀಯ ಹಲವಾರು ಲಕ್ಷ ಮಂದಿ ಉದ್ಯೋಗಿಗಳಾಗಿದ್ದಾರೆ. ಆದರೆ ಏಕೆ ಈ ಕಂಪನಿಗಳು ಭಾರತದ ಸ್ವಾತಂತ್ರ್ಯ ಹಾಗೂ ಗಣರಾಜ್ಯ ದಿವಸಕ್ಕೆ ರಜೆ ನೀಡುವುದಿಲ್ಲ ಎನ್ನುವ ಕುರಿತಾಗಿ ಆಲೋಚನೆಗಳು ಬರತೊಡಗಿತು ಎನ್ನುತ್ತಾರೆ ಜಯಪ್ರಕಾಶ್.

ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಆಶಿರ್ವಾದ
ಮಾರ್ಚ್ 25 ರಂದು ದಿವಾಕರ್ ಕುಂದರ್ ಹಾಗೂ ತಾರಾನಾಥ್ ಸುವರ್ಣ ತ್ರಿವರ್ಣ ಧ್ವಜವನ್ನು ಜಯಪ್ರಕಾಶ್ ಅವರಿಗೆ ನೀಡಿ ಕಾಲ್ನಡಿಗೆಗೆ ಚಾಲನೆ ನೀಡಿದ್ದಾರೆ. ಇದಲ್ಲದೆ ಪರ್ಯಾಯ ಶ್ರೀವಿಶ್ವತೀರ್ಥ ಸ್ವಾಮೀಜಿ ಜಯಪ್ರಕಾಶ್ ಅವರಿಗೆ 1,000 ರೂ ನೀಡಿ ಆಶೀರ್ವದಿಸಿದ್ದಾರೆ.

ಏಪ್ರಿಲ್ 14ಕ್ಕೆ ಮುಂಬೈ
ಜಯಪ್ರಕಾಶ್ ದಿನಕ್ಕೆ 50 ಕಿಲೋಮೀಟರ್ ಕಾಲ್ನಡಿಗೆಯಲ್ಲೇ ಕ್ರಮಿಸಿ ತಮ್ಮ ಗುರಿ ಹೊಂದಿರುವ ಮುಂಬೈಯ ಬೊರಿವ್ಲಿಗೆ ಏಪ್ರಿಲ್ 14 ರಂದು ತಲುಪಲಿದ್ದಾರೆ. ಜಯಪ್ರಕಾಶ್ ಶೆಟ್ಟಿ ಜನರಲ್ಲಿ ದೇಶಭಕ್ತಿಯ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಲಿ. ಹಾಗೆಯೇ ಅವರು ತಮ್ಮ ನಿರ್ದಿಷ್ಟ ಗುರಿ ಮುಟ್ಟುವಲ್ಲಿ ಯಶಸ್ವಿಯಾಗಲಿ ಎಂದು ಶುಭ ಹಾರೈಸೋಣ. ಆಲ್ ದ ಬೆಸ್ಟ್ ಜಯಪ್ರಕಾಶ್ .












Click it and Unblock the Notifications