ಉಡುಪಿ ಪುಟಾಣಿಯ ಈ ಮಾನವೀಯ ಕಳಕಳಿಗಿರಲಿ ಮೆಚ್ಚುಗೆ

ಉಡುಪಿ, ಮೇ 01: ಇಡೀ ದೇಶವೇ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿದೆ. ಬಡವರು ಸಹಾಯಕ್ಕಾಗಿ ಎದುರು ನೋಡುತ್ತಿದ್ದಾರೆ. ದಾನಿಗಳು ಉದಾರಿಗಳಾಗುತ್ತಿದ್ದಾರೆ. ಇಂಥ ಹೊತ್ತಲ್ಲೇ ಪುಟ್ಟ ಹೃದಯವೊಂದು ಬಡವರ ನೋವಿಗೆ ಸ್ಪಂದಿಸಿದೆ.

ಈಕೆ ಅನಮ್ ಅನೀಸ್. ಉಡುಪಿಯ ಸೇಂಟ್ ಸಿಸಿಲಿಯ 4ನೇ ತರಗತಿಯ ವಿದ್ಯಾರ್ಥಿನಿ. ತಾನು ಟ್ಯಾಬ್ ಖರೀದಿಸಲು ಇಟ್ಟ ಹಣವನ್ನು ಬಡವರಿಗಾಗಿ ಟ್ರಸ್ಟ್ ವೊಂದಕ್ಕೆ ನೀಡಿ ಮಾನವೀಯತೆ ಮೆರೆದಿದ್ದಾಳೆ ಈ ಪುಟ್ಟ ಹುಡುಗಿ.

Udupi Girl Gave Money To Help Poor Which She Kept For Buying Tab

ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ ಲಾಕ್ ಡೌನ್ ಆರಂಭವಾದ ದಿನದಿಂದ ನೆರವು ನೀಡುವ ಕೆಲಸದಲ್ಲಿ ತೊಡಗಿಕೊಂಡಿದೆ. ತಾನು ಇದುವರೆಗೂ ಕೂಡಿಟ್ಟಿದ್ದ 760 ರೂಪಾಯಿ ಅನ್ನು ಅಲ್ಲಿನ ಸಂಚಾಲಕರಿಗೆ ನೀಡಿ ಬಡವರ ಹಸಿವು ನೀಗಿಸಲು ನನ್ನ ಸಣ್ಣ ಕೊಡುಗೆ ಎಂದಿದ್ದಾಳೆ ಅನಮ್.

ಪುಟಾಣಿ ಹೃದಯದ ಈ ಮಾನವೀಯ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+