2000 ಕಾರ್ಮಿಕರನ್ನು ತವರಿಗೆ ಕಳಿಸಿಕೊಟ್ಟ ಉಡುಪಿ ಜಿಲ್ಲಾಡಳಿತ
ಉಡುಪಿ, ಏಪ್ರಿಲ್ 30: ಉಡುಪಿ ನಗರದಲ್ಲಿ ಸಿಕ್ಕಿಬಿದ್ದಿದ್ದ ಉತ್ತರ ಕರ್ನಾಟಕ ಭಾಗದ ಸಾವಿರಾರು ಸಂಖ್ಯೆಯ ಕೂಲಿಕಾರ್ಮಿಕರನ್ನು ಉಡುಪಿ ಜಿಲ್ಲಾಡಳಿತ, ಎರಡನೇ ಹಂತದಲ್ಲಿ ತವರಿಗೆ ಕಳುಹಿಸಿಕೊಟ್ಟಿದೆ.
ಸುಮಾರು 50ಕ್ಕೂ ಅಧಿಕ ಬಸ್ಸುಗಳಲ್ಲಿ 3600 ಕಾರ್ಮಿಕರನ್ನು ಊರಿಗೆ ಕಳುಹಿಸಲಾಗಿದ್ದು, ಇದರಲ್ಲಿ ಬಾಗಲಕೋಟೆ, ಕೊಪ್ಪಳ, ಕುಷ್ಟಗಿ, ಹಾವೇರಿ, ಗದಗ ಮೊದಲಾದ ಭಾಗಗಳ ಜನರು ಸೇರಿದ್ದಾರೆ. ಇವರು ಏಕಾಏಕಿ ಉಡುಪಿಯಿಂದ ಹೊರಟ ಕಾರಣ ಕಟ್ಟಡ ನಿರ್ಮಾಣ ರಸ್ತೆ ಕಾಮಗಾರಿ ಸೇರಿದಂತೆ ಹಲವಾರು ಅಭಿವೃದ್ಧಿ ಚಟುವಟಿಕೆಗಳು ಸ್ಥಗಿತಗೊಳ್ಳಲಿವೆ.
ಗ್ರೀನ್ ಝೋನ್ ಘೋಷಣೆಯಾದ ತಕ್ಷಣ ರಿಯಲ್ ಎಸ್ಟೇಟ್ ಉದ್ಯಮ ಚೇತರಿಸಿಕೊಳ್ಳಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಕಾರ್ಮಿಕರು ಮಾತ್ರ ನಮಗೆ ಕೆಲಸ ಬೇಡ, ಊರಿಗೆ ಕಳುಹಿಸಿಕೊಟ್ಟರೆ ಸಾಕು ಎಂದು ಜಿಲ್ಲಾ ಆಡಳಿತದ ಮುಂದೆ ಗೋಗರೆಯುತ್ತಿದ್ದಾರೆ. ಈ ಕೂಲಿ ಕಾರ್ಮಿಕರನ್ನು ಕಳೆದ ಎರಡು ತಿಂಗಳಿನಿಂದ ಜಿಲ್ಲಾಡಳಿತವೇ ಊಟೋಪಚಾರ ಕೊಟ್ಟು ನೋಡಿಕೊಳ್ಳುತ್ತಿತ್ತು.

ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ಇಂದು ಇವರೆಲ್ಲರನ್ನು ಬಸ್ಸು ಹತ್ತಿಸಿ ಕಳುಹಿಸಿಕೊಡಲಾಯಿತು. ಈ ಸಂದರ್ಭದಲ್ಲಿ ಸ್ಯಾನಿಟೈಸರ್ ಮತ್ತು ಮಾಸ್ಕ್ ನೀಡಲಾಗಿದ್ದು ಸಾಮಾಜಿಕ ಅಂತರ ಕಾಯ್ದುಕೊಂಡು ಊರಿಗೆ ತೆರಳುವಂತೆ ಸೂಚಿಸಲಾಗಿದೆ.












Click it and Unblock the Notifications