ದೀಪಾವಳಿ; ಹೆಚ್ಚು ಶಬ್ದ ಉಂಟು ಮಾಡುವ ಪಟಾಕಿ ಬಳಕೆ ನಿಷೇಧ
ಉಡುಪಿ, ಅಕ್ಟೋಬರ್ 19: ಮುಂಬರುವ ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾಡಳಿತ ಹೆಚ್ಚು ಮಟ್ಟದಲ್ಲಿ ಶಬ್ದವನ್ನು ಉಂಟು ಮಾಡುವ ಸುಡುಮದ್ದುಗಳ ಉತ್ಪಾದನೆ, ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಿದೆ. ಈ ಕುರಿತು ಜನರಿಗೆ ಪ್ರಕಟಣೆ ಮೂಲಕ ಮಾಹಿತಿ ನೀಡಲಾಗಿದೆ.
ಕೇಂದ್ರ ಸರ್ಕಾರವು ಜೋಡಿಸಲಾದ ಸುಡುಮದ್ದುಗಳನ್ನೊಳಗೊಂಡ (ಗಾರ್ಲ್ಯಾಂಡ್) 125 ಡಿ.ಬಿ (ಎ1) ಗಿಂತ ಹೆಚ್ಚು ಮಟ್ಟದಲ್ಲಿ ಶಬ್ದವನ್ನು ಉಂಟು ಮಾಡುವ ಸುಡುಮದ್ದುಗಳ ಉತ್ಪಾದನೆ, ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಿದ್ದು, ಇಂತಹ ಸುಡುಮದ್ದುಗಳ ಉತ್ಪಾದನೆ, ಮಾರಾಟ ಹಾಗೂ ಬಳಕೆಯು ಕಾನೂನು ಬಾಹಿರವಾಗಿರುತ್ತದೆ ಎಂದು ಹೇಳಿದೆ.

ಈ ನಿಯಮ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ದೀಪಾವಳಿ ಹಬ್ಬದ ಆಚರಣೆ ಸಮಯದಲ್ಲಿ ಪ್ರತಿಯೊಬ್ಬರೂ ಸುರಕ್ಷತೆಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಪಟಾಕಿಗಳನ್ನು ಲೈಸೆನ್ಸ್ ಹೊಂದಿರುವ ವಿಶ್ವಾಸಾರ್ಹ ಮರಾಟಗಾರರಿಂದ ಖರೀದಿಸಬೇಕು. ಸುಡುಮದ್ದುಗಳ ಬಳಕೆಯನ್ನು ಯಾವಾಗಲೂ ಒಬ್ಬ ವಯಸ್ಕ ಪರಿವೀಕ್ಷಿಸಬೇಕು. ಪಟಾಕಿಗಳ ಮೇಲೆ ನಮೂದಿಸಲಾದ ಸುರಕ್ಷಾ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಪಟಾಕಿಗಳನ್ನು ಹೊತ್ತಿಸಲು ಮೇಣದ ಬತ್ತಿ ಅಥವಾ ಅಗರ್‌ಬತ್ತಿಯನ್ನು ಉಪಯೋಗಿಸಬೇಕು.
ಪಟಾಕಿ ಹೊಡೆಯುವಾಗ ಎಚ್ಚರ; ಬೆಂಕಿಯನ್ನು ಮೊದಲ ಹಂತದಲ್ಲೇ ಆರಿಸಲು ಯಾವಾಗಲೂ ಕೈಗೆ ಎಟುಕುವಂತೆ ಒಂದು ಬಾಟಲಿನಲ್ಲಿ ನೀರನ್ನು ಇರಿಸಿಕೊಳ್ಳಬೇಕು. ಆಕಾಶದ ಸುಡುಮದ್ದುಗಳನ್ನು ಸುರಕ್ಷಿತವಾಗಿ ಕೆಳಗೆ ಬೀಳಬಹುದಾದ ವಲಯದಲ್ಲಿ ಉಪಯೋಗಿಸಬೇಕು ಹಾಗೂ ಸುಡುಮದ್ದುಗಳನ್ನು ಸೂಕ್ತ ರೀತಿಯಲ್ಲಿ ನೀರಿನಲ್ಲಿ ಅದ್ದುವ ಮೂಲಕ ವಿಲೇವಾರಿ ಮಾಡಬೇಕು.
ಪಟಾಕಿ ಸಿಡಿಸುವ ಜಾಗದಿಂದ 4 ಮೀಟರ್ ದೂರದಲ್ಲಿ 125 ಡಿ.ಬಿ(ಎ1) ಅಥವಾ 145 ಪಿ.ಕೆ ಗಿಂತ ಅಧಿಕ ಶಬ್ದವನ್ನು ಉಂಟುಮಾಡುವ ಸುಡುಮದ್ದುಗಳ ಉತ್ಪಾದನೆ, ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಲಾಗಿದ್ದು, ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯವರೆಗೆ ಶಬ್ದವನ್ನುಂಟು ಮಾಡುವ ಸುಡುಮದ್ದುಗಳನ್ನು ಸುಡಬಾರದು.
ಕೈಯಲ್ಲಿ ಹಿಡಿದಿರುವಾಗ ಪಟಾಕಿಗಳನ್ನು ಉರಿಸದೇ, ಅವುಗಳನ್ನು ಕೆಳಗಿಟ್ಟು ಹೊತ್ತಿಸಿ, ದೂರ ಹೀಗಬೇಕು. ಪಟಾಕಿಗಳನ್ನು ಹೊತ್ತಿಸಲು ಯಾವುದೇ ಧಾರಕ (ಪಾತ್ರೆ) ಗಳನ್ನು ಉಪಯೋಗಿಸಬಾರದು. ಮೇಲ್ಭಾಗದಲ್ಲಿ ತಡೆಗಳು ಇರುವಲ್ಲಿ, ಮರಗಳು, ಎಲೆಗಳು, ತಂತಿ ಇತ್ಯಾದಿಗಳು ಇರುವಲ್ಲಿ ಆಕಾಶದ ಸುಡುಮದ್ದುಗಳನ್ನು ಹೊತ್ತಿಸಬಾರದು.
ಪಟಾಕಿಗಳು ಬಾಗಿಲು, ಕಿಟಕಿ, ಇತ್ಯಾದಿಗಳ ಮೂಲಕ ಪ್ರವೇಶಿಸುವುದನ್ನು ತಡೆಯಲು ಆಕಾಶದ ಸುಡುಮದ್ದುಗಳನ್ನು ಕಟ್ಟಡಕ್ಕೆ ನಿಕಟವಾಗಿ ಹೊತ್ತಿಸಬಾರದು. ಇದು ಕಟ್ಟಡದೊಳಗೆ ಬೆಂಕಿಗೆ ಕಾರಣವಾಗಬಹುದು. ಸುಡುಮದ್ದುಗಳನ್ನು ಎಂದಿಗೂ ಮನೆಯೊಳಗೆ ಹಾಗೂ ಸಾರ್ವಜನಿಕರು ನಡೆದಾಡುವ ಭಾಗದಲ್ಲಿ ಉಪಯೋಗಿಸಬಾರದು.
ಪಟಾಕಿಗಳಿಂದ ಪ್ರಯೋಗ ಮಾಡುವುದಾಗಲೀ ಅಥವಾ ಸ್ವಂತವಾಗಿ ಸುಡುಮದ್ದುಗಳನ್ನು ತಯಾರು ಮಾಡಬಾರದು. ವಿಫಲವಾದ ಸುಡುಮದ್ದುಗಳನ್ನು ಪುನಃ ಉರಿಸದೇ, ಕೆಲವು ನಿಮಿಷಗಳ ಕಾಲ ವೀಕ್ಷಿಸಿ, ನಂತರ ಅವುಗಳನ್ನು ನೀರಿನಲ್ಲಿ ಅದ್ದಿ ವಿಲೇವಾರಿ ಮಾಡಬೇಕು.
ನಕಲಿ ಅಥವಾ ಕಾನೂನು ಬಾಹಿರವಾದ ಪಟಾಕಿಗಳನ್ನು ಉಪಯೋಗಿಸಬಾರದು. ಮಕ್ಕಳು ಸ್ವತಃ ಪಟಾಕಿಗಳನ್ನು ಬಳಸಲು ಅನುವು ಮಾಡಿಕೊಡದೇ ಪೋಷಕರು ಎಚ್ಚರಿಕೆ ವಹಿಸುವಂತೆ ಉಡುಪಿ ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.
ಕೆಲವು ದಿನಗಳ ಹಿಂದೆ ಅತ್ತಿಬೆಲೆಯ ಪಟಾಕಿ ಗೋಡಾನ್‌ನಲ್ಲಿ ನಡೆದ ದುರಂತದಲ್ಲಿ 16 ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಘಟನೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯ ಅಧಿಕಾರಿಗಳ ಸಭೆಯನ್ನು ನಡೆಸಿ ಹಲವಾರು ಸೂಚನೆಗಳನ್ನು ನೀಡಿದ್ದಾರೆ. ಪಟಾಕಿಗಳ ಸಂಗ್ರಹ, ಬಳಕೆ, ಮಾರಾಟದ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿದ್ದಾರೆ.
ರಾಜ್ಯದಾದ್ಯಂತ ಪ್ರತಿಯೊಂದು ಲೈಸೆನ್ಸ್‌ದಾರರ ಸ್ಥಳ ಪರಿಶೀಲನೆ ನಡೆಸಿ, ಲೋಪಗಳಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಎಕ್ಸ್‌ಪ್ಲೋಸಿವ್ ಆಕ್ಟ್‌ನಲ್ಲಿ ಲೈಸೆನ್ಸ್ ಕೊಡುವಾಗ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಜನರು ಜೀವ ಕಳೆದುಕೊಂಡಿದ್ದಕ್ಕೆ ಯಾರು ಹೊಣೆಗಾರರು?. ಎಲ್ಲ ಮಾನದಂಡಗಳನ್ನು ಪೂರೈಸಿದ್ದಾರೆಯೇ? ಎಂದು ನೋಡಬೇಕು ಬಳಿಕ ಲೈಸೆನ್ಸ್ ನೀಡಬೇಕು. ತಳಹಂತದ ಅಧಿಕಾರಿಗಳು ಸಲ್ಲಿಸಿದ ವರದಿ ಸರಿಯಿದೆಯೇ ಎಂದು ಜಿಲ್ಲಾಧಿಕಾರಿಗಳು ಪರಿಶೀಲಿಸಬೇಕು ಎಂದು ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದರು.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications