ಉಡುಪಿಯಲ್ಲಿ ಖಾಸಗಿ ಬಸ್ ನೌಕರನ ಬರ್ಬರ ಹತ್ಯೆ

ಉಡುಪಿ, ಜುಲೈ 12: ಇಬ್ಬರು ದುಷ್ಕರ್ಮಿಗಳು ನಿನ್ನೆ ತಡರಾತ್ರಿ ಖಾಸಗಿ ಬಸ್ ನೌಕರನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಬೈರಂಪಳ್ಳಿ ಎಂಬಲ್ಲಿ ಈ ಘಟನೆ ನಡೆದಿದೆ.

ಪ್ರಶಾಂತ್ ಪೂಜಾರಿ (35) ಕೊಲೆಯಾದವರು. ನಿನ್ನೆ ತಡರಾತ್ರಿ ಇಬ್ಬರು, ಪ್ರಶಾಂತ್ ಪೂಜಾರಿ ಮನೆಗೆ ಬಂದು ಜಗಳ ನಡೆಸಿದ್ದಾರೆ. ನಂತರ ಅವರನ್ನು ನಿರ್ಜನ ಪ್ರದೇಶವಾದ ದೂಪದಕಟ್ಟೆ ಕಡೆಗೆ ಕರೆದುಕೊಂಡು ಹೋಗಿ, ತಲವಾರ್ ನಿಂದ ಕಡಿದು ಹತ್ಯೆ ಮಾಡಲಾಗಿದೆ.

Two people murdered private bus worker in udupi

ಕೃತ್ಯ ಎಸಗಿದವರು ಬೈಕನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ತೆರಳಿ ತನಿಖೆ ಆರಂಭಿಸಿದ್ದಾರೆ. ಹಣಕಾಸಿನ ವಿಚಾರಕ್ಕೆ ಕೊಲೆ ನಡೆದಿರಬೇಕು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+