ಅತ್ರಾಡಿ ಬಳಿ ಕಾರು-ರಿಕ್ಷಾ ಅಪಘಾತ: ಇಬ್ಬರ ಸಾವು
ಉಡುಪಿ, ಮಾರ್ಚ್ 12: ಉಡುಪಿಯ ಅತ್ರಾಡಿಯ ಬಳಿ ಬುಧವಾರ ರಾತ್ರಿ ನಡೆದ ಅಪಘಾತದಲ್ಲಿ ರಿಕ್ಷಾ ಚಾಲಕ ಮತ್ತು ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
Recommended Video
Exclusive Interview with Minister Kota Srinivas Poojari | Fishery | Muzrai | Karnataka
ಉಡುಪಿಯ ಅತ್ರಾಡಿಯಿಂದ ಪ್ರಯಾಣಿಕರನ್ನು ಹಿರಿಯಡ್ಕಕ್ಕೆ ಬಿಟ್ಟು ಬರುತ್ತಿದ್ದ ರಿಕ್ಷಾಕ್ಕೆ ಪಾದಚಾರಿ ಅಡ್ಡ ಬಂದಿದ್ದಾನೆ. ಪಾದಚಾರಿಯನ್ನು ತಪ್ಪಿಸಲು ಹೋದ ರಿಕ್ಷಾಕ್ಕೆ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಪಾದಚಾರಿ ಮಾಧವ ಶೆಟ್ಟಿಗಾರ್ (60) ರಿಕ್ಷಾ ಗುದ್ದಿದ ಪರಿಣಾಮ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.

ನಂತರ ರಿಕ್ಷಾ ಚಾಲಕನ ಹತೋಟಿ ತಪ್ಪಿ ಅತ್ರಾಡಿಯಿಂದ ಹಿರಿಯಡ್ಕ ಕಡೆ ಹೋಗುತ್ತಿದ್ದ ಮಾರುತಿ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ. ರಿಕ್ಷಾ ಚಾಲಕ ಸಣ್ಣಕ್ಕಿಬೆಟ್ಟಿನ ವಸಂತಾ (28) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













Click it and Unblock the Notifications