ಕಾಮಗಾರಿ ಮುನ್ನ ಟೋಲ್ ಸಂಗ್ರಹ: ಇಂದು (ಫೆ. 13) ಉಡುಪಿ ಬಂದ್

Subscribe to Oneindia Kannada

ಉಡುಪಿ, ಫೆಬ್ರವರಿ 13: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾಮಗಾರಿ ಪೂರ್ಣಗೊಳಿಸದೇ ಹೆಜಮಾಡಿ, ಸಾಸ್ತಾನದಲ್ಲಿ ಟೋಲ್ ಸಂಗ್ರಹ ಮಾಡುವುದನ್ನು ವಿರೋಧಿಸಿ ಸೋಮವಾರ ಉಡುಪಿ ಜಿಲ್ಲಾ ಬಂದ್ ಗೆ ವಿವಿಧ ಸಂಘಟನೆಗಳು ಕರೆ ನೀಡಿವೆ. ಸೋಮವಾರ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ನಡೆಯಲಿದೆ.

ಬಂದ್ ಯಶಸ್ವಿಗಾಗಿ ರವಿವಾರ ಪಡುಬಿದ್ರಿಯ ಪಿಂಗಾರ ಸಭಾ ಭವನದಲ್ಲಿ ಕರೆದ ಬಂದ್ ಪೂರ್ವಭಾವಿ ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷದ ಮುಖಂಡರು, ಹಲವಾರು ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಟೋಲ್ ಹೋರಾಟಗಾರರು ಭಾಗವಹಿಸಿ ಬೇಡಿಕೆಗಳು, ಬಂದ್‌ನ ಸಿದ್ಧತೆಗಳ ಬಗ್ಗೆ ಚರ್ಚಿಸಿದರು.[ಟೋಲ್ ಎಫೆಕ್ಟ್: ಫೆ.11ರಂದು ಮಂಗಳೂರು-ತಲಪಾಡಿ ರಸ್ತೆ ಬಂದ್]

Toll collection issue: Bandh looms in Udupi on Monday

ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಕಳೆದ ಗುರುವಾರ ಮಧ್ಯರಾತ್ರಿಯಿಂದ ಟೋಲ್‌ಸಂಗ್ರಹಕ್ಕೆ ಮುಂದಾಗಿರುವುದನ್ನು ವಿರೋಧಿಸಿ ಶುಕ್ರವಾರ ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ಹೆಜಮಾಡಿ ಟೋಲ್ ಪ್ಲಾಜಾದ ಬಳಿ ಪ್ರತಿಭಟನೆ ನಡೆದಿತ್ತು. ಈ ಸಂದರ್ಭ ಕುಂದಾಪುರ ಉಪ ವಿಭಾಗಾಧಿಕಾರಿ ಶಿಲ್ಪಾ ನಾಗ್, ಉಡುಪಿ ತಹಶೀಲ್ದಾರ್ ಮಹೇಶ್ಚಂದ್ರ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದ್ದರು. ಪ್ರತಿಭಟನಾಕಾರರು ಟೋಲ್ ಸಂಗ್ರಹವನ್ನು ಸಂಪೂರ್ಣ ನಿಲ್ಲಿಸಬೇಕು ಎಂದು ಪಟ್ಟು ಹಿಡಿದ ಕಾರಣ ಸುಮಾರು 27 ಪ್ರತಿಭಟನಾಕಾರರನ್ನು ಎಎಸ್ಪಿ ವಿಷ್ಣುವರ್ಧನ್ ನೇತೃತ್ವದಲ್ಲಿ ಪೊಲೀಸರು ಬಂಧಿಸಿದ್ದರು. ಮಾತ್ರವಲ್ಲ ಬಂಧನದ ಬಳಿಕ ಟೋಲ್ ಸಂಗ್ರಹ ಮತ್ತೆ ಆರಂಭಿಸಲಾಯಿತು. ಇದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು ಸೋಮವಾರ ಜಿಲ್ಲಾ ಬಂದ್‌ಗೆ ಕರೆ ನೀಡಿದ್ದರು.[ಮಂಗಳೂರು: ತಲಪಾಡಿ ಟೋಲ್ ಗೇಟ್ ವಿರುದ್ಧ ರೊಚ್ಚಿಗೆದ್ದ ಜನ]

ಯಾವುದು ಸಿಗುತ್ತೆ..? ಸಿಗಲ್ಲ..?
ಮೂಲಭೂತ ಸೌಕರ್ಯಗಳು, ಹಾಲು, ಪತ್ರಿಕೆ, ಅಂಬುಲೆನ್ಸ್, ವೈದ್ಯಕೀಯ ಸೇವೆ, ಬೆಳಗ್ಗಿನ ಮುಂಬೈ- ಬೆಂಗಳೂರು ಬಸ್ಸುಗಳಿಗೆ ಬಂದ್‌ನಿಂದ ವಿನಾಯಿತಿ ನೀಡಲಾಗಿದೆ. ಎಲ್ಲಾ ಅಂಗಡಿ ಮುಗ್ಗಟ್ಟುಗಳು, ವಾಹನಗಳು, ಬಸ್ಸುಗಳು ಬಂದ್ ಆಗಲಿದೆ.

ಸೋಮವಾರ ಬೆಳಿಗ್ಗೆ 10 ಗಂಟೆ ಸುಮಾರು ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪಡುಬಿದ್ರಿಯ ಮುಖ್ಯ ಪೇಟೆಯಿಂದ ಹೆಜಮಾಡಿ ಟೋಲ್‌ಗೇಟ್ ವರೆಗೆ ಪಾದಯಾತ್ರೆ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಯಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Toll Virodhi Horata Samiti, who are opposing toll collection at the plazas at Hejmady and Sasthan in National Highway 66, called one day Udupi district bandh on Monday, February 13.
Please Wait while comments are loading...