• search
  • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಡುಪಿಯಲ್ಲಿ ಕೊರೊನಾ ಶಂಕೆ: 3 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

By ಉಡುಪಿ ಪ್ರತಿನಿಧಿ
|

ಉಡುಪಿ, ಮಾರ್ಚ್ 13: ಉಡುಪಿಯಲ್ಲಿ ಮೂವರು ಕೊರೊನಾ ಶಂಕಿತ ವಿದ್ಯಾರ್ಥಿಗಳು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಣಿಪಾಲ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದು, ಇಬ್ಬರೂ ಇತ್ತೀಚಿಗೆ ವಿದೇಶದಿಂದ ಬಂದಿದ್ದರು.

ಕೊರೊನಾ ಭೀತಿ: ಕೊಲ್ಲೂರು ಭಕ್ತರ ಮೇಲೆ ನಿಗಾ

ಒಬ್ಬ ವಿದ್ಯಾರ್ಥಿ ಅಮೆರಿಕಾ ಮತ್ತು ಇನ್ನೊಬ್ಬ ಕುವೈತ್, ಮತ್ತೊಬ್ಬ ಮಲೇಷ್ಯಾ ನಿಂದ ಬಂದ ವಿದ್ಯಾರ್ಥಿಳಾಗಿದ್ದಾರೆ. ಮೂವರಿಗೂ ಕೊರೊನಾದ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿಗಳನ್ನು ಯಥಾಪ್ರಕಾರ ಐಸೋಲೇಟೆಡ್ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ.

ಉಡುಪಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಸುಧೀರ್ ಚಂದ್ರ ಸೂಡಾ ಈ ಕುರಿತು ಮಾಹಿತಿ ನೀಡಿದ್ದು, ಮೂವರ ಗಂಟಲ ದ್ರಾವಣವನ್ನು ಹೆಚ್ಚಿನ ಪರೀಕ್ಷೆಗಾಗಿ ಬೆಂಗಳೂರಿಗೆ ರವಾನೆ ಮಾಡಲಾಗಿದೆ ಎಂದು ತಿಳಿಸಿದರು.

ಕೊರೊನಾ ಭೀತಿ: ಇರಾನ್ ನಿಂದ 120 ಭಾರತೀಯರು ಇಂದು ತಾಯ್ನಾಡಿಗೆ ವಾಪಸ್

ಎರಡು ದಿನದಲ್ಲಿ ವೈದ್ಯಕೀಯ ವರದಿ ಬರುವ ನಿರೀಕ್ಷೆ ಇದ್ದು, ವಿದ್ಯಾರ್ಥಿಗಳ ಮೂಲದ ಬಗ್ಗೆ ನಿಯಮದಂತೆ ವೈದ್ಯರು ಗೌಪ್ಯತೆ ಕಾಪಾಡಿದ್ದಾರೆ.

English summary
Three Corona suspects in Udupi have been admitted to KMC Hospital in Manipal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X