ವಿವಾದಕ್ಕೆ ಕಾರಣವಾಯ್ತು ಉಡುಪಿಯ ಈ ಮದುವೆ
ಉಡುಪಿ, ಮೇ 11:ಇತ್ತೀಚೆಗೆ ಉಡುಪಿಯಲ್ಲಿ ನಡೆದ ಮದುವೆಯೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ.ಮದುವೆಯ ದಿಬ್ಬಣದಲ್ಲಿ ಯಕ್ಷಗಾನ ಪಾತ್ರಧಾರಿಗಳ ಬಳಕೆ ಈಗ ವಿವಾದಕ್ಕೆ ಕಾರಣವಾಗಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಹಿಂದೆಲ್ಲಾ ಮದುವೆ ಮಂಟಪಕ್ಕೆ ವಧು- ವರರು ಮಾಮೂಲಿಯಾಗಿ ದಿಬ್ಬಣದ ಮೂಲಕ ಬರುವ ಸಂಪ್ರದಾಯ ಇತ್ತು. ಆದರೆ ಈಗ ಮದುವೆಗಳೆಲ್ಲಾ ಸಿಕ್ಕಾಪಟ್ಟೆ ಸ್ಟೈಲೀಷ್ ಆಗಿ, ಎಲ್ಲವೂ ಫಿಲ್ಮಿ ಸ್ಟೈಲ್ ತರ ನಡೆಯಬೇಕೆಂಬುದು ಇಂದಿನ ಯುವ ಮನಸ್ಸುಗಳ ಆಶಯ.
ಉಡುಪಿಯ ಕಿದಿಯೂರು ಹೋಟೆಲ್ ನಲ್ಲಿ ಇತ್ತೀಚೆಗೆ ನಡೆದ ಮದುವೆಯಲ್ಲಿ ಯಕ್ಷಗಾನ ವೇಷಧಾರಿಗಳೊಂದಿಗೆ ಆಗಮಿಸಿದ್ದರು. ದಿಬ್ಬಣದೊಂದಿಗೆ ವಧು ಯಕ್ಷಗಾನ ವೇಷಧಾರಿಗಳೊಂದಿಗೆ ಹೆಜ್ಜೆ ಹಾಕುತ್ತಾ ಬಂದಿದ್ದಾರೆ. ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.

ಬಡಗುತಿಟ್ಟು ವೇಷಧಾರಿಗಳ ಜೊತೆ ವಧು ಕುಣಿದರೆ, ವರ ನಾಚಿಕೊಂಡು ಪಕ್ಕದಲ್ಲೇ ನಡೆದು ಬರುತ್ತಿರುವ ದೃಶ್ಯವಿದೆ. ಚೆಂಡೆಯ ನಾದಕ್ಕೆ ತಕ್ಕಂತೆ ಶಾಸ್ತ್ರೀಯ ಯಕ್ಷಗಾನಕ್ಕೆ ವಧು ವೇಷಧಾರಿಗಳು ಹೆಜ್ಜೆ ಹಾಕಿದ್ದಾರೆ.
ಆದರೆ ಯಕ್ಷಗಾನ ವೇಷಧಾರಿಗಳ ಜೊತೆ ಮದುವೆ ದಿಬ್ಬಣ ಬಂದಿರೋದು ಇದೇ ಮೊದಲು. ಕರಾವಳಿಯ ಗಂಡುಕಲೆಯನ್ನು ಈ ರೀತಿ ಬಳಸಿದ್ದಕ್ಕೆ ಕೆಲ ಯಕ್ಷಪ್ರೇಮಿಗಳು ಮೂಗು ಮುರಿದಿದ್ದಾರೆ. ಕರಾವಳಿಯ ಯಕ್ಷಗಾನವನ್ನು ದಿಬ್ಬಣದಲ್ಲಿ ಬಳಸಿರುವುದರ ವಿರುದ್ದ ಆಕ್ರೋಶ ವ್ಯಕ್ತವಾಗಿದ್ದು ಚರ್ಚೆಗಳು ಆರಂಭಗೊಂಡಿವೆ.












Click it and Unblock the Notifications