ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ತವರೂರು ವಡ್ಡರ್ಸೆಯಲ್ಲಿ ಸೂತಕದ ಛಾಯೆ

|
Google Oneindia Kannada News

ಉಡುಪಿ, ಡಿಸೆಂಬರ್ 30: ಖಡಕ್ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಇಹಲೋಕ ತ್ಯಜಿಸಿದ್ದಾರೆ. ಭ್ರಷ್ಟ ಅಧಿಕಾರಿಗಳಿಗೆ ಸಿಂಹಸ್ವಪ್ನವಾಗಿದ್ದ ಮಧುಕರ್ ಶೆಟ್ಟಿ ಕೆಲಸದ ವಿಚಾರಕ್ಕೆ ಬಂದ್ರೆ ತಂದೆಯಷ್ಟೆ ನಿಷ್ಟುರವಾದಿ. ಚಿಕ್ಕ ವಯಸ್ಸಿನಲ್ಲೇ ಕರ್ನಾಟಕದ ಜನರ ಹೃದಯ ಗೆದ್ದ ದಕ್ಷ ಪೊಲೀಸ್ ಅಧಿಕಾರಿಯ ಅಂತ್ಯಸಂಸ್ಕಾರಕ್ಕೆ ಕುಟುಂಬಸ್ಥರು ಕಣ್ಣೀರಿಡುತ್ತಾ ಸಿದ್ಧತೆ ಮಾಡುತ್ತಿದ್ದಾರೆ.

ಹಿರಿಯ ಪತ್ರಕರ್ತ ದಿವಂಗತ ವಡ್ಡರ್ಸೆ ರಘುರಾಮ ಶೆಟ್ಟಿಯವರ ಸುಪುತ್ರ ಮಧುಕರ ಶೆಟ್ಟಿ. 1999ರ ಬ್ಯಾಚ್ ನ ಐಪಿಎಸ್ ಅಧಿಕಾರಿ ಇವರು. ಹುಟ್ಟಿದ್ದು ಬೆಂಗಳೂರು, ಬೆಳೆದದ್ದು ಮಂಗಳೂರು. ಪಿಜಿ ಮಾಡಿದ್ದು ಡೆಲ್ಲಿ. ಮಧುಕರ್ ಶೆಟ್ಟಿ ಸಾವಿನಿಂದ ತವರೂರಾದ ವಡರ್ಸೆಯಲ್ಲಿ ಕೂಡ ಸಾವಿನಿಂದ ಸೂತಕದ ಛಾಯೆ ಅವರಿಸಿದೆ.

ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ವಿಧಿವಶಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ವಿಧಿವಶ

ಮಧುಕರ್ ಶೆಟ್ಟಿ ಹಿರಿಯರ ಮನೆ ವಡರ್ಸೆ ಯಲ್ಲಿ ಸದ್ಯ ಯಾರು ವಾಸವಿಲ್ಲ. ತಂದೆ ವಡರ್ಸೆ ರಾಘುರಾಮ್ ಶೆಟ್ಟಿಯವರು ಕೂಡ ಮಂಗಳೂರು ಮತ್ತು ಬೆಂಗಳೂರಿನಲ್ಲಿ ವಾಸವಿದ್ದವರು. ಆದ್ರೆ ಅವರ ಮೂಲ ಮನೆ ವಡರ್ಸೆ ಹಾಗೂ ರಾಘುರಾಮ್ ಶೆಟ್ಟಿ ಖರೀದಿಸಿದ ಭೂಮಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಯಡಾಡಿ ಗ್ರಾಮದಲ್ಲಿ ಇದೆ.

ಭಾನುವಾರ ಉಡುಪಿಯಲ್ಲಿ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಅಂತ್ಯಕ್ರಿಯೆಭಾನುವಾರ ಉಡುಪಿಯಲ್ಲಿ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಅಂತ್ಯಕ್ರಿಯೆ

ವಡರ್ಸೆ ಗ್ರಾಮದ ನಿವಾಸಿ ವನಜ ಎಂಬವರು ಮಧುಕರ್ ಶೆಟ್ಟಿ ಬಾಲ್ಯವನ್ನು ನೆನಪು ಮಾಡಿಕೊಂಡು ಕಣ್ಣಿರು ಹಾಕಿದ್ದಾರೆ. ಹಲವು ವರ್ಷಗಳ ಹಿಂದೆ ವಡ್ಡರ್ಸೆ ರಾಘುರಾಮ್ ಶೆಟ್ಟಿ ಅವರ ಜೊತೆಗೆ ಮಕ್ಕಳನ್ನು ನೋಡಿಕೊಳ್ಳಲು ಬೆಂಗಳೂರಿಗೆ ತೆರಳಿದ್ದೆ ಎಂದು ವನಜ ಅವರು ನೆನಪು ಮಾಡಿಕೊಳ್ಳುತ್ತಾರೆ. " ಸುಮಾರು ವರ್ಷಗಳ‌ ಕಾಲ ಮಧುಕರ್ ಶೆಟ್ಟಿ ಅವರ ಆರೈಕೆ ಮಾಡಿದ್ದೇನೆ. ಕಣ್ಣ ಮುಂದೆ ಬೆಳೆದ ಮಗು ಈ ರೀತಿ ಮೃತಪಟ್ಟಿರುವುದು ದುಃಖ ತಂದಿದೆ. ತುಂಬಾ ಜನ ಪೊಲೀಸ್ ಅಧಿಕಾರಿಗಳು ಇದ್ದಾರೆ. ಆದರೆ ಇವರಷ್ಟು ಉತ್ತಮ ಹೆಸರು ಮಾಡಿದವರಿಲ್ಲ. ತಂದೆಯಂತೆ ಪ್ರಾಮಾಣಿಕರು, ಖಡಕ್ ಆಗಿದ್ದವರು.ಇದು ಸಾಯಿಯುವ ವಯಸ್ಸಲ್ಲ" ಎಂದು ದುಃಖ ತಪ್ತರಾಗಿ ನೆನಪು ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಕನಸಲ್ಲೂ ಕಾಡಿದ ಅಧಿಕಾರಿ

ಕನಸಲ್ಲೂ ಕಾಡಿದ ಅಧಿಕಾರಿ

ಉನ್ನತ ಸ್ಥಾನದಲ್ಲಿದ್ದು, ಜನ ಮೆಚ್ಚುವ ಕೆಲಸ ಮಾಡೋದು ಕಷ್ಟ. ಆದರೆ ಮಧುಕರ ಶೆಟ್ಟಿಇದಕ್ಕೆ ಅಪವಾದ. ಮಧುಕರ ಶೆಟ್ಟಿ ತನ್ನ ಪೊಲೀಸ್ ಸೇವೆಯಲ್ಲಿ ನಿಷ್ಟುರ ಮತ್ತು ಅಷ್ಟೇ ಜನಪರ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿಯಿಂದ ಹಿಡಿದು ಸಾಮಾನ್ಯ ಭ್ರಷ್ಟ ವ್ಯಕ್ತಿಗೂ ಕನಸಲ್ಲೂ ಕಾಡಿದ ಅಧಿಕಾರಿ.

ತಂದೆ ತಾಯಿಗಳ ಸಮಾಧಿ ಪಕ್ಕದಲ್ಲೇ

ತಂದೆ ತಾಯಿಗಳ ಸಮಾಧಿ ಪಕ್ಕದಲ್ಲೇ

ಮಧುಕರ್ ಶೆಟ್ಟಿ ಹುಟ್ಟೂರು ಯಡಾಡಿ ಯಲ್ಲಿ ಈಗ ನೀರವ ಮೌನ ಬಿಟ್ಟು ಮತ್ತೆ ಕೇಳಿಸಿದ್ದು ಜೆಸಿಬಿಯ ಘರ್ಜನೆ ಮಾತ್ರ. ಮಧುಕರ ಶೆಟ್ಟಿಯವರ ಮೃತದೇಹದ ಅಂತ್ಯಸಂಸ್ಕಾರಕ್ಕೆ ಮನೆಯ ಅಡಿಕೆ ತೋಟದಲ್ಲಿ ಸಿದ್ಧತೆ ನಡೆದಿದೆ. ತಂದೆ ತಾಯಿಗಳ ಸಮಾಧಿ ಪಕ್ಕದಲ್ಲೇ ಮಧುಕರ ಶೆಟ್ಟಿಯವರ ಚಿತೆಯನ್ನು ಸಿದ್ಧ ಮಾಡಲಾಗಿದೆ.. ಕುಟುಂಬಸ್ಥರು ಅಭಿಮಾನಿಗಳು ಗ್ರಾಮಸ್ಥರು ಸದ್ಯ ವಿಧಿವಿಧಾನದಲ್ಲಿ ತೊಡಗಿದ್ದಾರೆ.

ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಸಾವಿಗೆ ಗಣ್ಯರ ಕಂಬನಿಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಸಾವಿಗೆ ಗಣ್ಯರ ಕಂಬನಿ

ಅಂತಿಮ ದರ್ಶನ ಆರಂಭ

ಅಂತಿಮ ದರ್ಶನ ಆರಂಭ

ಸಮಾಜದಲ್ಲಿ ನೊಂದವರು, ದಲಿತರ ಬಗ್ಗೆ ಅತೀವ ಕಾಳಜಿಯಿದ್ದ ಮಧುಕರ ಶೆಟ್ಟಿಯವರ ಪಾರ್ಥಿವ ಶರೀರ ಮಂಗಳೂರು ಮೂಲಕ ರಾತ್ರಿ 12 ಗಂಟೆ ಸುಮಾರಿಗೆ ಹುಟ್ಟೂರು ತಲುಪಿತು. ಇಂದು ಮುಂಜಾನೆ ಬೆಳಗ್ಗೆ 7ಗಂಟೆಯಿಂದ ಅಂತಿಮ ದರ್ಶನದ ಆರಂಭವಾಗಿದೆ. .

ಮಧುಕರ ಶೆಟ್ಟಿ ಅವರಿಗೆ ಗೌರವ

ಮಧುಕರ ಶೆಟ್ಟಿ ಅವರಿಗೆ ಗೌರವ

ಡಿಜಿಪಿ ನೀಲಮಣಿ ರಾಜು ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು, ಜನಪ್ರತಿನಿಧಿಗಳು ಮಧುಕರ ಶೆಟ್ಟಿ ಅವರಿಗೆ ಗೌರವ ಸಲ್ಲಿಸಲಿದ್ದಾರೆ. ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದ್ದಾರೆ. ಅದಲ್ಲದೇ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ , ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರು ಅಂತಿಮ ದರ್ಶನ ಪಡೆದಿದ್ದಾರೆ.

ಸರ್ಕಾರದ ಉಡುಗೊರೆಯನ್ನೇ ನಿರಾಕರಿಸಿದ್ದ ಪ್ರಾಮಾಣಿಕ ಮಧುಕರ್ ಶೆಟ್ಟಿಸರ್ಕಾರದ ಉಡುಗೊರೆಯನ್ನೇ ನಿರಾಕರಿಸಿದ್ದ ಪ್ರಾಮಾಣಿಕ ಮಧುಕರ್ ಶೆಟ್ಟಿ

English summary
The last rites of Madhukar Sheety scheduled on december 30 in Yedyadi of Kundapura . His relatives , local people and police officials have already arrived to Yedyadi .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X