ಉಡುಪಿಯಲ್ಲಿ ಪೊಲೀಸ್ ಸ್ಟೂಡೆಂಟ್ಸ್ ಗಾಗಿ "ತೆರೆದ ಮನೆ' ಇದು!
ಉಡುಪಿ, ಫೆಬ್ರವರಿ 28: ಪೊಲೀಸರೆಂದರೆ ಸಮಾಜಕ್ಕೆ ಒಂದು ರೀತಿಯ ಗೌರವ. ಇದು ಸಹಜವೂ ಕೂಡ. ಇದರ ಜೊತೆಗೆ ಪೊಲೀಸರೆಂದರೆ ಲಾಠಿ, ಪಿಸ್ತೂಲು ಹಿಡಿದು ಕಾನೂನು ಸುವ್ಯವಸ್ಥೆ ಕಾಪಾಡುವವರು ಎಂಬ ಕಾರಣಕ್ಕೆ ಜನ ಪೊಲೀಸರಿಂದ ದೂರವೇ ಇರುತ್ತಾರೆ. ವಿದ್ಯಾರ್ಥಿಗಳಿಗೆ ಮತ್ತು ಯಂಗ್ ಸ್ಟರ್ ಗಳಿಗಂತೂ ಪೊಲೀಸರ ಬಗ್ಗೆ ಎಲ್ಲಿಲ್ಲದ ಕುತೂಹಲ.
ಇಂತಹ ಕುತೂಹಲ ತಣಿಸುವ ಸಲುವಾಗಿಯೇ ಉಡುಪಿ ಪೊಲೀಸರು ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರ ಹೆಸರು ತೆರೆದ ಮನೆ.
ಸಾರ್ವಜನಿಕರ ಜೊತೆ ಉತ್ತಮ ಸಂಪರ್ಕ ಬೆಳೆಸುವುದಕ್ಕೆ ಪೊಲೀಸ್ ಇಲಾಖೆ ಬೇರೆ ಬೇರೆ ಕಾರ್ಯಕ್ರಮ ರೂಪಿಸುತ್ತಲೇ ಇರುತ್ತದೆ. ಜನಸ್ನೇಹಿ ಆಗೋದಕ್ಕೆ ವರ್ಷದಲ್ಲಿ ಹಲವಾರು ಅಭಿಯಾನಗಳನ್ನು ಇಲಾಖೆ ನಡೆಸುತ್ತದೆ. ಉಡುಪಿಯಲ್ಲಿ ಪೊಲೀಸ್ ಇಲಾಖೆ "ತೆರೆದ ಮನೆ' ಅನ್ನುವ ವಿಭಿನ್ನ ಯೋಜನೆ ಆರಂಭಿಸಿದೆ.

ಪೊಲೀಸರು ಶಾಲಾ ಮಕ್ಕಳ ಜೊತೆ ಮತ್ತು ಮಕ್ಕಳು ಪೊಲೀಸ್ ಇಲಾಖೆಯ ಜೊತೆ ಬೆರೆಯೋದು ಈ ಯೋಜನೆಯ ಉದ್ದೇಶ. ಒಂದೊಂದು ಶಾಲೆಗೆ ಆಯಾ ಠಾಣಾ ವ್ಯಾಪ್ತಿಯ ಪೊಲೀಸರು ಹೋಗಿ ಇಲಾಖೆ ಬಗ್ಗೆ ಮಕ್ಕಳಿಗೆ ಮಾಹಿತಿ ಕೊಟ್ಟು, ಮಕ್ಕಳ ಮೂಲಕ ಸಮಾಜದ ಜೊತೆ ಇಲಾಖೆ ಬೆರೆಯುವ ಕಾನ್ಸೆಪ್ಟ್ ಇದಾಗಿದೆ.
ಮಣಿಪಾಲದ ಮಾಧವ ಕೃಪ ಶಾಲೆಗೆ ಮಣಿಪಾಲ ಪೊಲೀಸರು ಭೇಟಿ ನೀಡಿ ಸಂವಾದ ನಡೆಸಿದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪೊಲೀಸ್ ಇಲಾಖೆ, ಪೊಲೀಸ್ ಕೆಲಸದ ಬಗ್ಗೆ ತಮ್ಮ ಅನುಮಾನಗಳನ್ನು ಕ್ಲೀಯರ್ ಮಾಡಿಕೊಂಡರು.

ಈ ವೇಳೆ ಪೊಲೀಸ್ ನಾಯಿಗಳ ಪ್ರದರ್ಶನವೂ ನಡೆಯಿತು. ಅಧಿಕಾರಿಗಳು ಶ್ವಾನಗಳಿಗೆ ಕಲಿಸಿದ ಚಾಕಚಕ್ಯತೆ, ವಿಧ್ವಂಸಕ ಕೃತ್ಯಗಳನ್ನು ಶ್ವಾನಗಳು ಬಯಲಿಗೆಳೆಯುವ ಪ್ರಾತ್ಯಕ್ಷಿಕೆ ನಡೆಯಿತು. ನೂರಾರು ಮಕ್ಕಳು ಪೊಲೀಸರ ಜೊತೆ ಬೆರೆತು ಖುಷಿಪಟ್ಟರು.
ಸಮಾಜದಲ್ಲಿ ಅಪರಾಧ ಚಟುವಟಿಕೆಗಳು ನಡೆಯದಂತೆ ಶಾಲಾ ಮಕ್ಕಳನ್ನು ಬಳಸುವ ಯೋಚನೆ ಕೂಡಾ ಪೊಲೀಸರ ಬಳಿಯಲ್ಲಿದೆ. ಗಾಂಜಾ ಮತ್ತಿತರ ಅಮಲು ಸೇವನೆಯಿಂದ ಯುವ ಜನಾಂಗ ದಾರಿ ತಪ್ಪುತ್ತಿದ್ದು, ಅಕ್ರಮ ಅಡ್ಡೆಗಳ ಮಾಹಿತಿ ಸಂಗ್ರಹಿಸಲು ವಿದ್ಯಾರ್ಥಿಗಳೇ ಬೆಸ್ಟ್ ಎಂಬುದು ಪೊಲೀಸರ ಯೋಚನೆ.

ಈಗ ಮಕ್ಕಳ ಬಳಿ ಶಿಕ್ಷಕರು ಬಂದಿದ್ದು, ಮುಂದೆ ಪೊಲೀಸ್ ಠಾಣೆಗೆ ವಿದ್ಯಾರ್ಥಿಗಳು ಭೇಟಿ ಕೊಡಲಿದ್ದಾರೆ. ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ತೆರೆದ ಮನೆ ಕಾರ್ಯಕ್ರಮ ನಡೆಯಲಿದೆ. ಪೊಲೀಸರು ಮಾತ್ರ ಅಲ್ಲ, ಮಕ್ಕಳೂ ಕೂಡ ಅಕ್ರಮ ಚಟುವಟಿಕೆ ಮಾಡುವವರ ಜಾಲದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಿದ್ದಾರೆ.
-
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು












Click it and Unblock the Notifications