ಉಡುಪಿಯಾದ್ಯಂತ ಆಟಿ ಅಮಾವಾಸ್ಯೆ ಸಂಭ್ರಮ: ವಿಶೇಷ ಕಷಾಯ ಸೇವನೆ
ಉಡುಪಿ, ಜುಲೈ 20: ಆಷಾಢ ಅಮಾವಾಸ್ಯೆ ಎಂದರೆ ಕರಾವಳಿಯ ತುಳುವರ ಪಾಲಿಗೆ ಮಹತ್ವದ ದಿನ. ಈ ದಿವಸ ಮುಂಜಾನೆ ಎದ್ದು, ಹಾಲೆ ಮರದ ತೊಗಟೆಯ ಕಹಿಯಾದ ಕಷಾಯ ಕುಡಿದರೇನೇ ಈ ದಿನಕ್ಕೊಂದು ಸಾರ್ಥಕತೆ. ಆದರೆ ಯಾಕೆ ಈ ಕಷಾಯ ಕುಡಿಯುತ್ತಾರೆ? ಇದಕ್ಕೊಂದು ಹಿನ್ನೆಲೆ ಇದೆ.
Recommended Video
Drone Prathap ವಿರುದ್ಧ FIR ದಾಖಲು | Oneindia kannada
ತುಳುವರು ಆಟಿ ಎಂದು ಕರೆಯಲ್ಪಡುವ ಆಷಾಢ ಮಾಸದಲ್ಲಿ ವಿಪರೀತ ಮಳೆಯಾಗುತ್ತಿತ್ತು. ಮಳೆ ಎಂದ ಮೇಲೆ ಕೇಳಬೇಕೇ? ಮಳೆಯ ಜೊತೆಗೆ ಸಾಂಕ್ರಾಮಿಕ ರೋಗ, ರುಜಿನಗಳೂ ಸಹಜ. ಹಾಗಾಗಿ ರೋಗಗಳು ಬಾಧಿಸದೇ ಇರಲಿ ಎಂದು ತುಳುವರು ಹಾಲೆ ಮರದ ತೊಗಟೆಯ ಕಷಾಯ ಮಾಡಿ ಅಬಾಲವೃದ್ಧರಾದಿಯಾಗಿ ಎಲ್ಲರೂ ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿಯುತ್ತಾರೆ. ತಾವೂ ಕುಡಿದು ನೆರೆ ಹೊರೆಯವರಿಗೂ ಕಷಾಯ ಹಂಚುವುದು ವಾಡಿಕೆ.

ಹೀಗಾಗಿ ಇಂದು ಉಡುಪಿಯೆಲ್ಲೆಡೆ ಗ್ರಾಮೀಣ ಭಾಗದ ಜನರು ಮುಂಜಾನೆ ಎದ್ದು ಹಾಲೆ ಮರದ ಕಷಾಯ ಸೇವಿಸಿದರು. ಅತ್ಯಂತ ಕಹಿಯಾದ ಈ ಕಷಾಯ ಹಲವು ರೋಗಗಳಿಗೆ ಔಷಧ ಎಂದು ಇಲ್ಲಿನ ಜನ ಭಾವಿಸುತ್ತಾರೆ.

ಉಡುಪಿಯ ಹಲವೆಡೆಗಳಲ್ಲಿ ಇಂದು ಹಾಲೆ ಮರದ ತೊಗಟೆ ಸೀಳಿ ಕಷಾಯ ಮಾಡಿ ಕುಡಿಯುವ ದೃಶ್ಯ ಕಂಡು ಬಂತು.












Click it and Unblock the Notifications