ಉಡುಪಿ ಡಿಸಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸಿಂಪಲ್ ಮ್ಯಾರೇಜ್ ಸ್ಟೋರಿ

ಉಡುಪಿ, ಫೆಬ್ರವರಿ 26: ಇತ್ತೀಚೆಗಷ್ಟೇ ವ್ಯಾಲೆಂಟೈನ್ಸ್ ಡೇಯಂದು ದಾವಣಗೆರೆಯ ಜಿಲ್ಲಾಧಿಕಾರಿಯಾಗಿದ್ದ ಡಾ ಬಗಾದಿ ಗೌತಮ್ ಮತ್ತು ದಾವಣಗೆರೆ ಜಿಪಂ ಸಿಇಒ ಆಗಿದ್ದ ಅಶ್ವತಿ ದಾಂಪತ್ಯ ಜೀವನಕ್ಕೆ ಕಾಲಿರಿಸಿ ಸುದ್ದಿಯಾಗಿದ್ದರು. ಈಗ ರಾಜ್ಯದಲ್ಲಿ ಮತ್ತೊರ್ವ ಐಎಎಸ್ ಅಧಿಕಾರಿಗಳ ಮದುವೆ ಸದ್ದುಮಾಡಿದೆ. ಆದರೆ ಈ ವಿವಾಹ ಅತ್ಯಂತ ಸರಳವಾಗಿ ನಡೆದಿರುವುದು ವಿಶೇಷ.

ಉಡುಪಿಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಹೆಪ್ಸಿಬಾ ರಾಣಿ ಕೊರ್ಲಪಾಟಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಸಿದ್ದು, ಅವರು ಬಾಗಲಕೋಟೆಯ ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್‌ವಸತಿ ಹಾಗೂ ಪುನರ್‌ ನಿರ್ಮಾಣ ಆಯುಕ್ತ ಉಜ್ವಲ್ ಕುಮಾರ್‌ ಘೋಷ್‌ ಜೊತೆ ಸರಳ ವಿವಾಹವಾಗಿದ್ದಾರೆ.

ಉಜ್ವಲ್ ಕುಮಾರ್‌ ಘೋಷ್‌ ಪಶ್ಚಿಮ ಬಂಗಾಲ ಗಡಿಯಾದ ಸಾಹಿಬ್‌ಗಂಜ್ ನ ಬಂಗಾಲಿ ಮೂಲದವರು. 2008ರ ಬ್ಯಾಚ್ ನ ಐಎಎಸ್‌ ಅಧಿಕಾರಿ. ಆಂಧ್ರಪ್ರದೇಶ ವಿಜಯವಾಡ ಮೂಲದ ಕೊರ್ಲಪಾಟಿ 2011ರ ಬ್ಯಾಚ್ ಐಎಎಸ್‌ ಅಧಿಕಾರಿಯಗಿದ್ದಾರೆ.

Simple wedding of IAS officers

ಹುಬ್ಬಳ್ಳಿಯ ವಿವಾಹ ನೋಂದಣಿ ಕಚೇರಿಯಲ್ಲಿ ನಿನ್ನೆ ಕುಟುಂಬ ಸದಸ್ಯರು ಹಾಗೂ ಆಯ್ದ ಗಣ್ಯರ ಸಮ್ಮುಖದಲ್ಲಿ ಉಜ್ವಲ್ ಕುಮಾರ್‌ ಘೋಷ್‌ ಮತ್ತು ಹೆಪ್ಸಿಬಾ ರಾಣಿ ಕೊರ್ಲಪಾಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹಿರಿಯ ಐಎಎಸ್‌ ಅಧಿಕಾರಿಗಳಾದ ಆರ್‌. ವಿಶಾಲ್‌, ಪಿ.ಸಿ. ಜಾಫರ್, ಸುನಿಲ್‌ ಪನ್ವಾರ್, ಸುಶೀಲಾ ಈ ಮದುವೆಗೆ ಸಾಕ್ಷಿಗಳಾಗಿ ದಾಖಲೆಗೆ ಸಹಿ ಹಾಕಿದರು.

ಈ ಇಬ್ಬರು ಐಎಎಸ್ ಅಧಿಕಾರಿಗಳು ಒಂದು ತಿಂಗಳ ಹಿಂದೆಯೇ ನೋಂದಣಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಮದುವೆಗೆ ರಜೆ ತೆಗೆದುಕೊಂಡು ಬಂದು ವಿವಾಹವಾದ್ದಾರೆ. ಸರಳ ರೀತಿ ಯಲ್ಲಿ ಮದುವೆಯಾಗಬೇಕೆಂದಿದ್ದ ಈ ಇಬ್ಬರು ಅಧಿಕಾರಿಗಳು ಅದರಂತೆ ನಡೆದುಕೊಂಡಿದ್ದಾರೆ ಕೂಡ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+