ಮದ್ಯದ ಚಾಕೊಲೇಟ್ ತಯಾರಿಸಿ ಉಡುಪಿಯಲ್ಲಿ ಮನೆಮಾತಾದ ಶುಭಾ ರವೀಂದ್ರ
ಉಡುಪಿ, ನವೆಂಬರ್.07: "ಒಳಗೆ ಸೇರಿದರೆ ಗುಂಡು ಹುಡುಗಿಯಾಗುವಳು ಗಂಡು..." ಹಾಡು ಕೇಳದವರಿಲ್ಲ. ಗುಂಡು ಹಾಕದೇನೇ ಈ ಹಾಡೇ ಅಷ್ಟು ಅಮಲೇರಿಸುತ್ತದೆಯೆಂದರೆ ಇನ್ನು ಗುಂಡು ಹಾಕಿದರೆ ಹೇಗಿರುತ್ತದೆ. ಈಗ ಗುಂಡು ಹಾಕುವ ಮಾತು ಹಾಗಿರಲಿ, ಗುಂಡಿನಿಂದ ಚಾಕೊಲೇಟ್ ತಯಾರಾದರೆ ಹೇಗಿರುತ್ತದೆ ಎಂಬುದನ್ನು ಒಮ್ಮೆ ಯೋಚಿಸಿ...
ಹೌದು, ಇಂತಹದೊಂದು ಹೊಸ ಪ್ರಯತ್ನಕ್ಕೆ ಉಡುಪಿ ಬೈಲಕೆರೆಯ ನಿವಾಸಿ ಶುಭಾ ರವೀಂದ್ರ ಕೈ ಹಾಕಿದ್ದಾರೆ. ಆದರೆ ಇವರು ತಯಾರಿಸುವ ಮದ್ಯದ ಚಾಕೊಲೇಟ್ ತಿಂದರೆ ಅಮಲು ಮಾತ್ರ ಏರೋದಿಲ್ಲ.
ವೈನ್, ರಮ್ ಮಿಶ್ರಣ ಮಾಡಿರುವ ಈ ಚಾಕೊಲೇಟ್ ಗಳಿಗೆ ಈಗ ಭಾರೀ ಬೇಡಿಕೆ ಹೆಚ್ಚಿದ್ದು, ಮಣಿಪಾಲದ ಎಂಜೆಸಿ ಮೈದಾನದಲ್ಲಿ ಪವರ್ ವತಿಯಿಂದ ಮಣಿಪಾಲ್ ಪ್ಲೀ ಮಳಿಗೆಯಲ್ಲಿ ಇತ್ತೀಚೆಗೆ ನಡೆದ ಚಾಕೊಲೆಟ್ ವೈವಿಧ್ಯಗಳ ಪ್ರದರ್ಶನದಲ್ಲಿ ಈ ಚಾಕೊಲೇಟ್ ಗಳನ್ನು ಪ್ರದರ್ಶಿಸಲಾಗಿತ್ತು.
ಮದ್ಯ ಸುವಾಸನೆಯಿರುವ ಈ ಚಾಕೊಲೇಟ್ ಗಳನ್ನು ಖರೀದಿಸಿ ಬೈಟ್ ಸವಿಯಲು ಜನರು ಮುಗಿಬಿದ್ದಿದ್ದರು. ಗಂಡು ಹೆಣ್ಣೆನ ಬೇಧವಿಲ್ಲದೇ ಎಲ್ಲರನ್ನು ಚಾಕೊಲೇಟ್ ತನ್ನತ್ತ ಸೆಳೆದಿತ್ತು. ಅಂದಹಾಗೆ ಮದ್ಯ ಸುವಾಸನೆ ಬೀರುವ ಎಂಟು ಬಗೆಯ ಚಾಕೊಲೇಟ್ ಗಳನ್ನು ಶುಭಾ ರವೀಂದ್ರ ತಯಾರಿಸುತ್ತಾರೆ.
ಅಂದರೆ ಇದುವರೆಗೂ ರೆಡ್ ವೈನ್, ಓಡ್ಕಾ ವೆನಿಲ್ಲ, ಓಡ್ಕಾ ಆರೆಂಜ್, ಜಿನ್, ಓಡ್ಕಾ ಲೆಮೆಂಗ್ರಾಸ್, ವಿಸ್ಕಿ, ರಮ್ ರೈಸಿನ್ ಚಾಕೊಲೇಟ್ ಗಳನ್ನ ಶುಭಾ ತಯಾರಿಸಿದ್ದಾರೆ.

2 ಮಾದರಿಯ ಚಾಕೊಲೇಟ್
ಈ ಮದ್ಯದ ಚಾಕೊಲೇಟ್ ತಯಾರಿಕೆಯ ಬಗ್ಗೆ ಕುರಿತು ಒನ್ ಇಂಡಿಯಾ ಜೊತೆ ಮಾತನಾಡಿದ ಶುಭಾ ರವೀಂದ್ರ, ಈವರೆಗೆ 2 ಮಾದರಿಯ ಚಾಕೊಲೇಟ್ ಗಳನ್ನು ತಯಾರಿಸುತ್ತಿರುವುದಾಗಿ ತಿಳಿಸಿದ್ದಾರೆ. ಒಂದು ಸಾಫ್ಟ್ ಚಾಕೊಲೇಟ್, ಇನ್ನೊಂದು ಫಿಲ್ಲಿಂಗ್ ಚಾಕೊಲೇಟ್ .

ಫಿಲ್ಲಿಂಗ್ ಚಾಕೊಲೇಟ್
ಶುಭಾ ಸಾಫ್ಟ್ ಚಾಕೊಲೇಟ್ ಗಳನ್ನು ಸಾಮಾನ್ಯವಾಗಿ ಹಣ್ಣುಗಳನ್ನು ಬಳಸಿ ತಯಾರಿಸುತ್ತಾರಂತೆ. ಇದರಲ್ಲಿ ಮದ್ಯದ ಸಾರ ಇರುವುದಿಲ್ಲ. ಆದರೆ ಮದ್ಯದ ಘಮ ಮಾತ್ರ ಭಾರೀ ಜೋರಾಗಿರುತ್ತದೆ. ಇನ್ನೊಂದು ಫಿಲ್ಲಿಂಗ್ ಚಾಕೊಲೇಟ್. ಇದರಲ್ಲಿ ರಮ್ ಹಾಗು ವೈನ್ ಅನ್ನು ಚಾಕೊಲೇಟ್ ನಲ್ಲಿ ಫಿಲ್ ಮಾಡಲಾಗುತ್ತದೆ.

ಬೇರೆ ಬೇರೆ ಟೇಸ್ಟ್
ಫಿಲ್ಲಿಂಗ್ ಚಾಕೊಲೇಟ್ ಭಾರತದಲ್ಲಿ ಸಿಗೋದಿಲ್ಲ. ಪಾಶ್ಚಿಮಾತ್ಯ ದೇಶಗಳಲ್ಲಿ ಮಾತ್ರ ಸಿಗುತ್ತದೆ. ಅಲ್ಲಿಂದ ಬರುವವರು ಅದನ್ನು ನಮ್ಮ ಭಾರತಕ್ಕೆ ತರುತ್ತಾರೆ. ಆದರೆ ಅವರು ಈ ಚಾಕೊಲೇಟ್ ತಯಾರಿಸುವ ಬಗೆ ಬೇರೆ. ಆದರೆ ನಾನು ತಯಾರಿಸುವ ಬಗೆ ಬೇರೆಯಾದರೂ ಟೇಸ್ಟ್ ಮಾತ್ರ ಒಂದೇ ರೀತಿಯಲ್ಲಿ ಇರುತ್ತದೆ ಎನ್ನುತ್ತಾರೆ ಶುಭಾ ರವೀಂದ್ರ.

0.50ಎಂ. ಎಲ್. ಮದ್ಯ ಸಾರ
ವೈನ್, ರಮ್ ಬೆರೆಸಿದ ಬ್ಲೂ ಬೆರಿ, ಲಿಚಿ, ರಮ್ ಬೆರೆಸಿದ ಸ್ಟ್ರಾ ಬೆರಿ, ಬ್ಲ್ಯಾಕ್ ಕರೆಂಟ್ ಚಾಕೊಲೇಟ್ ನಲ್ಲಿ 0.50ಎಂ. ಎಲ್. ಮದ್ಯ ಸಾರವಿರುತ್ತದೆ ಅಷ್ಟೇ. ಆದರೆ ಮದ್ಯದ ಘಮ ಮಾತ್ರ ಜೋರಾಗಿರುತ್ತದೆ. ಆದರೆ ಮದ್ಯದ ಸಾರ, ಹನಿ ಪ್ರಮಾಣದಲ್ಲಿ ಬಳಕೆಯಾದ ಹಿನ್ನೆಲೆಯಲ್ಲಿ ಅಮಲಿನ ಪ್ರಶ್ನೆಯಿಲ್ಲ ಎನ್ನುತ್ತಾರೆ ಶುಭಾ ರವೀಂದ್ರ.

40 ರೂಪಾಯಿ ದರ ನಿಗದಿ
ಹಣ್ಣು ಹಾಗೂ ಒಣ ಖರ್ಜುರ, ದ್ರಾಕ್ಷಿ ಉಪಯೋಗಿಸಿ ಶುಭಾ ರವೀಂದ್ರ ಚಾಕೊಲೇಟ್ ತಯಾರಿಸುತ್ತಾರಂತೆ. ಒಣ ಹಣ್ಣುಗಳ ಚಾಕೊಲೇಟ್ ಗಳ ನಡುವೆ ಘಮ ಘಮಿಸುವ ಮದ್ಯ ಸುವಾಸನೆಯ ರುಚಿ ಬಲ್ಲವರು ಚಾಕೊಲೇಟ್ ಖರೀದಿಸುತ್ತಾರೆ. ಆದರೆ 18ಕ್ಕಿಂತ ಕೆಳಗಿನ ವಯಸ್ಸಿನವರಿಗೆ ಮದ್ಯ ಸುವಾಸನೆಯ ಚಾಕೊಲೇಟ್ ಮಾರೋದಿಲ್ಲ ಎನ್ನುತ್ತಾರೆ ಶುಭಾ ರವೀಂದ್ರ. ಒಂದು ಚಾಕೊಲೇಟ್ ಗೆ 40 ರೂಪಾಯಿ ದರ ನಿಗದಿ ಮಾಡಲಾಗಿದೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video











Click it and Unblock the Notifications