ಮೊದಲು ಪೇಟಿಎಂ ಬಳಸಿದ ಉಡುಪಿಯ ಸಾಲಿಗ್ರಾಮ ದೇಗುಲ

By: ಐಸ್ಯಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಉಡುಪಿ, ಡಿಸೆಂಬರ್ 10: ರಾಜ್ಯದಲ್ಲೇ ಮೊದಲ ಬಾರಿಗೆ ಉಡುಪಿ ಜಿಲ್ಲೆಯ ಸಾಲಿಗ್ರಾಮದ ಶ್ರೀಗುರುನರಸಿಂಹ ದೇವಸ್ಥಾನದಲ್ಲಿ ಕಾರ್ಡ್ ಸ್ವೈಪಿಂಗ್ ಮಷಿನ್, ಪೇಟಿಎಂ ವ್ಯವಸ್ಥೆ ಅಳವಡಿಸಲಾಗಿದೆ.

ಡಿಜಿಟಲ್ ಇಂಡಿಯಾ ಕಲ್ಪನೆಯನ್ನು ಸಾಕಾರಗೊಳಿಸುವತ್ತ ಹೆಜ್ಜೆ ಹಾಕಿದೆ. ಇದು ಚಿಲ್ಲರೆ ಸಮಸ್ಯೆ ಮುಕ್ತಗೊಳಿಸುವ ಜತೆಗೆ ದೇವರಿಗೆ ನಗದು ರಹಿತ ಸೇವೆ ಅಥವಾ ಕಾಣಿಕೆ ಸಲ್ಲಿಸುವ ಅವಕಾಶವನ್ನು ಭಕ್ತರಿಗೆ ನೀಡಲಿವೆ. ರಾಜ್ಯದಲ್ಲಿ ಮೊದಲ ಬಾರಿಗೆ ಡಿಜಿಟಲ್ ಮಾದರಿಯಲ್ಲಿ ಸೇವೆ ಸಲ್ಲಿಸುವತ್ತ ದೇವಾಲಯದಲ್ಲಿ ವ್ಯವಸ್ಥೆಯನ್ನು ಒದಗಿಸಲಾಗಿದೆ.[ಮಂಗಳೂರಿನ ಆಟೋಗಳಿಗೆ ಬಂತು ಪೇಟಿಎಮ್]

Shree Guru Narasimha Temple in Udupi offers paytm service for devotees

ಭಕ್ತರಿಗೇನು ಲಾಭ?
ಕೋಟ ಬ್ರಾಹ್ಮಣರ ಗುರು ಮಠವಾಗಿರುವ ಈ ದೇವಸ್ಥಾನಕ್ಕೆ ನಿತ್ಯ ಬಹುಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ನೋಟು ಅಮಾನ್ಯಗೊಂಡ ನಂತರ ಕ್ಷೇತ್ರದಲ್ಲಿ ಸೇವೆಗಳ ಪ್ರಮಾಣ ಕಡಿಮೆಯಾದ್ದರಿಂದ ಆಡಳಿತ ಮಂಡಳಿಯು ಪರ್ಯಾಯ ಮಾರ್ಗವಾಗಿ ಸ್ವೈಪಿಂಗ್ ಯಂತ್ರವನ್ನು ಅಳವಡಿಸಿಕೊಂಡಿದೆ. ಇದಲ್ಲದೆ ಪೇಟಿಎಂ ವ್ಯವಸ್ಥೆ ಕೂಡಾ ಅಳವಡಿಸಲಾಗಿದೆ. ಭಕ್ತರಿಗೆ ಅನುಕೂಲವಾಗುವಂತಹ ಈ ಹೊಸ ವ್ಯವಸ್ಥೆಯನ್ನು ಈ ದೇವಸ್ಥಾನದ ಆಡಳಿತ ಮಂಡಳಿ ಕೈಗೊಂಡಿದೆ.[ಪೇಟಿಎಂ ವಾಲೆಟ್ ಉಪಯೋಗಿಸುವುದು, ಹಣ ವರ್ಗಾವಣೆ ಹೇಗೆ?]

ಕಾರ್ಯನಿರ್ವಹಣೆಯ ವಿಶೇಷತೆ:
ಸ್ವೈಪಿಂಗ್ ಮಷಿನ್ ಮೂಲಕ ಡೆಬಿಟ್ ಮತ್ತು ಕ್ರೆಡಿಟ್ ಎರಡು ಕಾರ್ಡ್‌ಗಳನ್ನು ಬಳಸಲು ಅವಕಾಶವಿದೆ. ಪೇಟಿಎಂ ಸೇವೆಗೆ ಮೊಬೈಲ್ ಪ್ಲೇ ಸ್ಟೋರ್ ಮೂಲಕ ಪೇಟಿಎಂ ಆಪ್ ಡೌನ್ಲೋಡ್ ಮಾಡಿ , ಬ್ಯಾಂಕ್ ಖಾತೆಯಿಂದ ಪೇಟಿಎಂ ಖಾತೆಗೆ ಹಣ ವರ್ಗಾಯಿಸಬೇಕು. ನಂತರ ದೇವಸ್ಥಾನದಲ್ಲಿ ಅಳವಡಿಸಲಾಗಿರುವ ಪೇಟಿಎಂ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ದೇವರಿಗೆ ಸೇವೆ ಅಥವಾ ಕಾಣಿಕೆ ಸಲ್ಲಿಸಬಹುದಾಗಿದೆ.

ಖುಷಿಯ ವಿಷಯವೆಂದರೆ ಈಗಾಗಲೇ ಉಡುಪಿಯಲ್ಲಿ ಈ ವ್ಯವಸ್ಥೆ ಜಾರಿಗೆ ತಂದಿರುವುದಕ್ಕೆ ಭಕ್ತರು ಧನಾತ್ಮಕ ಸಮ್ಮತಿ ವ್ಯಕ್ತಪಡಿಸಿದ್ದಾರಲ್ಲದೆ, ಬೇರೆ ಬೇರೆ ಕಡೆಗಳಿಂದ ಬಂದ ಭಕ್ತರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Shree Guru Narasimha Temple in Udupi offers paytm facility to devotees with the vision of digital India. The temple is called to be first in implementing cashless transaction in the state.
Please Wait while comments are loading...