ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್ ಮನಸ್ಥಿತಿ ತೆರೆದಿಟ್ಟ ಮಣಿಶಂಕರ್ ಅಯ್ಯರ್: ಸಂಸದೆ ಕರಂದ್ಲಾಜೆ

|
Google Oneindia Kannada News

ಉಡುಪಿ, ಡಿಸೆಂಬರ್ 8: ಪ್ರಧಾನಿ ನರೇಂದ್ರ ಮೋದಿ ಅವರನ್ನು 'ನೀಚ' ಎಂದು ಸಂಭೋದಿಸಿದ ಕಾಂಗ್ರೆಸ್ ನ ಹಿರಿಯ ಮುಖಂಡ ಮಣಿಶಂಕರ್ ಅಯ್ಯರ್ ವಿರುದ್ಧ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಕುರಿತು ಉಡುಪಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಸಂಸದೆ ಶೋಭಾ ಕರಂದ್ಲಾಜೆ, ಈ ಮೂಲಕ ಕಾಂಗ್ರೆಸ್ ನ ಮನಸ್ಥಿತಿಯನ್ನು ಮಣಿಶಂಕರ್ ಅಯ್ಯರ್ ಸಾಬೀತು ಪಡಿಸಿದ್ದಾರೆ ಎಂದು ಕಿಡಿ ಕಾರಿದರು.

ಪ್ರಧಾನಿ ವಿರುದ್ಧ 'ನೀಚ' ಪದಬಳಕೆ, ಕ್ಷಮೆ ಕೋರಿದ ಮಣಿಶಂಕರ್ ಅಯ್ಯರ್ಪ್ರಧಾನಿ ವಿರುದ್ಧ 'ನೀಚ' ಪದಬಳಕೆ, ಕ್ಷಮೆ ಕೋರಿದ ಮಣಿಶಂಕರ್ ಅಯ್ಯರ್

ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೋದಿ ಅವರು ಜಾತಿಯಿಂದ ಹೀನರು ಅನ್ನೋ ಕಾರಣಕ್ಕೆ ನೀಚ ಅಂದಿದ್ದೀರಾ ಎಂದು ಆಕ್ರೋಶ ವ್ಯಕ್ತಪಟಿಸಿದ ಅವರು, ಮಣಿಶಂಕರ್ ಅಯ್ಯರ್ ಅವರ ಅಮಾನತು ಕಾಂಗ್ರೆಸ್ ನವರ ಕಣ್ಣೊರೆಸುವ ತಂತ್ರ ಎಂದು ಟೀಕೆ ಮಾಡಿದರು.

Shobha Karandlaje slams Congress on Aiyar's 'neech aadmi' statement

ಬಡ ಹಿಂದುಳಿದ ಜಾತಿಯವರು ಪ್ರಧಾನಿ ಆದರೆ ನೀಚ ಅಂತೀರಿ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ ಅವರು, ಇದು ಕಾಂಗ್ರೆಸ್ ಗೆ ಬಹಳ ದುಬಾರಿ ಆಗಲಿದೆ. ಗುಜರಾತ್ ಜನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸರಿಯಾದ ಪಾಠ ಕಲಿಸುತ್ತಾರೆ ಎಂದು ಅವರು ಹೇಳಿದರು.

ಕಾಂಗ್ರೆಸ್ಸಿನಿಂದ ಮಣಿಶಂಕರ್ ಅಯ್ಯರ್ ಅಮಾನತುಕಾಂಗ್ರೆಸ್ಸಿನಿಂದ ಮಣಿಶಂಕರ್ ಅಯ್ಯರ್ ಅಮಾನತು

ವಂಶಾಡಳಿತ ರಾಜಕಾರಣಕ್ಕೆ, ಕಾಂಗ್ರೆಸ್ ನವರಿಗೆ ದೇಶವನ್ನು ಬರೆದುಕೊಟ್ಟಿಲ್ಲ. ಅಧಿಕಾರ ಇಲ್ಲದ ಕಾರಣ ಕಾಂಗ್ರೆಸ್ ನ ಚಡಪಡಿಕೆ ಗೊತ್ತಾಗುತ್ತಿದೆ ಎಂದು ಅವರು ಕುಟುಕಿದರು.

English summary
Statement made by senior Congress leader Manishankar Aiyar, calling Prime Minister Narendra Modi a “neech aadmi”, it shows the Congress mind set said by MP Shobha Karandlaje in Udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X