ಸಾಗರದ ಪ್ರೇಮಿಗಳಿಗೆ ಕುಂದಾಪುರದಲ್ಲಿ ನಿಖಾ

ಉಡುಪಿ, ಸೆಪ್ಟೆಂಬರ್ 11: ಕಳೆದ ಒಂದೂವರೆ ವರ್ಷಗಳಿಂದ ಪರಸ್ಪರ ಪ್ರೇಮಿಸುತ್ತಿದ್ದ ಮುಸ್ಲಿಂ‌ ಜೋಡಿಯೊಂದು ಮನೆಯವರ ವಿರೋಧದ ಹಿನ್ನೆಲೆಯಲ್ಲಿ ಕುಂದಾಪುರದಲ್ಲಿ ವಿವಾಹವಾಗಿದ್ದಾರೆ.

ಸಾಗರದ ಸುಮಯ್ಯಬಾನು ಹಾಗೂ ರೆಹಮತ್ ಎಂಬುವರು ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ ಯುವಕನ ಮನೆಯವರಿಗೆ ಇದು ಇಷ್ಟವಿರಲಿಲ್ಲ. ಇದರಿಂದಾಗಿ ಯುವಕ ರೆಹಮತ್ ಹಾಗೂ ಯುವತಿ ಸುಮಯ್ಯಬಾನು ಕುಂದಾಪುರದ ಮಹಿಳಾ ಸಾಂತ್ವನ ಕೇಂದ್ರಕ್ಕೆ ಆಗಮಿಸಿ ಮದುವೆ ಮಾಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

Shivamogga Lovers Married In Kundapur

ಮಹಿಳಾ ಸಾಂತ್ವನ ಕೇಂದ್ರದ ಅಧ್ಯಕ್ಷೆ ರಾಧಾದಾಸ್ ಕುಂಭಾಶಿ ಯುವತಿಯ ತಾಯಿ, ಮಾವ ಹಾಗೂ ಮಸೀದಿಯ ದರ್ಮಗುರುಗಳನ್ನು ಕುಂದಾಪುರಕ್ಕೆ ಕರೆಯಿಸಿಕೊಂಡು ಮಾತುಕತೆ ನಡೆಸಿದರು. ಬಳಿಕ ಪುರಸಭೆಯ ಸದಸ್ಯರಾದ ಮಹಮ್ಮದ್ ಅಬು ಅವರ ಸಹಭಾಗಿತ್ವದಲ್ಲಿ ಪ್ರೇಮಿಗಳು ಹಾರ ಬದಲಾಯಿಸಿಕೊಂಡರು. ಬಳಿಕ ರಾತ್ರಿ ಎಂಟು ಗಂಟೆಗೆ ಮಸೀದಿಯಲ್ಲಿ ಮುಸ್ಲಿಂ ಸಂಪ್ರದಾಯದಂತೆ ನಿಖಾ ನಡೆಯಿತು.‌ ಮಹಿಳಾ ಸಾಂತ್ವನ‌ ಕೇಂದ್ರದ ವತಿಯಿಂದ ತಾಳಿ ಸರವನ್ನು ಉಡುಗೊರೆಯಾಗಿ ನೀಡಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+