• search

ಭೂಮಾಫಿಯಾ, ಅಷ್ಟಮಠದ ಡೀಲ್, ಮದ್ಯ, ಮಾನಿನಿ- ಶ್ರೀಗಳ ಸಾವಿಗೆ ಕಾರಣಯಾವುದು?

By ಉಡುಪಿ ಪ್ರತಿನಿಧಿ
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಉಡುಪಿ, ಜುಲೈ 21: ಶೀರೂರು ಶ್ರೀಗಳ ಸಾವಿನ ನಂತರ ಹೊರಬರುತ್ತಿರುವ ಆಡಿಯೋ,ವ ವಿಡಿಯೋ ಕ್ಲಿಪ್‌ಗಳು ಅವರ ಸಾವಿನ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕುತ್ತಿವೆ.

  ಶೀರೂರು ಶ್ರೀಗಳ ಸಾವಿನ ನಂತರ ಲೀಕ್ ಆಗಿರುವ ಹಲವು ವಿಡಿಯೋಗಳು, ಆಡಿಯೋಗಳು ಶ್ರೀಗಳ ಸಾವಿಗೆ ಹೊಸ ಅರ್ಥಗಳನ್ನು, ಆಯಾಮಗಳನ್ನು ಕೊಡುತ್ತಿವೆ.

  ಶೀರೂರು ಶ್ರೀಗಳ ಸಾವಿನ ಹಿಂದೆ ಮಹಿಳೆಯ ನೆರಳು?: ತನಿಖೆ

  ಇದೀಗ ಶ್ರೀಗಳು ಮಾತನಾಡಿದ್ದು ಎನ್ನಲಾದ ಆಡಿಯೋ ಕ್ಲಿಪ್ ಒಂದು ಕರವಳಿಯಲ್ಲಿ ಸದ್ದು ಮಾಡುತ್ತಿದ್ದು, ಸವಿಗೂ ಮುನ್ನಾ ಕೋಟ್ಯಂತರ ಹಣದ ಡೀಲ್ ಒಂದು ನಡೆದಿತ್ತಾ, ಈ ಡೀಲ್‌ನಿಂದಲೇ ಶ್ರೀಗಳ ಪ್ರಾಣ ಹೋಗಿದೆಯಾ ಎಂಬ ಅನುಮಾನ ಮೂಡುತ್ತಿದೆ.

  ಅಜ್ಜರಿಗೆ ಒಂದು ಕೋಟಿ

  ಅಜ್ಜರಿಗೆ ಒಂದು ಕೋಟಿ

  ಆಡಿಯೋನಲ್ಲಿ ಶ್ರೀಗಳು, 'ಅಜ್ಜರಿಗೆ ಒಂದು ಕೋಟಿ ಕೊಟ್ರೆ ಮ್ಯಾಟರ್ ಫಿನಿಶ್ ಆಗುತ್ತೆ... ಐವತ್ತು ಲಕ್ಷ ಪಲಿಮಾರು ಸ್ವಾಮೀಜಿಗೆ... ಐವತ್ತು ಲಕ್ಷ ಅವರಿಗೆ ಕೊಡಬೇಕಂತೆ ಎಂದು ಮಾತನಾಡಿದ್ದಾರೆ. ಆಡಿಯೋನಲ್ಲಿ ತುಳುವಿನಲ್ಲಿ ಶ್ರೀಗಳು ಮಾತನಾಡಿದ್ದಾರೆ.

  ಕಾರು ದೂರ ನಿಲ್ಲಿಸಿ ಶೀರೂರು ಶ್ರೀಗಳಿಗೆ ಊಟ ತರುತ್ತಿದ್ದ ಮಹಿಳೆ ಯಾರು?

  ಪೇಜಾವರ ಶ್ರೀಗಳನ್ನು ಅಜ್ಜರು ಎನ್ನುತ್ತಾರೆ

  ಪೇಜಾವರ ಶ್ರೀಗಳನ್ನು ಅಜ್ಜರು ಎನ್ನುತ್ತಾರೆ

  ಹಿರಿಯರಾದ ಪೇಜಾವರ ಶ್ರೀಗಳನ್ನು ಅಜ್ಜರು ಎಂದು ಕರೆಯುವ ರೂಢಿ ಇದೆ. ಆಡಿಯೋ ಕ್ಲಿಪ್‌ನಲ್ಲಿ ಸೋದೆ ಸ್ವಾಮೀಜಿ ವಿಶ್ವವಲ್ಲಭ ತೀರ್ಥರ ಹೆಸರು ಉಲ್ಲೇಖಿಸಿ..ಅವರ ಎಂಟು ಸಾವಿರ ಭಕ್ತರಿಂದ ಪ್ರತಿ ಮನೆಯಿಂದ ಒಂದು ಪವನ್ ಚಿನ್ನ ಕೊಡ್ತಾರಂತೆ ಎಂಬ ಅಸ್ಪಷ್ಟ ಮಾಹಿತಿ ಇದೆ.

  ಉಡುಪಿ: ಶಿರೂರು ಶ್ರೀಗಳ ಸಾವಿನ ಹಿಂದೆ ಲ್ಯಾಂಡ್ ಮಾಫಿಯಾ?

  ಆಡಿಯೋ ಪರೀಕ್ಷಿಸಿದರೆ ಸುಳಿವು

  ಆಡಿಯೋ ಪರೀಕ್ಷಿಸಿದರೆ ಸುಳಿವು

  ಯಾವ ಸಂದರ್ಭದಲ್ಲಿ ಯಾರಿಗೆ ಈ ಆಡಿಯೋ ಕಳುಹಿಸಿದ್ದಾರೋ ಗೊತ್ತಿಲ್ಲ. ಆದರೆ ಪಟ್ಟದ ದೇವರನ್ನು ಮರಳಿ ನೀಡುವ ವಿಚಾರದಲ್ಲಿ ವ್ಯವಹಾರ ಮಾತುಕತೆ ನಡೆದಿತ್ತಾ ಅನ್ನೋ ಸಂಶಯವಂತೂ ಆಡಿಯೋ ಕ್ಲಿಪ್ ಕೇಳಿದ ನಂತರ ಮೂಡದೇ ಇರದು.

  ಪಟ್ಟದ ದೇವರ ವಾಪಾಸ್ ಪಡೆಯಲು ಡೀಲ್ ಮಾಡಿದ್ದರಾ ಅಥವಾ ಯಾವುದೊ ಮಹತ್ವದ ಯೋಜನೆಗೆ ಹಣ ಸಂಗ್ರಹಿಸುವ ಬಗ್ಗೆ ನಡೆದ ಮಾತುಕತೆಯೋ ಸ್ಪಷ್ಟವಾಗಿಲ್ಲ. ಆಡಿಯೊದ ಮೂಲ ತನಿಖೆ ಮಾಡಿದರೆ ಸಾಕಷ್ಟು ವಿಚಾರ ಬೆಳಕಿಗೆ ಬರಬಹುದು.

  ಶ್ರೀಗಳಿಗೆ ಭೂಮಾಫಿಯಾ ನಂಟು

  ಶ್ರೀಗಳಿಗೆ ಭೂಮಾಫಿಯಾ ನಂಟು

  ಆಡಿಯೋ ಕ್ಲಿಪ್ ನಂತರ ವಿಡಿಯೋ ಕ್ಲಿಪ್ ಒಂದು ಸಹ ವೈರಲ್ ಆಗಿದ್ದು, ಅದರ ಪ್ರಕಾರ ಶ್ರೀಗಳಿಗೆ ಭೂಮಾಫಿಯಾ ನಂಟೂ ಇತ್ತಾ, ಶ್ರೀಗಳ ಸಾವಿಗೆ ಭೂ ಮಾಫಿಯಾವೂ ಕಾರಣವಾ ಎಂಬ ಅನುಮಾನ ಮೂಡುತ್ತದೆ.

  ಮದ್ಯ, ಮಾನಿನಿ ಪೈಕಿ ಶೀರೂರು ಶ್ರೀ ಪ್ರಾಣ ತೆಗೆದದ್ದು ಯಾವುದು?

  ಬಿಲ್ಡರ್‌ಗಳಿಂದ ಶ್ರೀಗಳಿಗೆ ಮೋಸ

  ಬಿಲ್ಡರ್‌ಗಳಿಂದ ಶ್ರೀಗಳಿಗೆ ಮೋಸ

  ಸ್ವಾಮೀಜಿಗಳಿಗೆ ಕೋಟ್ಯಂತರ ರುಪಾಯಿ ಹಣ ಬರುವುದಿತ್ತು. ಕೆಲ ಬಿಲ್ಡರ್ ಗಳು ,ಉದ್ಯಮಿಗಳು ಅವರಿಂದ ಸಾಲ ಪಡೆದಿದ್ದರು ಎನ್ನಲಾಗಿದ್ದು. ಮೋಸ ಮಾಡಿದ ಉದ್ಯಮಿಗಳ ವಿರುದ್ದ ದೈವಕ್ಕೆ ದೂರು ನೀಡಿದ್ದ ಶೀರೂರು ಸ್ವಾಮೀಜಿ, ಆದಷ್ಟು ಬೇಗ ಹಣ ಮರಳಿಸುವಂತೆ ಮಾಡು ದೈವ ಎಂದು ಪ್ರಾರ್ಥಿಸಿದ್ದರು.

  ಉದ್ಯಮಿ ಶಿಷ್ಯರಿಂದ ಶ್ರೀಗಳಿಗೆ ಕೋಟ್ಯಂತರ ಮೋಸ

  ಉದ್ಯಮಿ ಶಿಷ್ಯರಿಂದ ಶ್ರೀಗಳಿಗೆ ಕೋಟ್ಯಂತರ ಮೋಸ

  ಇಬ್ಬರು ಉದ್ಯಮಿ ಶಿಷ್ಯರಿಂದ ನನಗೆ ಮೋಸವಾಗಿದೆ. ಒಬ್ಬ 12 ಕೋಟಿ, ಇನ್ನೊಬ್ಬ 14 ಕೋಟಿ ವಂಚನೆ ಮಾಡಿದ್ದಾನೆ ಅಂತ ಸ್ವಾಮೀಜಿ ದೈವದ ಬಳಿ ಹೇಳಿಕೊಂಡಿದ್ದರು. ಹಣ ತರಿಸಿಕೊಡಲು ಕೋಟಿ ಚೆನ್ನಯರ ಮೊರೆ ಹೋಗಿದ್ದ ಸ್ವಾಮೀಜಿ ಕುರಿತ ವಿಡಿಯೋ ,ಸಾವಿನ ನಂತರ ವೈರಲ್ ಆಗಿದೆ.

  ಕುಡಿಯುತ್ತಿದ್ದರಾ ಶ್ರೀಗಳು?

  ಕುಡಿಯುತ್ತಿದ್ದರಾ ಶ್ರೀಗಳು?

  ಶೀರೂರು ಶ್ರೀ ಸಾವು ಲಿವರ್ ಸಮಸ್ಯೆಯಿಂದಾಗಿ ನಡದಿರುವ ಸಾಧ್ಯತೆ ಇದೆ ಅಂತ ಸ್ವಾಮಿಗಳ ಅಪ್ತ ಬಳಗ ಶಂಕೆ ವ್ಯಕ್ತಪಡಿಸಿದೆ. ಸ್ವಾಮೀಜಿ ಸಾಕಷ್ಟು ಕುಡಿಯುತ್ತಿದ್ದರು. ಹೀಗಾಗಿ ಅವರಿಗೆ ಲಿವರ್ ಸಮಸ್ಯೆ ಸಹಿತ ಅನೇಕ ಕಾಯಿಲೆಗಳಿದ್ದಿರಬಹುದು ಎಂದು ನಿನ್ನೆ ಸ್ವತಃ ಪೇಜಾವರ ಶ್ರೀಗಳೇ ಹೇಳಿದ್ದರು.

  ಕುಡಿತದಿಂದ ಹೋಯಿತಾ ಶ್ರೀಗಳ ಪ್ರಾಣ?

  ಕುಡಿತದಿಂದ ಹೋಯಿತಾ ಶ್ರೀಗಳ ಪ್ರಾಣ?

  ಈಗ ಶೀರೂರು ಸ್ವಾಮಿಗಳ ಆಪ್ತರು ಮಾತಾಡಿರೋ ಸಂಭಾಷಣೆ ಸಾಕಷ್ಟು ಸಂಶಯಗಳಿಗೆ ಕಾರಣವಾಗಿದೆ. ಶೀರೂರು ಶ್ರೀಗಳ ಶಿಷ್ಯರಿಬ್ಬರು ಮಾತನಾಡಿರುವ ಆಡಿಯೋ ಅದಾಗಿದ್ದು ಅದರಲ್ಲಿ ಶ್ರೀಗಳು ಕುಡಿತಕ್ಕೆ ದಾಸರಾಗಿದ್ದರು, ಈ ಹಿಂದೆಯೂ ಕುಡಿತದಿಂದಾಗಿ ಅನಾರೋಗ್ಯಕ್ಕೆ ಒಳಗಾಗಿದ್ದರು ಎಂದು ಮಾತನಾಡುವುದು ದಾಖಲಾಗಿದೆ.

  ಶಿಷ್ಯರ ಮಾತು ಹೀಗಿದೆ

  ಶಿಷ್ಯರ ಮಾತು ಹೀಗಿದೆ

  ಶಿಷ್ಯರ ಮಾತು ಹೀಗಿದೆ. 'ಎರಡು ತಿಂಗಳ ಹಿಂದೆ ಶಿರೂರು ಶ್ರೀ ಖಾಸಗಿ ಆಸ್ಪತ್ರೆ ಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆಗ ಅವರಿಗೆ 9 ಸಾವಿರ ರೂಪಾಯಿಯ ಇಂಜೆಕ್ಷನ್ ನೀಡಲಾಗುತ್ತಿತ್ತು. ಕುಡಿತ ಬಿಟ್ಟರೆ ಮೂರು ವರ್ಷ ಬದುಕಿ ಉಳಿಯುತ್ತಾರೆ ಎಂದು ವೈದ್ಯರು ಹೇಳಿದ್ದರು. ಕುಡಿತ ಬಿಡುವಂತೆ ವೈದ್ಯರು ಸಲಹೆಯನ್ನೂ ನೀಡಿದ್ದರು. ಮಾತ್ರವಲ್ಲ ,ಮತ್ತೆ ಕುಡಿತ ಆರಂಭಿಸಿದರೆ ಪ್ರಾಣಕ್ಕೆ ಅಪಾಯವ ಇರುವುದಾಗಿಯೂ ವೈದ್ಯರು ಸೂಚನೆ ನೀಡಿದ್ರು.ಮತ್ತೆ ಕುಡಿತ ಆರಂಭಿಸಿದ್ರಿಂದ ಮೂರೇ ತಿಂಗಳಿನಲ್ಲಿ ವೈದ್ಯರು ಹೇಳಿದಂತೆ ಅಗಿದೆ' ಎಂದು ಶೀರೂರು ಶ್ರೀಗಳ ಇಬ್ಬರು ಆಪ್ತರು ಮಾತಾಡಿಕೊಂಡ ಆಡಿಯೋ ಕೂಡ ಇದೀಗ ವೈರಲ್ ಆಗಿದೆ.

  ಮಹಿಳೆಯ ಸಹವಾಸದಿಂದ ಹೋಯ್ತಾ ಜೀವ

  ಮಹಿಳೆಯ ಸಹವಾಸದಿಂದ ಹೋಯ್ತಾ ಜೀವ

  ಶ್ರೀಗಳಿಗೆ ಮಹಿಳೆಯರ ಸಾಮಿಪ್ಯ ಇತ್ತು ಎನ್ನಲಾಗಿದ್ದು, ಒಬ್ಬ ಮಹಿಳೆ ಪ್ರತಿದಿನ ಶ್ರೀಗಳಿಗೆ ಫಲಾಹಾರ ತರುತ್ತಿದ್ದರು ಎನ್ನಲಾಗುದೆ. ಇದೀಗ ಆ ಮಹಿಳೆ ಪೊಲೀಸರ ವಶದಲ್ಲಿದ್ದು ವಿಚಾರಣೆ ನಡೆಯುತ್ತಿದೆ. ಅಷ್ಟೆ ಅಲ್ಲದೆ ಮಠದಲ್ಲಿಯೇ ಇಬ್ಬರು ಮಹಿಳೆಯರು ಇರಲು ಶ್ರೀಗಳು ಅವಕಾಶ ಮಾಡಿಕೊಟ್ಟಿದ್ದರು. ಮಹಿಳೆಯರ ನಡುವೆ ಜಗಳಗಳಾಗಿ ಶ್ರೀಗಳ ಜೀವ ಹೋಗಲು ಇದು ಕಾರಣವಾಗಿದೆ ಎಂಬ ಸುದ್ದಿಯೂ ಇದೆ. ಪೇಜಾವರರೂ ಇದೇ ಅನುಮಾನವನ್ನು ವ್ಯಕ್ತಪಡಿಸಿದ್ದರು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Shiroor Seer's death taking mysterious twists day by bay. In a recent development Shiroor Seer planing to make a deal with Ashta mutt;s seers. and also Seer was cheated crores by some business men.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more