ಶೀರೂರು ಶ್ರೀಗಳ ಸಾವಿನ ತನಿಖೆಗೆ ಏಳು ವಿಶೇಷ ತಂಡ ರಚನೆ
ಉಡುಪಿ, ಜುಲೈ 20: ನಿನ್ನೆಯಷ್ಟೆ ವಿಧಿವಶರಾದ ಶೀರೂರು ಮಠದ ಶ್ರೀಗಳ ಸಾವಿನ ಬಗ್ಗೆ ಅನುಮಾನುಗಳು ಎದ್ದಿರುವ ಕಾರಣ ತನಿಖೆಗೆ ಏಳು ವಿಶೇಷ ತಂಡವನ್ನು ರಚಿಸಲಾಗಿದೆ.
ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಈ ಏಳು ತಂಡಗಳು ವಿವಿಧ ಆಯಾಮಗಳಲ್ಲಿ ಶ್ರೀಗಳ ಸಾವಿನ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲಿವೆ.
ಶ್ರೀಗಳು ಫುಡ್ ಫಾಯ್ಸನ್‌ನಿಂದ ಸತ್ತಿದ್ದಾರೆ ಎಂದು ಮಣಿಪಾಲದ ಆಸ್ಪತ್ರೆಯ ವೈದ್ಯರು ಹೇಳಿದ್ದರು. ಯಾರೋ ಉದ್ದೇಶಪೂರ್ವಕವಾಗಿ ಅವರಿಗೆ ವಿಷವಿಕ್ಕಿದ್ದಾರೆ ಎಂಬ ಅನುಮಾನುಗಳು ಕೇಳಿಬಂದಿತ್ತು. ಶ್ರೀಗಳ ಪೂರ್ವಾಶ್ರಮದ ಸಹೋದರ ಶ್ರೀಗಳ ಸಾವಿನ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ನಿನ್ನೆಯಿಂದಲೇ ತನಿಖೆ ಪ್ರಾರಂಭವಾಗಿದ್ದು, ಶ್ರೀಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಅಲ್ಲದೆ ಶೀರೂರು ಮೂಲ ಮಠವನ್ನು ಮೂರು ದಿನಗಳ ಕಾಲ ಪೊಲೀಸರು ವಶಕ್ಕೆ ಪಡೆದಿದ್ದು ಸಾಕ್ಷ್ಯ ಸಂಗ್ರಹದಲ್ಲಿ ನಿರತರಾಗಿದ್ದಾರೆ.

ನಿನ್ನೆಯೇ ವಿಧಿವಿಜ್ಞಾನ ಪ್ರಯೋಗಾಲಯದ ತಂಡವು ಮಠಕ್ಕೆ ಭೇಟಿ ನೀಡಿದ್ದು ತನಿಖೆ ನಡೆಸಿದೆ. ಅನುಮಾನ ಬರುವ ವಸ್ತುಗಳನ್ನು ಲ್ಯಾಬ್‌ಗೆ ತೆಗೆದುಕೊಂಡು ಪರೀಕ್ಷೆ ಸಹ ಮಾಡಲಾಗಿದೆ.












Click it and Unblock the Notifications