ಉಡುಪಿ : ಸ್ಕೂಬಾ ಡೈವ್ ಮಾಡಿ ಕಡಲಾಳದ ಕರಾಮತ್ತು ನೋಡಿ

Posted By:
Subscribe to Oneindia Kannada

ಉಡುಪಿನವೆಂಬರ್ 13 : ಸಮುದ್ರದ ಆಳಕ್ಕಿಳಿದು ಅಲ್ಲಿನ ಜೀವ ವೈವಿಧ್ಯ ಹಾಗೂ ಅಲ್ಲಿಯ ಪ್ರಾಕೃತಿ ವಿಸ್ಮಯಗಳನ್ನು ಕಣ್ತುಂಬಿಕೊಳ್ಳುವ ಕನಸು ಹೊತ್ತ ಸಾಹಸಿ ಗಳಿಗೆ ಇದು ಸಂತಸದ ಸುದ್ದಿ.

ಸ್ಕೂಬಾ ಡೈವಿಂಗ್ ಮೂಲಕ ಕಡಲಾಳದ ಬೆರಗುಗಳಿಗೆ ಸಾಕ್ಷಿ ಯಾಗುವ ಸಾಹಸ ಜಲಕ್ರೀಡೆ ಉಡುಪಿಯ ಕಾಪು ಕಡಲತೀರದಲ್ಲಿ ಆರಂಭಗೊಂಡಿದೆ. ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಉಡುಪಿ ಜಿಲ್ಲಾಡಳಿತ ಸ್ಕೂಬಾ ಡೈವಿಂಗ್ ಜಲ ಸಾಹಸ ಕ್ರೀಡೆ ಆರಂಭಿಸಲು ಮುಂದಾಗಿದೆ.

ಅಮೆರಿಕಾ: ಸ್ಕೂಬಾ ಡೈವಿಂಗ್ ಎಡವಟ್ಟು ಕೋಮಾದಲ್ಲಿ ಚಿಕ್ಕಮಗಳೂರು ಮಹಿಳೆ

ಉಡುಪಿ ಜಿಲ್ಲೆಯ ಕಡಲತಡಿಯಲ್ಲಿ ಕಳೆದ 2 ವರ್ಷಗಳಿಂದ ಈ ಸಾಹಸ ಜಲಕ್ರೀಡೆಗೆ ಸೂಕ್ತ ಜಾಗವನ್ನು ಪರಿಶೀಲನೆ ನಡೆಸಲಾಗುತ್ತಿತ್ತು. ಅಂತಿಮವಾಗಿ ಬೋಟ್ ಫೆಡರೇಷನ್ ನೀಡಿದ ಆಭಿಪ್ರಾಯದಂತೆ ಕಾಪು ಬೀಚ್ ನಿಂದ ಸಮುದ್ರದಲ್ಲಿ 8 ನಾಟಿಕಲ್ ಮೈಲ್ ದೂರದಲ್ಲಿನ, ಮೂಲ್ಕಿ ಪಾರ್ ಎಂಬಲ್ಲಿ ಸ್ಕೂಬಾ ಡೈವಿಂಗ್ ಗೆ ಅವಕಾಶ ದೊರೆತಿದೆ.

ಇಲ್ಲಿನ ಸಮುದ್ರದಾಳದಲ್ಲಿ ಹವಳದ ದಿಬ್ಬಗಳು, ಆಕರ್ಷಕ ಮೀನುಗಳು ಹಾಗೂ ವೈವಿಧ್ಯಮಯವಾದ ಜಲ ಜೀವರಾಶಿ ಇದೆ. ಅಲ್ಲದೇ ಇಲ್ಲಿ ನೀರಿನಾಳದ ದೃಶ್ಯಗಳು ಇತರೆಡೆಗಿಂತ ಅತ್ಯಂತ ಸ್ಪಷ್ಟವಾಗಿ ಗೋಚರಿಸುತ್ತವೆ.

ಗೋವಾ, ಮುಂಬೈ ನಲ್ಲೂ ಸ್ಕೂಬಾ ಡೈ ಮಾಡಿಸುವುದು ಇದೇ ಸಂಸ್ಥೆ

ಗೋವಾ, ಮುಂಬೈ ನಲ್ಲೂ ಸ್ಕೂಬಾ ಡೈ ಮಾಡಿಸುವುದು ಇದೇ ಸಂಸ್ಥೆ

ಈ ಹಿನ್ನೆಲೆಯಲ್ಲಿ ಸ್ಕೂಬಾ ಡೈವಿಂಗ್ ನೆಡೆಸಲು ವೆಸ್ಟ್ ಕೋ ಅಡ್ವೆಂಚರ್ಸ್ ಕಂಪೆನಿ ಗುತ್ತಿಗೆ ಪಡೆದಿದ್ದು, ಇದೇ ಕಂಪನಿ ಗೋವಾ, ಮುಂಬೈ ಮತ್ತು ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಸಾಹಸ ಜಲಕ್ರೀಡೆಗೆ ವೇದಿಕೆ ಕಲ್ಪಿಸಿದೆ. ಈ ಸಂಸ್ಥೆ ಉಡುಪಿ ಜಿಲ್ಲಾಡಳಿತದೊಂದಿಗೆ 3 ವರ್ಷಗಳ ಸ್ಕೂಬಾ ಡೈವಿಂಗ್ ಸಾಹಸ ಜಲಕ್ರೀಡೆ ಸಡೆಸಲು ಗುತ್ತಿಗೆಪಡೆದುಕೊಂಡಿದೆ.

10 ವರ್ಷ ಮೇಲ್ಟಟ್ಟಿದ್ದರೆ ಸಾಕು

10 ವರ್ಷ ಮೇಲ್ಟಟ್ಟಿದ್ದರೆ ಸಾಕು

ಸ್ಕೂಬಾ ಡೈವಿಂಗ್ ಮಾಡಲು ಈಜು ಬಲ್ಲವರಾಗಿರಬೇಕು ಎಂಬ ನಿಯಮವೇನಿಲ್ಲ, 10 ವರ್ಷ ಮೇಲ್ಪಟ್ಟ ಎಲ್ಲರೂ ಭಾಗವಹಿಸಬಹುದಾಗಿದೆ. 71 ವರ್ಷದ ವೃದ್ದೆ ಒಬ್ಬರೂ ಈಗಲೂ ಸ್ಕೂಬಾ ಡೈವಿಂಗ್ ಮಾಡುತ್ತಿದ್ದಾರೆ ವೆಸ್ಟ್ ಕೋ ಅಡ್ವೆಂಚರ್ ನ ವ್ಯವಸ್ಥಾಪಕ ಪವನ್ ಶೌರಿ ತಿಳಿಸಿದ್ದಾರೆ.

ಹೃದಯ ಖಾಯಿಲೆ ಇದ್ದರೆ ಸ್ಕೂಬಾ ಡೈವ್ ಮಾಡುವುದು ನಿಷಿದ್ಧ

ಹೃದಯ ಖಾಯಿಲೆ ಇದ್ದರೆ ಸ್ಕೂಬಾ ಡೈವ್ ಮಾಡುವುದು ನಿಷಿದ್ಧ

ಆದರೆ ಹೃದಯರೋಗ ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂಬುದರ ಕುರಿತು ಸ್ವಯಂ ಘೋಷಿತ ಪತ್ರಕ್ಕೆ ಸಹಿ ಮಾಡಬೇಕಾಗುತ್ತದೆ. ಸಂಸ್ಥೆ ಯಲ್ಲಿ ನುರಿತ ತರಬೇತುದಾರರಿದ್ದು, ಅವರ ಸಹಾಯದಿಂದ ಡೈವಿಂಗ್ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.

ಒಬ್ಬರಿಗೆ 3500 ರೂಪಾಯಿ ಮಾತ್ರ

ಒಬ್ಬರಿಗೆ 3500 ರೂಪಾಯಿ ಮಾತ್ರ

ಡೈವಿಂಗ್ ಮಾಡಲು ಅಗತ್ಯವಿರುವ ಎಲ್ಲಾ ರೀತಿಯ, 35 ಲಕ್ಷ ವೆಚ್ಚದ ಜೀವ ರಕ್ಷಕ ಉಪಕರಣಗಳನ್ನು ಸಂಸ್ಥೆ ಹೊಂದಿದ್ದು, ಪ್ರಾರಂಭಿಕ ಶುಲ್ಕವಾಗಿ ಒಬ್ಬರಿಗೆ 3500 ರೂ ನಿಗಧಿಪಡಿಸಿದೆ ಎಂದು ಅವರು ಸ್ಪಷ್ಟಪಡಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The provision of scuba diving facility is expected to give a major boost to tourism in the district. The West Coast Adventures firm is providing the scuba diving facility.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ