ರಾಜೇಶ್ವರಿ ಶೆಟ್ಟಿಗೆ ರಾಜಾತಿಥ್ಯ ಆರೋಪ : ವಕೀಲರು ಹೇಳುವುದೇನು?

Posted By:
Subscribe to Oneindia Kannada

ಉಡುಪಿ, ಆಗಸ್ಟ್. 24 : ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳಾದ ರಾಜೇಶ್ವರಿ ಶೆಟ್ಟಿ, ನವನೀತ ಶೆಟ್ಟಿ ಹಾಗೂ ಜ್ಯೋತಿಷಿ ನಿರಂಜನ್ ಭಟ್ ಅವರಿಗೆ ಪೊಲೀಸರು ರಾಜಾತಿಥ್ಯ ನೀಡುತ್ತಿದ್ದಾರೆ ಆರೋಪವನ್ನು ವಕೀಲರು ತಳ್ಳಿಹಾಕಿದ್ದಾರೆ.

ಸುಪ್ರೀಂನಲ್ಲೂ ರಾಜೇಶ್ವರಿ ಶೆಟ್ಟಿಗೆ ಗಿಟ್ಟಲಿಲ್ಲ ಜಾಮೀನು

ವಕೀಲ ಬೆಳುವಾಯಿ ಅರುಣ್ ಬಂಗೇರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. 'ನ್ಯಾಯಾಲಯಕ್ಕೆ ಹಾಜರಾಗುವ ವೇಳೆ ಪೊಲೀಸ್ ವಾಹನ ಇರದಿದ್ದ ಪಕ್ಷದಲ್ಲಿ ಖಾಸಗಿ ವಾಹನವನ್ನು ಅವರೇ ಗೊತ್ತುಪಡಿಸುತ್ತಾರೆ. ರಾಜೇಶ್ವರಿ ಶೆಟ್ಟಿ ಸಂಬಂಧಿಕರ ವಾಹನದಲ್ಲಿ ಬಂದಿಲ್ಲ' ಎಂದು ಸ್ಪಷ್ಟಪಡಿಸಿದರು.

Royal treatment to Bhaskar Shetty murder accused, lawyer dined allegation

'ಆರೋಪಿಗಳಿಗೆ ಜೈಲಿನಲ್ಲಿ ಹಾಗೂ ಹೊರಗಡೆ ಜೀವ ಬೆದರಿಕೆ ಇರುವುದರಿಂದ ಅವರನ್ನು ಸಾರ್ವಜನಿಕರು ಉಪಯೋಗಿಸುವ ಬಸ್ ನಲ್ಲಿ ಕರೆದೊಯ್ಯದೆ ಪೊಲೀಸ್ ವಾಹನದಲ್ಲಿ ಕರೆದೊಯ್ಯಬೇಕು ಎಂದು ನ್ಯಾಯಾಲಯಕ್ಕೆ ಎರಡು ಬಾರಿ ಮನವಿ ಮಾಡಲಾಗಿದೆ. ಅದಕ್ಕೆ ಪೂರಕವಾದ ವಾಹನ ಲಭ್ಯವಾಗದ ಹಿನ್ನೆಲೆಯಲ್ಲಿ ಖಾಸಗಿ ವಾಹನದ ವ್ಯವಸ್ಥೆ ಮಾಡಿರಬಹುದು' ಎಂದು.

'ರಾಜೇಶ್ವರಿ ಅವರು ಖಾಸಗಿ ವಾಹನಕ್ಕೆ ಬೇಡಿಕೆ ಇಟ್ಟಿರಲಿಲ್ಲ. ಕಳೆದ ಬಾರಿ ಆರೋಪಿಗಳನ್ನು ಪೊಲೀಸ್ ವಾಹನದಲ್ಲಿಯೇ ನ್ಯಾಯಾಲಯಕ್ಕೆ ಕರೆದುಕೊಂಡು ಬರಲಾಗಿತ್ತು. ಖಾಸಗಿ ವಾಹನ ಬಳಕೆಗೆ ಅಪಾರ್ಥ ಕಲ್ಪಿಸುವುದು ಸರಿಯಲ್ಲ' ಎಂದರು.

ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣ ಸಿಐಡಿಯಿಂದ ಚಾರ್ಜ್ ಶೀಟ್ ಸಲ್ಲಿಕೆ

ಬಿಜೆಪಿ ಮನವಿ : ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳನ್ನು ಖಾಸಗಿ ಐಷಾರಾಮಿ ಕಾರಿನಲ್ಲಿ ಮಂಗಳೂರಿನಿಂದ ಉಡುಪಿ ನ್ಯಾಯಾಲಯಕ್ಕೆ ಕರೆತಂದ ಪೊಲೀಸರ ಅಮಾನತು ಆದೇಶ ವಾಪಸ್ ಪಡೆಯಬೇಕು ಎಂದು ಉಡುಪಿ ಬಿಜಪಿ ಕಾರ್ಮಿಕ ಪ್ರಕೋಷ್ಠ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿದೆ.

ಎಎಸ್ಐ ಸುಧಾಕರ್ ಸಲ್ಮಾನ್, ಮಹಿಳಾ ಪೇದೆ ರೇಣುಕಾ ಅವರನ್ನು ಅಮಾನತು ಮಾಡಿ ಇಲಾಖೆ ತನಿಖೆ ಎಂದು ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಈಗ ಪಡೆಯುತ್ತಿರುವ ಸಂಬಳ ಅತಿ ಕಡಿಮೆಯಾಗಿದ್ದು ಮತ್ತೆ ಸಂಬಳ ಕಡಿತ ಮಾಡಿ ಕಿರುಕುಳ ನೀಡುತ್ತಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Lawyer Arun Bangera dined allegation that Bhaskar Shetty murder case accused Rajeshwari Shetty and Navneeth Shetty get Royal treatment under police custody.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X