ಉಡುಪಿಯಲ್ಲಿ ಗುಡುಗು ಸಹಿತ ಭಾರೀ ಮಳೆ; ಮೂರು ದಿನ ರೆಡ್ ಅಲರ್ಟ್
ಉಡುಪಿ, ಅಕ್ಟೋಬರ್ 22: ಅರಬ್ಬೀ ಸಮುದ್ರದಲ್ಲಿ ಒತ್ತಡ ಸೃಷ್ಟಿಯಾಗಿದ್ದು, ಮುಂದಿನ ಮೂರು ದಿನಗಳಲ್ಲಿ ಭಾರೀ ಗುಡುಗು ಮಿಂಚಿನ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಮುಂಜಾಗರೂಕತಾ ಕ್ರಮವಾಗಿ ಮೂರು ದಿನಗಳ ಕಾಲ ರೆಡ್ ಅಲರ್ಟ್ ಘೋಷಿಸಲಾಗಿದೆ. ಕಳೆದ ಒಂದು ವಾರದಿಂದ ಉಡುಪಿಯಾದ್ಯಂತ ಸಂಜೆ ಹೊತ್ತು ಮಳೆಯಾಗುತ್ತಿದೆ. ಪೆರ್ಡೂರು, ಹೆಬ್ರಿ ಭಾಗಗಳಲ್ಲಿ ಈ ಹಿಂಗಾರು ಮಳೆ ಸಾಕಷ್ಟು ಹಾನಿಯನ್ನೂ ಮಾಡಿತ್ತು.
Recommended Video
ಮುಂದಿನ ಮೂರು ದಿನ ಭಾರೀ ಗುಡುಗು ಮಿಂಚು ಸಹಿತ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಹೇಳಿದೆ. ಈ ಅವಧಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆಯನ್ನೂ ನೀಡಲಾಗಿದೆ. ಮುಖ್ಯವಾಗಿ ಆಳಸಮುದ್ರ ಮೀನುಗಾರಿಕೆ ನಡೆಸುವ ಮೀನುಗಾರರು ದೂರದ ಪ್ರದೇಶಗಳಿಗೆ ಮೀನುಬೇಟೆಗೆ ತೆರಳದಂತೆ ಕಟ್ಟುನಿಟ್ಟಿನ ಸೂಚನೆಯನ್ನೂ ಜಿಲ್ಲಾಡಳಿತ ನೀಡಿದೆ.

ಮೂರು ದಿನ ರೆಡ್ ಅಲರ್ಟ್ ಬಳಿಕ ಎರಡು ದಿನ ಆರೆಂಜ್ ಅಲರ್ಟ್ ಇರಲಿದ್ದು, ಐದು ದಿನಗಳ ಬಳಿಕ ಹಿಂಗಾರು ಮಳೆ ಕ್ಷೀಣವಾಗಲಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.












Click it and Unblock the Notifications