Breaking; ಕರ್ನಾಟಕದ ಮೊದಲ ತೇಲುವ ಸೇತುವೆಗೆ ಹಾನಿ
ಉಡುಪಿ, ಮೇ 09; ಅರಬ್ಬೀ ಸಮುದ್ರದಲ್ಲಿ ಭಾರೀ ಗಾಳಿಯ ಒತ್ತಡ ಹಿನ್ನಲೆಯಲ್ಲಿ ಕರ್ನಾಟಕದ ಮೊದಲ ತೇಲುವ ಸೇತುವೆಗೆ ಹಾನಿಯಾಗಿದೆ. ಮೇ 6ರಂದು ಉದ್ಘಾಟನೆಯಾಗಿದ್ದ ಸೇತುವೆಯ ಹಾಳಾಗಿದೆ.
ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದ ಪರಿಣಾಮ ಸಮುದ್ರದಲ್ಲಿ ಪರಿಸ್ಥಿತಿ ಪ್ರಕ್ಷುಬ್ಧವಾಗಿದೆ. ಗಾಳಿಯ ಹೊಡೆತಕ್ಕೆ ಸಿಲುಕಿ ತೇಲುವ ಸೇತುವೆ ಬ್ರಿಕ್ಸ್‌ಗಳು ಅಲೆಗಳ ಅಬ್ಬರದೊಂದಿಗೆ ಸಮುದ್ರಪಾಲಾಗಿದೆ.
ಕೇರಳದ ಬೇಕೂರು ಕಡಲ ತೀರದ ಮಾದರಿ ತೇಲುವ ಸೇತುವೆಯನ್ನು ಉಡುಪಿಯ ಮಲ್ಪೆಯಲ್ಲಿ ನಿರ್ಮಾಣ ಮಾಡಲಾಗಿತ್ತು. ಇದು ರಾಜ್ಯದ ಮೊದಲ ತೇಲುವ ಸೇತುವೆಯಾಗಿತ್ತು. 100 ಮೀಟರ್ ಉದ್ದ ಮತ್ತು 3.5 ಮೀಟರ್ ಅಗಲವಿರುವ ತೇಲುವ ಸೇತುವೆ ಇದಾಗಿತ್ತು.

ತೇಲುವ ಸೇತುವೆಯನ್ನು ಧನಂಜಯ ಕಾಂಚನ್, ಶೇಖರ್ ಪುತ್ರನ್, ಸುದೇಶ್ ಶೆಟ್ಟಿ ಎಂಬ ಮೂರು ಮಂದಿ ಪಾಲುದಾರರಿದ್ದು 80 ಲಕ್ಷ ಖರ್ಚು ಮಾಡಿ ನಿರ್ಮಿಸಿದ್ದರು. ಸೇತುವೆಯ ಎರಡು ಬದಿಗಳಲ್ಲಿ ಪ್ರವಾಸಿಗರು ಸಮುದ್ರಕ್ಕೆ ಬೀಳದಂತೆ ರೇಲಿಂಗ್ಸ್ ಅಳವಡಿಕೆ ಮಾಡಲಾಗಿತ್ತು.
ಒಂದು ಬಾರಿ ನೂರು ಜನರು ಈ ಸೇತುವೆ ಮೇಲೆ ನಡೆಯಲು ಅವಕಾಶವಿತ್ತು. ಒಬ್ಬರಿಗೆ 15 ನಿಮಿಷ ಗಳ ಕಾಲ ಕಳೆಯಲು ಅವಕಾಶ ನೀಡಲಾಗಿತ್ತು. ಒಬ್ಬರಿಗೆ 100 ರೂ. ಟಿಕೆಟ್ ಶುಲ್ಕ ನಿಗದಿ ಮಾಡಲಾಗಿತ್ತು.












Click it and Unblock the Notifications