ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

'ಪೇಜಾವರಶ್ರೀಗಳ ಕಣ್ಣ ಮುಂದೆಯೇ ರಾಮ ಮಂದಿರ ನಿರ್ಮಾಣ'

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಉಡುಪಿ, ನವೆಂಬರ್ 24 : ಉಡುಪಿಯಲ್ಲಿ ಇಂದು (ನವೆಂಬರ್ 24) ರಂದು ಮೂರು ದಿನಗಳ ಧರ್ಮ ಸಂಸತ್ ಉದ್ಘಾಟನೆಗೊಂಡಿತು.

  ಧರ್ಮ ಸಂಸದ್ ನಲ್ಲಿ ರಾಮಮಂದಿರ ನಿರ್ಮಾಣ ನಿರ್ಣಯ?

  ಎಲ್ಲರೂ ಎಣಿಸಿದಂತೆ ದರ್ಮ ಸಂಸತ್ ನ ಮೊದಲ ದಿನವೇ ರಾಮಮಂದಿರ, ಗೋ ಹತ್ಯೆ ವಿಚಾರಗಳು ಚರ್ಚೆಗೆ ಬಂತು. ಧರ್ಮ ಸಂಸತ್ ನಲ್ಲಿ ಕೇಳಿ ಬಂದ ಪ್ರಮುಖ ಹೇಳಿಕೆಗಳು, ಒತ್ತಾಯಗಳು ಇಲ್ಲಿವೆ ನೋಡಿ...

  In Pics:ಉಡುಪಿಯಲ್ಲಿ ಜರುಗುತ್ತಿರುವ ಧರ್ಮ ಸಂಸದ್ ಸಮ್ಮೇಳನದ ಚಿತ್ರಸಂಪುಟ

  ಪೇಜಾವರಶ್ರೀ ನೇತೃತ್ವದಲ್ಲಿ ರಾಮಮಂದಿರ

  ಪೇಜಾವರಶ್ರೀ ನೇತೃತ್ವದಲ್ಲಿ ರಾಮಮಂದಿರ

  ಪೇಜಾವರ ಶ್ರೀಗಳ ಕಣ್ಣೆದುರೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು. ಹಿಂದೂ ದೇವಾಲಯಗಳ ಆಡಳಿತವನ್ನು ಸರ್ಕಾರಗಳು ನಿರ್ವಹಿಸುವುದು ಸಂವಿಧಾನ ವಿರೋಧಿ ಎಂದು ವಿಶ್ವ ಹಿಂದೂ ಪರಿಷತ್‌ನ ಅಂತರರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ಭಾಯ್ ತೊಗಾಡಿಯಾ ಹೇಳಿದರು.

  ಹಿಂದು ಧರ್ಮದಲ್ಲಿ ಅಸ್ಪೃಶ್ಯತೆಗೆ ಅವಕಾಶ ಇಲ್ಲ

  ಹಿಂದು ಧರ್ಮದಲ್ಲಿ ಅಸ್ಪೃಶ್ಯತೆಗೆ ಅವಕಾಶ ಇಲ್ಲ

  ಹಿಂದು ಧರ್ಮದಲ್ಲಿ ಅಸ್ಪೃಶ್ಯತೆಗೆ ಅವಕಾಶ ಇಲ್ಲ, ಜಾತಿ ಭೇದ ಹೆಸರಲ್ಲಿ ಹಿಂದು ಧರ್ಮ ವಿಘಟನೆಯಾಗಿದೆ ಯಾವುದೇ ರೀತಿಯ ಅಸ್ಪೃಶ್ಯತೆ ಆಚರಣೆಗೆ ಹಿಂದು ಧರ್ಮದಲ್ಲಿ ಅವಕಾಶ ಇರುವುದಿಲ್ಲ , ದೇಶದಲ್ಲಿ ಗೋ ಹತ್ಯೆ ಸಂಪೂರ್ಣ ನಿಷೇಧ ಆಗಬೇಕು ಈ ಬಗ್ಗೆ ಭಾರತ ಸರಕಾರ ನಿರ್ಣಯ ಕೈಗೊಳ್ಳಬೇಕಿದೆ ಎಂದು ಅವರು ಭಾಷಣದಲ್ಲಿ ಹೇಳಿದರು.

  ಜರ್ಸಿ ತಳಿ ಹಸು ಗೋಮಾತೆಯಲ್ಲ

  ಜರ್ಸಿ ತಳಿ ಹಸು ಗೋಮಾತೆಯಲ್ಲ

  ಪರಮಾತ್ಮಾನಂದ ಸ್ವಾಮೀಜಿ ಅವರು ಡಿಜಿಟಲ್ ಯುಗದಿಂದಾಗಿ ಚಿಕ್ಕ ವಿಷಯವೂ ವಿಶ್ವದೆಲ್ಲಡೆ ಹಬ್ಬುತ್ತದೆ , ಹಿಂದೂ ಭಯೋತ್ಪಾದನೆ ಎಂಬುದನ್ನು ಸೃಷ್ಠಿಸಿರುವುದು ತಪ್ಪು , ಮಾಧ್ಯಮಗಳೇ ಇಂತಹ ತಪ್ಪು ಮಾಹಿತಿ‌ ಹರಡಿವೆ ಎಂದರು. ಅಮೂಲ್, ಡೈರಿಗಳು ಜೆರ್ಸಿಗಳ ಹಾಲನ್ನು ಮಾರಾಟ ಮಾಡುತ್ತಿವೆ, ದೇಶಿ ಎ-2 ಹಾಲು ಎಂದು ನಿರ್ಮಿಸಿ ಜನರಿಗೆ ದ್ವಿಗುಣ ಮೊತ್ತಕ್ಕೆ ಮಾರಾಟ ಮಾಡಲಾಗುತ್ತಿದೆ, ಡೈರಿಗಳು ಜೆರ್ಸಿಗಳ ಹಾಲು ಮಾರಾಟ‌ ಮಾಡಿ ಜನರನ್ನು ಮೂರ್ಖರರನ್ನಾಗಿಸುತ್ತಿದೆ, ಇದರಿಂದ ನೈಜ‌ ಗೋಮಾತೆಯ ಆರೋಗ್ಯಕರ ಹಾಲು ಜನರಿಗೆ ಸಿಗುತ್ತಿಲ್ಲ, ಜೆರ್ಸಿ ತಳಿ ಗೋಮಾತೆಯಲ್ಲ, ಗೋಮಾತೆಯ ಹಾಲು ದೊರಕಿದಲ್ಲಿ ಅದರ ಪ್ರಾಮುಖ್ಯತೆಯೂ ಹೆಚ್ಚುತ್ತದೆ ಇದರ ಮೂಲಕ ಗೋಮಾತೆಯ ರಕ್ಷಣೆಯೂ ಸಾಧ್ಯವಾಗುತ್ತದೆ ಎಂದರು.

  ಧರ್ಮದ ಹೆಸರಿನಲ್ಲಿ ನಡೆಯುವ ಉಪಟಳ ನಿಲ್ಲಬೇಕು

  ಧರ್ಮದ ಹೆಸರಿನಲ್ಲಿ ನಡೆಯುವ ಉಪಟಳ ನಿಲ್ಲಬೇಕು

  ಧರ್ಮದ ಹೆಸರಿನಲ್ಲಿ ಸಮಾಜಕ್ಕೆ ಉಪಟಳ ನೀಡುತ್ತಿರುವವರನ್ನು ಹತ್ತಿಕ್ಕಬೇಕು. ಇಲ್ಲವಾದರೆ ಹಿಂದೂ ಧರ್ಮಕ್ಕೆ ಅಪಾಯವಿದೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಎಚ್ಚರಿಸಿದರು.

  ಧರ್ಮ ಸಂಸತ್‌ ಸಮ್ಮೇಳನದಲ್ಲಿ ಮಾತನಾಡಿದ ಸ್ವಾಮೀಜಿ ‘ಧರ್ಮದ ನೆಪವಿಟ್ಟುಕೊಂಡು ಗೋರಕ್ಷಣೆ, ಅನೈತಿಕ ಪೊಲೀಸ್ ಗಿರಿ ನಡೆಸುವವರನ್ನು ನಿಯಂತ್ರಿಸಬೇಕು. ಇಂತಹ ಸಮಸ್ಯೆಗಳ ಕುರಿತು ಹಿಂದೂ ಧರ್ಮೀಯರು ಸ್ವ ಅವಲೋಕನ ಮಾಡಿಕೊಳ್ಳಬೇಕು' ಎಂದು ಹೇಳಿದರು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  2000 Saints from all over Nation participate in Dharma Sansad 2017 witch is organised by VHP at Udupi Shri Krishna Mutt. In this Dharma Sasad VHP's front leader Pravenn Bhai Thogadia raise the Rama mandira issue and said Rama Mandir will be buit in Pejavara Shri's supervision.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more