ಉಡುಪಿಯಲ್ಲಿ ಮುಂದುವರೆದ ಮಳೆ: ಜಡಿಮಳೆಗೆ ಜನಜೀವನ ಅಸ್ತವ್ಯಸ್ತ

ಉಡುಪಿ, ಅಕ್ಟೋಬರ್ 24: ಅರಬ್ಬೀ ಸಮುದ್ರದಲ್ಲಿ ನಿಮ್ನ ಒತ್ತಡ ಸೃಷ್ಟಿಯಾಗಿ ಉಡುಪಿಯಲ್ಲಿ ಭಾರೀ ಮಳೆಯಾಗುತ್ತಿದೆ. ಇಂದು ಮತ್ತು ನಾಳೆ ಭಾರೀ ಗುಡುಗು ಮಿಂಚಿನ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ‌ ಇಲಾಖೆ ನೀಡಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಮುಂಜಾಗರೂಕತಾ ಕ್ರಮವಾಗಿ ನಿನ್ನೆಯಿಂದಲೇ ಮೂರು ದಿನಗಳ ಕಾಲ ರೆಡ್ ಅಲರ್ಟ್ ಘೋಷಿಸಲಾಗಿದೆ.

ಒಂದು ವಾರದಿಂದ ಉಡುಪಿಯಾದ್ಯಂತ ಸಂಜೆ ಹೊತ್ತು ಮಳೆಯಾಗುತ್ತಿದೆ. ಪೆರ್ಡೂರು, ಹೆಬ್ರಿ ಭಾಗಗಳಲ್ಲಿ ಹಿಂಗಾರು ಮಳೆ ಸಾಕಷ್ಟು ಹಾನಿಯನ್ನೂ ಮಾಡಿತ್ತು. ಇಂದು ಮತ್ತು ನಾಳೆ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗುವ ಬಗ್ಗೆ ಹವಾಮಾನ‌ ಇಲಾಖೆ ಹೇಳಿತ್ತು. ಅದರಂತೆಯೇ ಇಂದು ಬೆಳಿಗ್ಗಿನಿಂದಲೇ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದೆ.

Recommended Video

      Heavy rain in Gokak has caused the rocks to fall from Mallikarjuna Hill | Oneindia Kannada
      Rain Continues In Udupi District

      ಈ ಅವಧಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆಯನ್ನೂ ನೀಡಲಾಗಿದೆ. ಮುಖ್ಯವಾಗಿ ಆಳಸಮುದ್ರ ಮೀನುಗಾರಿಕೆ ನಡೆಸುವ ಮೀನುಗಾರರು ದೂರದ ಪ್ರದೇಶಗಳಿಗೆ ಮೀನುಬೇಟೆಗೆ ತೆರಳದಂತೆ ಕಟ್ಟುನಿಟ್ಟಿನ ಸೂಚನೆಯನ್ನೂ ಜಿಲ್ಲಾಡಳಿತ ನೀಡಿದೆ. ಇನ್ನೆರಡು ದಿನಗಳ ಬಳಿಕ ಹಿಂಗಾರು ಮಳೆ ಕ್ಷೀಣವಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+