ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಂಟೇನರ್ ನಲ್ಲಿ ಸಾಗಿಸುತ್ತಿದ್ದ 20ಕ್ಕೂ ಅಧಿಕ ಜಾನುವಾರುಗಳ ರಕ್ಷಣೆ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಆಗಸ್ಟ್ .13: ಬೆಳಗಾಂನಿಂದ ಸಿದ್ದಾಪುರ ಮಾರ್ಗವಾಗಿ ಭಟ್ಕಳಕ್ಕೆ ಇನ್ಸ್ ಲೇಟರ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 20ಕ್ಕೂ ಅಧಿಕ ಜಾನುವಾರುಗಳನ್ನು ಸೋಮವಾರ ಮುಂಜಾನೆ ಬೈಂದೂರು ಸರ್ಕಲ್ ಬಳಿ ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕರಾವಳಿಯಲ್ಲಿ ದನಗಳ್ಳತನ ಹೆಚ್ಚಾಗುತ್ತಿದ್ದು, ಇತ್ತೀಚೆಗೆ ಕುಂದಾಪುರ ಭಾಗದಲ್ಲಿ ಹಲವು ದನಗಳ ಮಾರಣ ಹೋಮವೇ ನಡೆದಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಪ್ರತಿಕ್ರಯಿಸದ ಪೊಲೀಸರು ಇದೀಗ ಕಾರ್ಯಪ್ರವೃತ್ತರಾಗಿದ್ದಾರೆ.

ಕುಂದಾಪುರದಲ್ಲಿ ಹಸು ಹಿಡಿಯಲು ಕಳ್ಳರು ಪರದಾಡೋ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಕುಂದಾಪುರದಲ್ಲಿ ಹಸು ಹಿಡಿಯಲು ಕಳ್ಳರು ಪರದಾಡೋ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ಇಂದು ಮುಂಜಾನೆ ಸಿದ್ದಾಪುರ ಮಾರ್ಗವಾಗಿ ಕಂಟೇನರ್ ನಲ್ಲಿ ಸಾಗಿಸುತ್ತಿದ್ದ ಗೋವುಗಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಈ ಬಗ್ಗೆ ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Police have seized around 20 livestock

ಕರಾವಳಿ ಭಾಗದಲ್ಲಿ ಇತ್ತೀಚೆಗೆ ನಿರ್ಭಿಡೆಯಿಂದ ಗೋವುಗಳ ಕಳ್ಳತನ ನಡೆದಿದೆ. ಈ ಹಿನ್ನೆಲೆಯಲ್ಲಿ ಕೆಲವು ಸಂಘ-ಸಂಸ್ಥೆಗಳು, ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಂಡರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

Police have seized around 20 livestock

ಕಳೆದ ಒಂದು ವಾರದಿಂದ ಈಚೆಗೆ ಇಂತಹುದೇ ಒಂದು ಪ್ರಕರಣ ಪುಂಜಾಲಕಟ್ಟೆಯ ಸೊಣಂದೂರು ಅಡ್ತಿಳ ಎಂಬಲ್ಲಿ ನಡೆದಿತ್ತು. ಗೋಕಳ್ಳರು ಜಾನುವಾರುಗಳನ್ನು ಕಳ್ಳತನ ಮಾಡಿ, ಹಿಂಸಾತ್ಮಕ ರೀತಿಯಲ್ಲಿ ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದಾಗ ಮಂಗಳೂರು ಜಿಲ್ಲಾ ಡಿಸಿಐಬಿ ಪೊಲೀಸರ ತಂಡ ಗೋವುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿತ್ತು.

English summary
Police have seized around 20 livestock illegally transported. Incident took place near Byndoor Circle on Monday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X