ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರಿನ ಮೇಲೆ ಪಟಾಕಿ ಸಿಡಿಸಿದ ಯುವಕನಿಗೆ ಚಳಿ ಬಿಡಿಸಿದ ಉಡುಪಿ ಪೊಲೀಸ್

|
Google Oneindia Kannada News

ಉಡುಪಿ, ಅಕ್ಟೋಬರ್ 28: ಕಾರಿನ ಮೇಲೆ ರಾಕೆಟ್ ಪಟಾಕಿಗಳನ್ನು ಸಿಡಿಸುವ ಮೂಲಕ ರಸ್ತೆಯುದ್ದಕ್ಕೂ ಅಪಾಯಕಾರಿಯಾಗಿ ವಾಹನ ಚಲಾಯಿಸುತ್ತಿದ್ದ ಯುವಕನಿಗೆ ಇಂದು ಉಡುಪಿ ಪೊಲೀಸರು ಬಂಧಿಸಿ ಚಳಿ ಬಿಡಿಸಿದ್ದಾರೆ.

ಇತ್ತೀಚೆಗೆ ಡಿಸಿ ಕಛೇರಿ ರಸ್ತೆಯ ಬಳಿ ಅಜಾಗರೂಕತೆಯಿಂದ ಯುವಕ ವಾಹನದ ಮೇಲೆ ಪಟಾಕಿ ಸಿಡಿಸುತ್ತಾ ಚಲಾಯಿಸುತ್ತಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ವಿಡಿಯೋ ವೈರಲ್ ಆದ ಬಳಿಕ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ಕಾರು ಚಾಲಕ 26 ವರ್ಷದ ವಿಶಾಲ್ ಎಂಬಾತನನ್ನು ಬಂಧಿಸಿ ಕಾರನ್ನು ಜಪ್ತಿ ಮಾಡಿದ್ದಾರೆ.

Udupi police arrested the young man who burst firecrackers on the car

ಈ ಬಾರಿ ದೀಪಾವಳಿ ಹಬ್ಬವನ್ನು ಎಲ್ಲೆಡೆ ಪಟಾಕಿ ಸಿಡಿಸುವ ಮೂಲಕ ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಈ ನಡುವೆ ಪಟಾಕಿ ಸಿಡಿಸುವ ಸಮಯದಲ್ಲಿ ಅಘಾತಕಾರಿ ಘಟನೆಗಳು ನಡೆದಿರುವುದು ಬೆಳಕಿಗೆ ಬಂದಿವೆ. ಅದೆಷ್ಟೋ ಜನರಿಗೆ ಪಟಾಕಿ ಸಿಡಿಸುವ ವೇಳೆ ಗಾಯಗಳಾಗಿವೆ, ಕಣ್ಣುಗಳಿಗೆ ಹಾನಿಯಾಗಿದೆ, ಕಿವಿಗಳು ಕೇಳಿಸದಂತಾದ ಘಟನೆಗಳು ದೇಶದಾದ್ಯಂತ ವರದಿಯಾಗಿವೆ. ಆದರೆ ಉಡುಪಿ ಜಿಲ್ಲೆಯಲ್ಲಿ ವಿಚಿತ್ರ ಹಾಗೂ ಭಯಾನಕವಾಗಿ ಪಟಾಕಿ ಸಿಡಿಸಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಕಂಡು ಜನ ಭಯದೊಂದಿಗೆ ರಸ್ತೆಯಿಂದ ಮಾರುದ್ದ ಓಡಿ ಹೋಗಿದ್ದರು.

ಯಾಕೆಂದರೆ ಯುವಕನೊಬ್ಬ ಕಾರಿನ ಮೇಲೆ ರಾಕೆಟ್ ಪಟಾಕಿ ಹಚ್ಚಿ ವಾಹನ ಚಲಾಯಿಸುತ್ತಿದ್ದನು. ಮೇಲೆ ಪಟಾಕಿ ಸಿಡಿಯುತ್ತಿದ್ದರೆ ರಸ್ತೆಯುದ್ದಕ್ಕೂ ವಾಹನ ಚಲಾಯಿಸುತ್ತಿದ್ದನು. ರಾತ್ರಿ ಹೊತ್ತಲ್ಲಿ ಪಟಾಕಿ ಆಕಾಶದ ಅಂಗಳಕ್ಕೆ ಹಾಕಿ ನಕ್ಷತ್ರದಂತೆ ಕಾಣಿಸುತ್ತಿತ್ತು. ಇದನ್ನು ಕಂಡು ರಸ್ತೆ ಬದಿ ವಾಹನ ಸವಾರರು ಮಾರುದ್ದ ದೂರ ನಿಂತಿದ್ದಾರೆ. ಓಡಾಡುವ ಜನ ಬಾಯಿಗೆ ಬೆರಳಿಟ್ಟುಕೊಂಡು ನೋಡಿದ್ದಾರೆ.

Udupi police arrested the young man who burst firecrackers on the car

ಅದೇನೋ ಯುವಕನ ಅದೃಷ್ಟ ಚನ್ನಾಗಿತ್ತು. ಒಂದು ವೇಳೆ ರಾಕೆಟ್ ಪಟಾಕಿಯಿಂದ ಕಾರಿಗೆ ಬೆಂಕಿ ಹೊತ್ತುಕೊಂಡಿದ್ದರೆ ಅದೆಷ್ಟು ಅಪಾಯ ಎದುರಾಗುತ್ತಿತ್ತೋ ಗೊತ್ತಿಲ್ಲ. ಆದರೆ ಅದೃಷ್ಟವಶಾತ್ ಆ ದುರ್ಘಟನೆ ನಡೆದಿಲ್ಲ. ಇದೆಲ್ಲದರ ಅರಿವಿದ್ದು ಯುವಕ ಈ ದುಸ್ಸಾಹಸಕ್ಕೆ ಕೈ ಹಾಕಿದ್ದಾನೆ. ಡಿಸಿ ಕಛೇರಿ ರಸ್ತೆಯ ಬಳಿ ನಡೆದ ಈ ಘಟನೆಯ ಸಂಪೂರ್ಣ ವಿಡಿಯೋವನ್ನು ಸ್ಥಳೀಯರು ಸೆರೆ ಹಿಡಿದಿದ್ದಾರೆ. ಸದ್ಯ ಇದು ವೈರಲ್ ಆದ ಬೆನ್ನಲ್ಲೆ ಪೊಲೀಸರು ಕಾರಿನ ಮೇಲೆ ಪಟಾಕಿ ಹಚ್ಚಿದವನಿಗೆ ಚಳಿ ಬಿಡಿಸಿದ್ದಾರೆ.

English summary
Udupi police arrested a youth named Vishal who was driving dangerously along the road by bursting rocket firecrackers on the car.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X