ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯಲ್ಲಿ ಅಂತ್ಯಕ್ರಿಯೆಗೆ ಮಹಾರಾಷ್ಟ್ರದಿಂದ ಬಂದ ಜನ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಏಪ್ರಿಲ್ 30: ಉಡುಪಿಯ ಕಾರ್ಕಳ ತಾಲ್ಲೂಕಿನ ಶವ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ 24 ಮಂದಿಯನ್ನು ಇಂದು ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಇದ್ದರೂ ಮಹಾರಾಷ್ಟ್ರದಿಂದ ಮೃತರ ಅಂತ್ಯಕ್ರಿಯೆಗೆ ಬಂದವರನ್ನೂ ಹೋಮ್ ಕ್ವಾರಂಟೈನ್ ನಲ್ಲಿ ಇಡಲಾಗಿದೆ.

ಏಪ್ರಿಲ್ 28 ರಂದು ಮರ್ಣೆ ಗ್ರಾಮದ ಅಜೆಕಾರು ಕುರ್ಪಾಡಿ ಮಹಾಬಲ ಶೆಟ್ಟಿ ಎಂಬುವರು ಹೃದಯಾಘಾತದಿಂದ ನಿಧನ ಹೊಂದಿದ್ದರು. ಮುಂಬೈನಿಂದ ಮೃತದೇಹವನ್ನು ಬುಧವಾರ ಹುಟ್ಟೂರಿಗೆ ತಂದು ಅಂತ್ಯಸಂಸ್ಕಾರ ಮಾಡಲಾಗಿತ್ತು. ಕೊರೊನಾ ಸೋಂಕು ಹೆಚ್ಚಿರುವ ಮುಂಬೈಯಿಂದ ಶವ ತಂದಿರುವುದಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ.

People Come From Maharashtra For Funeral In Udupi

ಈ ಹಿನ್ನೆಲೆಯಲ್ಲಿ ಮೃತ ದೇಹದೊಂದಿಗೆ ಮುಂಬೈಯಿಂದ ಬಂದಿರುವ 6 ಮಂದಿಗೂ ಕ್ವಾರಂಟೈನ್ ಮಾಡಲಾಯಿತು. ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅನುಷಾ ಶೆಟ್ಟಿ ಉಪಸ್ಥಿತಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

ಅಂತ್ಯಕ್ರಿಯೆಯಲ್ಲಿ ಪಂಚಾಯತ್ ಪಿಡಿಒ, ಗ್ರಾಮ‌ಲೆಕ್ಕಾಧಿಕಾರಿ ಮತ್ತು ಸ್ಥಳೀಯ ಎಸ್ಐ ಕೂಡ ಭಾಗಿಯಾಗಿದ್ದರು. ಇದೇ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡ ಮತ್ತಿಬ್ಬರಿಗೂ ಹೋಮ್ ಕ್ವಾರಂಟೈನ್ ಮಾಡಲಾಗಿದ್ದು, ಕ್ವಾರಂಟೈನ್ ಗೆ ಒಳಗಾದ ಉಳಿದ ಹದಿನಾರು ಜನ ಬೆಳ್ಮಣ್ ನವರಾಗಿದ್ದಾರೆ.

English summary
The 24 people who attended the funeral in Karkala taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X