ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಭೆಯಲ್ಲಿ ಪೇಜಾವರ ಶ್ರೀಗಳು ಭಾಗಿ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ನವೆಂಬರ್ 2: ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಟ್ರಸ್ಟಿ ಆಗಿರುವ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಅಯೋಧ್ಯೆಯಲ್ಲಿ ರಾಮಲಲ್ಲಾನ ದರ್ಶನ ಪಡೆದರು.

ಭಾನುವಾರ (ನ.1) ರಂದು ಟ್ರಸ್ಟ್ ನ ಸಭೆಯಲ್ಲಿ ಭಾಗಿಯಾಗಿದ್ದ ಶ್ರೀಗಳು, ಸೋಮವಾರ (ನ.2) ಶ್ರೀರಾಮ ಮಂದಿರ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದ್ದಾರೆ.

ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ: 36 ಮಂದಿ ಹಾಗೂ 4 ಸಂಸ್ಥೆಗಳಿಗೆ ಪ್ರಶಸ್ತಿಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ: 36 ಮಂದಿ ಹಾಗೂ 4 ಸಂಸ್ಥೆಗಳಿಗೆ ಪ್ರಶಸ್ತಿ

ಚಾತುರ್ಮಾಸ್ಯ ವ್ರತದಲ್ಲಿದ್ದ ಶ್ರೀಗಳು ಈ ಹಿಂದೆ ನಡೆದಿದ್ದ ರಾಮಜನ್ಮಭೂಮಿ ಟ್ರಸ್ಟ್ ನ ಮಹತ್ವದ ಸಭೆಯಲ್ಲಿ ಹಾಜರಾಗಿರಲಿಲ್ಲ. ಹೀಗಾಗಿ ಈ ಬಾರಿಯ ಸಭೆಯಲ್ಲಿ ಭಾಗಿಯಾಗಿ ಬಳಿಕ ಮೂಲ ರಾಮನ ಸ್ಥಳಕ್ಕೆ ಯತಿ ಪ್ರಣಾಮ ಭೂಮಿ ಪೂಜೆ ನಡೆಸಿದರು. ಶ್ರೀರಾಮನ ಮೂಲ ವಿಗ್ರಹವಿದ್ದ ಜಾಗಕ್ಕೆ ಪೇಜಾವರ ಶ್ರೀಗಳು ನಮಸ್ಕರಿಸಿದರು.

ಕಾಮಗಾರಿ ನಡೆಯುತ್ತಿರುವ ಸ್ಥಳ ವೀಕ್ಷಣೆ

ಕಾಮಗಾರಿ ನಡೆಯುತ್ತಿರುವ ಸ್ಥಳ ವೀಕ್ಷಣೆ

ಬಳಿಕ ಅಯೋಧ್ಯೆಯಲ್ಲಿ ಉತ್ಖನನದ ಸಂದರ್ಭ ಸಿಕ್ಕಿದ ಹಳೆಯ ಮಂದಿರದ ಶಿಲೆ, ಶಿಲಾಸ್ತಂಭಗಳನ್ನು, ಕಾಮಗಾರಿ ನಡೆಯುತ್ತಿರುವ ಸ್ಥಳವನ್ನು ವೀಕ್ಷಿಸಿದರು. ಅಲ್ಲಿನ ಕನಕ ಭವನ ಹಾಗೂ ಹನುಮಾನ್ ಗಡಿ ದರ್ಶನವನ್ನೂ ಪಡೆದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರು, ರಾಮ ದೇವರ ಮಂಗಳಾರತಿ ನೋಡಿ, ದೇವರ ಶಯನೋತ್ಸವ ಮುಗಿಸಿ, ಪೇಜಾವರ ಮಠದ ಮಧ್ವಾಶ್ರಮಕ್ಕೆ ಮರಳಿದರು.

ಹಳೆಯ ಕಟ್ಟಡಗಳ ತೆರವು

ಹಳೆಯ ಕಟ್ಟಡಗಳ ತೆರವು

ಬಳಿಕ ಹೇಳಿಕೆ ಬಿಡುಗಡೆ ಮಾಡಿರುವ ಶ್ರೀಗಳು, ""ಶ್ರೀರಾಮಚಂದ್ರನ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ವೀಕ್ಷಿಸಿದ್ದೇವೆ. ಭೂಮಿಯ ಸಮತಟ್ಟು ಕಾರ್ಯ ಪ್ರಾರಂಭವಾಗಿದೆ. ಅಕ್ಕಪಕ್ಕದಲ್ಲಿರುವ ಹಳೆಯ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.

ಕೆತ್ತನೆ ಕಾರ್ಯ ಪೂರ್ಣ

ಕೆತ್ತನೆ ಕಾರ್ಯ ಪೂರ್ಣ

ರಾಮಜನ್ಮ ಭೂಮಿಯಲ್ಲಿ ಬೃಹತ್ ಮಂದಿರ ನಿರ್ಮಾಣವಾಗಲಿರುವುದರಿಂದ ಭೂಮಿಯ ಧಾರಣಾ ಸಾಮರ್ಥ್ಯವೇನು? ಮಣ್ಣಿನ ಗುಣವೇನು? ಎಂಬುದನ್ನು ಪರೀಕ್ಷಿಸುವ ಕಾರ್ಯ ನಡೆಯುತ್ತಿದೆ. ಈಗಾಗಲೇ ಕೆತ್ತನೆ ಕಾರ್ಯ ಪೂರ್ಣಗೊಳಿಸಿ, ಸಮತಟ್ಟಾಗಿ ಸೇರಿಸಿಡಲಾದ ಶಿಲಾಸ್ತಂಭಗಳನ್ನು ಸ್ಥಳಾಂತರಿಸುವ ಕೆಲಸವೂ ಪ್ರಾರಂಭವಾಗಿದೆ'' ಎಂದು ಹೇಳಿದ್ದಾರೆ.

Recommended Video

RCB ಈವತ್ತಿನ ಆಟ win ಆದ್ರೆ ಒಳ್ಳೇದು | RCBvsSRH | Oneindia Kannada
Array

Array

ರಾಮಮಂದಿರ ನಿರ್ಮಾಣದ ರೂಪುರೇಷೆ ಕುರಿತು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಎಲ್&ಟಿ ಕಂಪನಿಗೆ ಮಂದಿರ ಕಾಮಗಾರಿ ಜವಾಬ್ದಾರಿ ವಹಿಸಲು ತೀರ್ಮಾನಿಸಲಾಗಿದೆ. ಟಾಟಾ ಕಂಪನಿಗೆ ಮಂದಿರದ ಕಾಮಗಾರಿ ಮೇಲುಸ್ತುವಾರಿ ವಹಿಸಲಾಗುವುದು. ಎರಡೂ ಕಂಪನಿಗಳು ಈ ಜವಾಬ್ದಾರಿಯನ್ನು ಒಪ್ಪಿಕೊಂಡಿವೆ. L&t ಕಂಪನಿಯ ಕಾಮಗಾರಿಯನ್ನು ಟಾಟಾ ಸಂಸ್ಥೆ ಪರಿಶೀಲನೆ ನಡೆಸುತ್ತದೆ ಎಂದು ಮಾಹಿತಿ ನೀಡಿದರು.

English summary
Sri Vishwa Prasanna Theertha Swamiji of Pejawar Math, who is a trustee of the Srirama Janmabhoomi Tirthakshetra Trust, received the Darshan of Ramalalla in Ayodhya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X