ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಸಾರ್ವಜನಿಕ ಸ್ಥಳದಲ್ಲಿ ಮೂತ್ರ:ಮಹಿಳೆಯರಿಂದ ಯುವಕನಿಗೆ ಥಳಿತ

By ಉಡುಪಿ ಪ್ರತಿನಿಧಿ
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಸಾರ್ವಜನಿಕ ಸ್ಥಳದಲ್ಲಿ ಮೂತ್ರ:ಮಹಿಳೆಯರಿಂದ ಯುವಕನಿಗೆ ಥಳಿತ | Oneindia Kannada

    ಉಡುಪಿ, ಆಗಸ್ಟ್ 9: ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದ ಯುವಕನನ್ನು ಮಹಿಳೆಯರ ಗುಂಪೊಂದು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿರುವ ಅಮಾನವೀಯ ಘಟನೆ ಕುಂದಾಪುರದ ಎಲ್‌ಐಸಿ ರಸ್ತೆಯಲ್ಲಿ ನಡೆದಿದೆ.

    ಯುವಕ ಕೆಲವು ದಿನಗಳಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ವರ್ತಿಸುತ್ತಿದ್ದು, ಜನನಿಬಿಡ ರಸ್ತೆಗಳಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಎನ್ನಲಾಗಿದೆ. ಈ ಸಂದರ್ಭ ಮಹಿಳೆಯರು ಸಂಚರಿಸುತ್ತಿದ್ದರೂ ಆತ ಅದನ್ನು ಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ ಎನ್ನಲಾಗಿದೆ.

    ಅಮಾಯಕನಿಗೆ ಥಳಿತ: ಮಾನವೀಯತೆ ಮೆರೆದ ಕುಮಟಾ ಪೊಲೀಸರು

    ಯುವಕನ ವರ್ತನೆಯನ್ನು ಗಮನಿಸುತ್ತಿದ್ದ ಸ್ಥಳೀಯರು ಮಹಿಳೆಯರ ನೇತೃತ್ವದಲ್ಲಿ ಈತನನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿ ಎಚ್ಚರಿಕೆ ನೀಡಿದ್ದಾರೆ. ಈ ವಿಷಯ ಪೊಲೀಸರ ಗಮನಕ್ಕೆ ಬಂದ ಬಳಿಕ ಅವರು ಸ್ಥಳಕ್ಕೆ ಧಾವಿಸಿ ಯುವಕನನ್ನು ಗುಂಪು ಹಲ್ಲೆಯಿಂದ ರಕ್ಷಿಸಿದ್ದಾರೆ.

    Pee in public place: Women beat youth in Kundapur

    ಯುವಕ ನಗರದ ಪ್ರಸಿದ್ಧ ಹೊಟೇಲ್ ಉದ್ಯಮಿಯೋರ್ವರ ಮಗನಾಗಿದ್ದು, ವಿವಾಹಿತನಾಗಿರುವ ಈತನಿಗೆ ಮಕ್ಕಳಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. ಕೆಲ ವು ದಿನಗಳಿಂದ ಈತನ ಮನಸ್ಸು ಸ್ಥಿಮಿತದಲ್ಲಿರದ ಕಾರಣ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆಗೆ ತೊಡಗುತ್ತಿದ್ದ ಎನ್ನಲಾಗಿದೆ.

    ಈತನ ವರ್ತನೆ ಸಾರ್ವಜನಿಕರಿಗೆ ಮುಜುಗರ ತರುವಂಥದ್ದಾಗಿದ್ದರೂ ತಾವೇ ಆತನನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸುವ ಬದಲು ಆತನ ಕುಟುಂಬದವರು ಅಥವಾ ಪೊಲೀಸರಿಗೆ ಮಾಹಿತಿ ನೀಡಿ ಸೂಕ್ತ ಕ್ರಮಕ್ಕೆ ಕೈಗೊಳ್ಳುವಂತೆ ಮಾಡಬಹುದಿತ್ತು.

    ಒಬ್ಬ ವ್ಯಕ್ತಿಯನ್ನು ಹಲವರು ಸೇರಿ ಕಂಬಕ್ಕೆ ಕಟ್ಟಿ ಹಾಕಿ ಥಳಿಸುವಂಥ ವರ್ತನೆ ಕುಂದಾಪುರದ ಪ್ರಜ್ಞಾವಂತ ನಾಗರಿಕರಿಗೆ ತಕ್ಕುದಲ್ಲ ಎಂದು ವಿಚಾರವಂತರು ಗುಂಪು ಹಲ್ಲೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Group of women beats a youth binding on the electric poll who was pee in public place in Kundapur town. Family members of the youth have claimed that he has last his mental stability.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more