ಬಸ್ ನಲ್ಲೇ ಹೃದಯಾಘಾತ; 22 ವರ್ಷದ ಯುವಕ ಸಾವು
ಉಡುಪಿ, ಮಾರ್ಚ್ 10: ಬೆಂಗಳೂರಿನಿಂದ ಕುಂದಾಪುರಕ್ಕೆ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿ ಪ್ರಯಾಣದ ನಡುವೆಯೇ ಹೃದಯಾಘಾತದಿಂದ ಮೃತಪಟ್ಟ ಘಟನೆ ಕುಂದಾಪುರದಲ್ಲಿ ನಡೆದಿದೆ.
ಕುಂದಾಪುರದ ಬಳ್ಕೂರು ದೇವಸ್ಥಾನ ಬೆಟ್ಟು ನಿವಾಸಿ ಶ್ರೀಧರ ಮೂರ್ತಿ ಅವರ ಪುತ್ರ ಸುಹಾನ್ (22) ಮೃತಪಟ್ಟವರು. ಸುಹಾನ್ ಬೆಂಗಳೂರು ಕಾಲೇಜಿನಲ್ಲಿ ಕೊನೆಯ ವರ್ಷದ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ.

ರಾತ್ರಿ 9.45ಕ್ಕೆ ಊರಿಗೆ ತೆರಳಲು ಬೆಂಗಳೂರಿನಿಂದ ಬಸ್ಸು ಏರಿದ್ದ. ಆದರೆ ಬೆಳಿಗ್ಗೆ 7.30ರ ವೇಳೆಗೆ ಬಸ್ಸು ಕುಂದಾಪುರಕ್ಕೆ ತಲುಪಿದರೂ ಸುಹಾನ್ ಇಳಿದಿರಲಿಲ್ಲ. ಇದನ್ನು ಕಂಡ ಬಸ್ ನಿರ್ವಾಹಕ ಪರಿಶೀಲಿಸಿದಾಗ ಸುಹಾನ್ ಮೃತಪಟ್ಟಿರುವುದು ತಿಳಿದಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.












Click it and Unblock the Notifications