ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಂದಾಪುರ, ಕಲಬುರಗಿಯಲ್ಲಿ ಮತ್ತೆ "ಪಾಕಿಸ್ತಾನ್ ಜಿಂದಾಬಾದ್"

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮಾರ್ಚ್ 02: ಹುಬ್ಬಳ್ಳಿ, ಬೆಂಗಳೂರಿನಲ್ಲಿ ಪಾಕ್ ಪರ ಘೋಷಣೆ ಕೂಗಿದ ಬೆನ್ನಲ್ಲೇ ಇದೀಗ ಕುಂದಾಪುರ, ಕಲಬುರಗಿಯಲ್ಲೂ ಪಾಕ್ ಪರ ಘೋಷಣೆ ಕೇಳಿಬಂದಿದೆ. ಹುಬ್ಬಳ್ಳಿಯಲ್ಲಿ ಮೊದಲು ಪ್ರತಿಷ್ಠಿತ ಕೆ.ಎಲ್.ಇ ಕಾಲೇಜಿನ ಮೂವರು ವಿದ್ಯಾರ್ಥಿಗಳು "ಪಾಕಿಸ್ತಾನ್ ಜಿಂದಾಬಾದ್" ಎಂದು ಘೋಷಣೆ ಕೂಗಿದ ವಿಡಿಯೋ ವೈರಲ್ ಆಗಿತ್ತು.

ಅದಾದ ನಂತರ ಬೆಂಗಳೂರಿನಲ್ಲಿ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಅಮೂಲ್ಯ ಎಂಬ ಯುವತಿ ಪಾಕ್ ಪರ ಘೋಷಣೆ ಕೂಗಿದ್ದರು. ಕಳೆದ ವಾರವಷ್ಟೇ ಹುಬ್ಬಳ್ಳಿಯ ಶಾಲೆಯೊಂದರ ಗೋಡೆ ಮೇಲೆ ಪಾಕಿಸ್ತಾನ್ ಜಿಂದಾಬಾದ್ ಎಂಬ ಬರಹಗಳು ಗೋಚರಿಸಿದ್ದವು. ಇದೀಗ ಮತ್ತೆ ಕುಂದಾಪುರ, ಕಲಬುರಗಿಯಲ್ಲೂ ಪಾಕ್ ಪರ ಘೋಷಣೆ ಕೇಳಿಬಂದಿದೆ.

ಪಾಕ್ ಪರ ಘೋಷಣೆ; ವಕೀಲರ ಮೇಲೆ ಹೈಕೋರ್ಟ್ ಗರಂಪಾಕ್ ಪರ ಘೋಷಣೆ; ವಕೀಲರ ಮೇಲೆ ಹೈಕೋರ್ಟ್ ಗರಂ

ಕುಂದಾಪುರದ ಮಿನಿ ವಿಧಾನಸೌಧದ ಎದುರು ವ್ಯಕ್ತಿಯೊಬ್ಬರು "ಪಾಕಿಸ್ತಾನ ಜಿಂದಾಬಾದ್" ಎಂದು ಇಂದು ಘೋಷಣೆ ಕೂಗಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬರು ಇಲ್ಲಿನ ಮಿನಿ ವಿಧಾನ ಸೌಧದ ಬಳಿ "ಪಾಕಿಸ್ತಾನ ಜಿಂದಾಬಾದ್" ಎಂದು ನಿರಂತರವಾಗಿ ಘೋಷಣೆ ಕೂಗಿದ್ದು, ಈ ವಿಚಾರ ತಿಳಿದು ಸ್ಥಳಕ್ಕೆ ಬಂದ ಕುಂದಾಪುರ ಪೊಲೀಸ್ ಠಾಣಾಧಿಕಾರಿ ಹರೀಶ್ ಘೋಷಣೆ ಕೂಗಿದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

Pakistan Zindabad Slogan In Kalaburagi And Kundapur

ನಿನ್ನೆ ಕಲಬುರಗಿಯಲ್ಲಿನ ಸಾತ್ ಗುಂಬಜ್ ನಲ್ಲಿನ ಮನೆ ಗೋಡೆಯೊಂದರ ಮೇಲೆ ಪಾಕಿಸ್ತಾನ್ ಪರವಾಗಿ ಹಾಗೂ ಮೋದಿ ವಿರುದ್ಧವಾಗಿ ಟೀಕೆಗಳನ್ನು ಗೋಡೆಗಳ ಮೇಲೆ ಬರೆಯಲಾಗಿರುವುದಾಗಿ ತಿಳಿದುಬಂದಿದೆ. ಪೊಲೀಸರು ಈ ಬರಹಗಳನ್ನು ಅಳಿಸಿದ್ದು, ಇದರ ಹಿಂದೆ ಯಾರಿದ್ದಾರೆ ಎಂದು ತನಿಖೆ ಕೈಗೊಂಡಿದ್ದಾರೆ. ಆ ಪ್ರದೇಶದ ಸಿ.ಸಿ.ಟಿವಿಯನ್ನು ಪರಿಶೀಲಿಸುತ್ತಿದ್ದಾರೆ.

English summary
After pro pakistan slogan incident in Hubballi and bengaluru, kundapur and kalaburagi also reported this. Police arrested person who is shouting pakistan zindabad in mini vidhanasouda of kundapura,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X