ಶೀರೂರು ಶ್ರೀ ಸಾವು: ಕೃಷ್ಣ.. ಕೃಷ್ಣಾ.. ಮತ್ತೊಂದು ಆಡಿಯೋ ವೈರಲ್
Recommended Video

ಶೀರೂರು ಮಠದ ಶ್ರೀಗಳು ಮತ್ತೊಬ್ಬರ ಜತೆ ನಡೆಸಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಏನಿದೆ ಎಂಬ ಮಾಹಿತಿಯನ್ನು ನಿಮ್ಮೆದುರು ತೆರೆದಿಡುವ ವರದಿಯಿದು (ಸಂ)
ಉಡುಪಿ ಶೀರೂರು ಮಠದ ಲಕ್ಶ್ಮೀವರ ತೀರ್ಥರ ಸಂಶಯಾಸ್ಪದ ಸಾವಿನ ಸುತ್ತ, ಬಗೆದಷ್ಟು ಹೊಸಹೊಸ ಸುದ್ದಿಗಳು ಹೊರಬೀಳುತ್ತಿದ್ದು, ಉಡುಪಿ ಮಠದ ಇಂದಿನ ಮತ್ತು ಹಿಂದಿನ ಯತಿವರ್ಯರು ಏನೇನು ಮಾಡಿದ್ದಾರೆ ಎಂದು ವೈಕುಂಠಸ್ಥರಾದ ಶೀರೂರು ಶ್ರೀಗಳ ಧ್ವನಿಯೆಂದು ಹೇಳಲಾಗುವ ಆಡಿಯೋ ಸದ್ಯ ವೈರಲ್ ಆಗಿದೆ.
ಈ ನಡುವೆ, ಉಡುಪಿ ಪೊಲೀಸ್ ವರಿಷ್ಠರು ತನಿಖೆಯ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿಯನ್ನು ಬಹಿರಂಗ ಪಡಿಸದೇ, ಶ್ರೀಗಳ ಸಾವಿನ ಸಂಬಂಧ ಯಾರನ್ನೂ ಇದುವರೆಗೆ ಬಂಧಿಸಿಲ್ಲ, ವಿಚಾರಣೆಗೆ ಮಾತ್ರ ಕರೆಸಿದ್ದೇವೆ ಎಂದಿದ್ದಾರೆ. ರಮ್ಯಾ ಶೆಟ್ಟಿ ಎನ್ನುವ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಶನಿವಾರ (ಜುಲೈ 21) ವರದಿಯಾಗಿತ್ತು.
ಶೀರೂರು ಶ್ರೀಗಳ ಧ್ವನಿಯೆಂದು ಹೇಳಲಾಗುವ ಆಡಿಯೋವನ್ನು ಸುದ್ದಿವಾಹಿನಿಗಳು ಪ್ರಸಾರ ಮಾಡಿದ್ದು, ಉಡುಪಿಯ ಯತಿಗಳಿಗೂ ಹೆಣ್ಣಿನ ಸಂಬಂಧವಿತ್ತು. ಅವರು ಮಾಡಿದ್ದು ಸರಿಯೆಂದಾದರೆ, ನಾನು ಮಾಡಿದ್ದರಲ್ಲಿ ತಪ್ಪೇನು ಎಂದು ಆಡಿಯೋದಲ್ಲಿ ಶೀರೂರು ಶ್ರೀಗಳು ಪ್ರಶ್ನಿಸಿದ್ದಾರೆ.
ಈ ನಡುವೆ, ತೆರವಾಗಿರುವ ಶೀರೂರು ಮಠಕ್ಕೆ ಉತ್ತರಾಧಿಕಾರಿಯನ್ನಾಗಿ ಶೀಘ್ರವೇ ಸೂಕ್ತರನ್ನು ನೇಮಿಸಲಾಗುವುದು, ಜೊತೆಗೆ ಶೀರೂರು ಮಠದ ಹೆಸರಿನಲ್ಲಿರುವ ಆಸ್ತಿಪಾಸ್ತಿಗಳನ್ನು ನೋಡಿಕೊಳ್ಳಲು ಸಮಿತಿಯೊಂದನ್ನು ರಚಿಸಲಾಗುವುದು ಎಂದು ಸೋದೆ ಮಠದ ಶ್ರೀಗಳು ಹೇಳಿದ್ದಾರೆ.
ಮಹಿಳೆಯ ವಿಚಾರದ ಜೊತೆಗೆ, ಅಷ್ಟಮಠಗಳ ಯತಿಗಳು ತಮಗೆ ಹಣದ ಡಿಮ್ಯಾಂಡ್ ಹಾಕಿದ್ದಾರೆ ಎನ್ನಲಾಗುವ ಆಡಿಯೋ ತುಣುಕು ಕೂಡಾ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಜ್ಜರು ಒಂದು ಕೋಟಿ ರೂಪಾಯಿ. ಕೇಳಿದ್ದಾರೆ ಎಂದು ಶೀರೂರು ಶ್ರೀಗಳು ಅನಾಮಿಕರೊಬ್ಬರು ಬಳಿ ಸಂಭಾಷಣೆ ನಡೆಸಿದ ಆಡಿಯೋ ಇದಾಗಿದೆ. ಕುತೂಹಲಕಾರಿ ಸಂಭಾಷಣೆಯ ಆಯ್ದಭಾಗ

ಉದ್ದೇಶಪೂರ್ವಕವಾಗಿ ರೆಕಾರ್ಡ್ ಮಾಡಿರುವಂತೆ ಕಾಣುವ ಆಡಿಯೋ
35ನಿಮಿಷದ ಈ ಆಡಿಯೋ ತುಳು ಮತ್ತು ಕನ್ನಡ ಭಾಷೆಯಲ್ಲಿದ್ದು, ಉದ್ದೇಶಪೂರ್ವಕವಾಗಿ ರೆಕಾರ್ಡ್ ಮಾಡಿರುವಂತೆ ಕಾಣುತ್ತಿದೆ. ಉಡುಪಿಯ ಪೀಠಾಧಿಪತಿಗಳನ್ನು ಟೀಕಿಸುತ್ತಿದ್ದ ಶೀರೂರು ಶ್ರೀಗಳು, ನಮ್ಮ ಮಠಗಳಲ್ಲಿ ಗ್ರೇಟ್ ಅಂದರೆ ಅದು ಪುತ್ತಿಗೆ ಶ್ರೀಗಳು, ಅಮೆರಿಕಾದಲ್ಲಿ ಚರ್ಚ ಅನ್ನು ದೇವಸ್ಥಾನವಾಗಿ ಪರಿವರ್ತಿಸಿದ್ದಾರೆಂದು ಹೇಳಿದ್ದಾರೆ.

ಬಾಯಿಬಿಡಿಸುವ ಉದ್ದೇಶದಿಂದಲೇ ಮಾಡಲಾಗಿರುವಂತೆ ಕಾಣುವ ಆಡಿಯೋ
ಶೀರೂರು ಶ್ರೀಗಳ ಬಾಯಿಬಿಡಿಸುವ ಉದ್ದೇಶದಿಂದಲೇ ಒಂದೊಂದೇ ಪ್ರಶ್ನೆಯನ್ನು ಅನಾಮಿಕ ಕೇಳುತ್ತಿರುವಂತೆ ಭಾಷವಾಗುತ್ತಿದ್ದು, ಕೆಲವು ದಿನಗಳ ಕೆಳಗೆ ಮಠದಲ್ಲಿ ಸಭೆಯೊಂದು ನಡೆದಿತ್ತು. ಅದರಲ್ಲಿ ಕೃಷ್ಣಾಪುರ ಮಠದ ಶ್ರೀಗಳು ಮತ್ತು ತಮಗೆ ಜಗಳ ನಡೆದಿದ್ದನ್ನು ಶ್ರೀಗಳು ಹೇಳಿದ್ದಾರೆ. ಹೆಚ್ಚು ಮಾತನಾಡಿದರೆ, ನಿಮ್ಮ ಮತ್ತು ನಿಮ್ಮ ಹಿಂದಿನ ಶ್ರೀಗಳ ವಿಷಯವನ್ನೆಲ್ಲಾ ಹೊರಗೆಳೆಯುತ್ತೇನೆ ಎಂದು ಹೇಳಿದ್ದೇನೆ.

ಕೃಷ್ಣಾಪುರ ಶ್ರೀಗಳು ಆರು ಹೆಣ್ಣು ಮಕ್ಕಳ ತಂದೆ
ಕೃಷ್ಣಾಪುರ ಶ್ರೀಗಳು ಆರು ಹೆಣ್ಣು ಮಕ್ಕಳ ತಂದೆ, ಅವರೇನು ಸನ್ಯಾಸತ್ವದ ಬಗ್ಗೆ ನನಗೆ ಪಾಠಮಾಡುವುದು. ಪರ್ಕಳದಲ್ಲಿ (ಉಡುಪಿಯಿಂದ ಎಂಟು ಕಿ.ಮೀ ದೂರದ ಊರು) ವಿಲಾಸಕುಮಾರಿ ಎನ್ನುವವರ ಜೊತೆಗೆ ಇವರ ಸಂಬಂಧವಿತ್ತು. ನಾನು ಒಂದು ತಪ್ಪು ಮಾಡಿದ್ದೇನೆ, ಆದರೆ ಧರ್ಮದಿಂದ ಇದ್ದವನು. ಇವರ ಮುಂದೆ, ನನ್ನ ತಪ್ಪು ಲೆಕ್ಕಕ್ಕೇ ಇಲ್ಲ - ಶೀರೂರು ಶ್ರೀಗಳದ್ದು ಎನ್ನಲಾಗುವ ಆಡಿಯೋದಲ್ಲಿ ಶ್ರೀಗಳು ಹೇಳಿದ್ದು.

ಸೆಕ್ಸ್ ಎನ್ನುವುದು ಅಷ್ಟಮಠದಲ್ಲಿ ಹಿಂದೆಯೂ ಇತ್ತು, ಮುಂದೆಯೂ ಇರುತ್ತದೆ
ಸೆಕ್ಸ್ ಎನ್ನುವುದು ಅಷ್ಟಮಠದಲ್ಲಿ ಹಿಂದೆಯೂ ಇತ್ತು, ಮುಂದೆಯೂ ಇರುತ್ತದೆ. ಪುತ್ತಿಗೆ ಮಠದ ಹಿಂದಿನ ಯತಿ ಸುಧೀಂದ್ರ ತೀರ್ಥರು ಶತಾಯುಷಿಗಳು. ಅವರಿಗೆ ಅಕ್ಕಯ್ಯ ಎನ್ನುವ ಮಹಿಳೆಯ ಜೊತೆ ಸಂಬಂಧವಿತ್ತು, ಮಗುವಾಯಿತು. ಅದೇ ಮಗುವಿಗೆ ಸನ್ಯಾಸತ್ವದ ದೀಕ್ಷೆ ಕೊಡಲಾಯಿತು. ಪರ್ಯಾಯವನ್ನೂ ಮಾಡಿಸಿದರು, ಏಳು ಜನ ಸ್ವಾಮೀಜಿಗಳು ಇದರ ವಿರುದ್ದ ಮದರಾಸು ಹೈಕೋರ್ಟ್ ಮೊರೆಹೋದರು. ಕೋರ್ಟು ತೀರ್ಪು ಪುತ್ತಿಗೆ ಶ್ರೀಗಳ ಪರವಾಗಿಯೇ ಆಯಿತು - ಶೀರೂರು ಶ್ರೀಗಳು.

ಅಜ್ಜರಿಗೆ ಮೂವರು ಮಕ್ಕಳಿದ್ದಾರೆ
ಅಜ್ಜರಿಗೆ ಮೂವರು ಮಕ್ಕಳಿದ್ದಾರೆ. ಉಷಾ ಎನ್ನುವ ಮಹಿಳೆಯ ಜೊತೆ ಲವ್ ಇತ್ತು, ಅವರು ತಮಿಳುನಾಡಿನಲ್ಲಿದ್ದರು. ಅವರು ಇತ್ತೀಚೆಗೆ 76 ವಯಸ್ಸಿನಲ್ಲಿ ನಿಧನಹೊಂದಿದ್ದರು. ಅವರ ಮಕ್ಕಳಿಗೆ ಮಠಕ್ಕೆ ಎಂಟ್ರಿ ಕೊಡಲು ಅಜ್ಜರು ಬಿಡುತ್ತಿರಲಿಲ್ಲ. ಸ್ವಾಮಿಗಳು ಕುದುರೆ ಮೇಲೇರೆ ಹೋಗುವಂತಿಲ್ಲ, ಹೋದರೂ ವಿವಸ್ತ್ರವಾಗಿ ಸಮುದ್ರ ಸ್ನಾನ ಮಾಡಿ ಬರಬೇಕು. ಶ್ರೀಗಳು ವಿಮಾನದಲ್ಲಿ ಪ್ರಯಾಣಿಸಬಾರದು. ಇವರು ಮಾಡಿದರೆ ಸರಿ, ನಾನು ಮಾಡಿದರೆ ತಪ್ಪು - ಶೀರೂರು ಶ್ರೀಗಳು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications