ಮೀನುಗಾರ ಮಹಿಳೆಯರಿಗೆ ಬಡ್ಡಿ ರಹಿತ ಒಂದು ಲಕ್ಷ ರೂಪಾಯಿ ಸಾಲ- ರಾಹುಲ್ ಗಾಂಧಿ ಭರವಸೆ
ಉಡುಪಿ, ಏಪ್ರಿಲ್ 27: ನಮ್ಮ ಸರ್ಕಾರ ಬರುತ್ತಿದ್ದಂತೆ ನಾವು ಮೀನುಗಾರರಿಗೆ ಹೊಸ ಯೋಜನೆ ನೀಡುತ್ತೇವೆ. ಮೀನುಗಾರರಿಗೆ ಮೂರು ಕಾರ್ಯಕ್ರಮ ನೀಡುತ್ತೇವೆ. ಮೀನುಗಾರರಿಗೆ 10 ಲಕ್ಷ ರೂಪಾಯಿ ಭೀಮಾ ಸೌಲಭ್ಯ ನೀಡುತ್ತೇವೆ. ಮೀನುಗಾರ ಮಹಿಳೆಯರಿಗೆ ಬಡ್ಡಿ ರಹಿತ ಒಂದು ಲಕ್ಷ ರೂಪಾಯಿ ಸಾಲ ನೀಡುತ್ತೇವೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ಪುವಿನಲ್ಲಿ ಮೀನುಗಾರರ ಜೊತೆ ಸಂವಾದದಲ್ಲಿ ಮಾತನಾಡಿದ ಅವರು, ಮೀನುಗಾರರಿಗೆ ಡೀಸೆಲ್ ಸಬ್ಸಿಡಿ ಪ್ರತಿದಿನ 500 ಲೀಟರ್ ಸಹಿತ ನೀಡುತ್ತೇವೆ. ಬೆಲೆ ಏರಿಕೆಯಿಂದ ಮೀನುಗಾರರ ಸಂಕಷ್ಟಕ್ಕೀಡಾಗಿದ್ದಾರೆ. ಮೀನುಗಾರರ ಸಮಸ್ಯೆ ಬಗೆಹರಿಸಲು ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತೇವೆ ಎಂದಿದ್ದಾರೆ

ಮೀನುಗಾರರು ಸಮುದ್ರದ ಕೃಷಿಕರು. ಮೀನುಗಾರರರಿಗೆ ಒಂದು ಮಂತ್ರಿ ಮಂಡಲ ಮಾಡಬೇಕು. ರೈತರಿಗೆ ಸಿಗುವ ಎಲ್ಲಾ ಸಹಕಾರ ಸಿಗಬೇಕು. ದೊಡ್ಡ ಸಣ್ಣ ಮೀನುಗಾರರ ಸ್ಪರ್ಧೆ ಬಗ್ಗೆ ಅರಿವಿದೆ. ಬಡ ಮೀನುಗಾರರ ಜೊತೆ ಶ್ರೀಮಂತ ಮೀನುಗಾರರ ಸ್ಪರ್ಧೆ ನಿಲ್ಲಿಸಬೇಕು. ಮೀನುಗಾರರ ಜೊತೆ ಮತ್ತಷ್ಟು ಆಳವಾದ ಸಂವಾದ ಮಾಡಬೇಕಾಗಿದೆ. ನಾನು ಕೇರಳದಲ್ಲಿ ಮುಂಜಾನೆ 4ಕ್ಕೆ ಮೀನುಗಾರಿಕೆಗೆ ಹೋಗಿದ್ದೆ. ಮೀನುಗಾರರ ನೋವು ನಲಿವು ನನಗೆ ಗೊತ್ತಿದೆ ಎಂದರು.
ಸಿದ್ದರಾಮಯ್ಯ ಸರ್ಕಾರ ಇದ್ದಾಗ ಮೀನುಗಾರರಿಗೆ ಶೇಕಡಾ 80ರಷ್ಟು ಸಮುದ್ರದ ಮೇಲೆ ಹಿಡಿತ ಇತ್ತು. ಈಗ ಖಾಸಗಿಯವರ ಪಾಲಾಗುತ್ತಿದೆ. ನಿಮ್ಮ ಹೋರಾಟ, ಸ್ಪರ್ಧೆ ನನಗೆ ಅರ್ಥವಾಗುತ್ತದೆ. ನಿಮ್ಮ ಮಕ್ಕಳ ಶಿಕ್ಷಣ ಕಷ್ಟವಾಗಿದೆ, ಅದು ಕೂಡಾ ನನಗೆ ಗೊತ್ತು ಅನೇಕ ಸಮಸ್ಯೆಗಳಿಂದ ಮೀನುಗಾರರು ಬಳಲಿದ್ದೀರಿ. ಜಿಎಸ್‌ಟಿ ಡೀಸೆಲ್ ಬೆಲೆ ಏರಿಕೆ ಎಲ್ಲಾ ಸಮಸ್ಯೆ ಆಗಿರುವುದು ಗೊತ್ತು. ಸರ್ಕಾರ ಬರುತ್ತಿದ್ದಂತೆ ಖಚಿತ ಯೋಜನೆ ರೂಪಿಸುತ್ತೇವೆ ಎಂದಿದ್ದಾರೆ.

ನೀವು ಕೂಡ ರೈತರಂತೆ ದುಡಿಯುವವರು. ತಾವು ಸಮುದ್ರದಲ್ಲಿ ಕೃಷಿ ಮಾಡುತ್ತೀರಿ. ಕೃಷಿ ರೈತರಿಗೆ ಸಿಗುವ ರಕ್ಷಣೆ ಮೀನುಗಾರರಿಗೂ ಸಿಗುತ್ತದೆ. ಮೀನುಗಾರರಿಗೆ ಪ್ರತ್ಯೇಕ ಇಲಾಖೆ ರೂಪಿಸುತ್ತೇವೆ. ನಿಮ್ಮ ಸಂಕಷ್ಟ ಅರಿತಿದ್ದೇನೆ. ನಿಮ್ಮ ಅಪಾಯದ ಬಗ್ಗೆ ನಮಗೆ ಗಂಭೀರತೆ ಇದೆ. ಮೀನುಗಾರಿಗೆ ಬಹಳ ಕಷ್ಟಕರ ವೃತ್ತಿ. ಒಂದು ದಿನದಲ್ಲಿ ನಿಮ್ಮೆಲ್ಲಾ ಕಷ್ಟ ತಿಳಿಯಲು ಸಾಧ್ಯವಿಲ್ಲ. ನಾನು ನಿಮ್ಮ ಕುಟುಂಬದ ಸದಸ್ಯ. ನೇರವಾದ ಸಂವಾದದಿಂದ ನಮ್ಮಿಬ್ಬರ ಭಾವನೆ ವಿನಿಮಯ ಆಗಿದೆ. ನಿಮ್ಮ ನೋವು ನಲಿವಿನಲ್ಲಿ ನಾನು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಭರವಸೆ ನೀಡಿದರು.












Click it and Unblock the Notifications