ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದಿನಿಂದ ಉಡುಪಿಯಲ್ಲಿ ಹೊರ ರಾಜ್ಯದವರಿಗೆ ಸಾಂಸ್ಥಿಕ ಕ್ವಾರಂಟೈನ್ ಇಲ್ಲ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜೂನ್ 10: ಬೇರೆ ರಾಜ್ಯದಿಂದ ಬಂದವರಿಗೆ ವಿಧಿಸುತ್ತಿದ್ದ ಸಾಂಸ್ಥಿಕ ಕ್ವಾರಂಟೈನ್ ಇಂದಿನಿಂದ ರದ್ದಾಗಿದೆ. ಇಂದು ಸಾಂಸ್ಥಿಕ ಕ್ವಾರಂಟೈನ್ ಇರುವವರನ್ನು ಹೋಂ ಕ್ವಾರಂಟೈನ್ ಗೆ ಕಳುಹಿಸಲಾಗುತ್ತದೆ. ಸುಮಾರು ಸಾವಿರದ ನೂರು ಮಂದಿಯನ್ನು ಹೋಂ ಕ್ವಾರಂಟೈನ್ ಗೆ ಕಳಿಸುತ್ತೇವೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದ್ದಾರೆ.

ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, "ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಜಿಲ್ಲಾಡಳಿತ ತಯಾರಿ ನಡೆಸುತ್ತಿದೆ. ಈಗಾಗಲೇ ಶಾಲೆ ಹಾಗೂ ಹಾಸ್ಟೆಲ್ ಗಳ ಕ್ವಾರಂಟೈನ್ ಸೆಂಟರ್ ಸ್ಥಗಿತವಾಗಿದೆ. ಎಲ್ಲಾ ಶಾಲಾ ಕಾಲೇಜುಗಳನ್ನು disinfection ಮಾಡಲಾಗಿದೆ. SSLC ಪರೀಕ್ಷೆಯ ಮೂರು ದಿನ‌ ಮುನ್ನ ಮತ್ತೊಮ್ಮೆ ಸ್ಯಾನಿಟೈಸ್ ಮಾಡಲಾಗುತ್ತದೆ. ಪರೀಕ್ಷಾ ಕಾಲದಲ್ಲಿ ಪ್ರತಿ ದಿನ ಸ್ಯಾನಿಟೈಸ್ ಮಾಡುತ್ತೇವೆ. ಪೋಷಕರಿಗೆ ಯಾವುದೇ ಆತಂಕ ಬೇಡ" ಎಂದು ಹೇಳಿದರು.

ಉಡುಪಿ: ಕೊರೊನಾ ವೈರಸ್ ನಿಂದ 9 ಜನ ಪೊಲೀಸರು ಗುಣಮುಖಉಡುಪಿ: ಕೊರೊನಾ ವೈರಸ್ ನಿಂದ 9 ಜನ ಪೊಲೀಸರು ಗುಣಮುಖ

ಸದ್ಯ ಪ್ರತೀ ತಾಲೂಕಿನಲ್ಲಿ ಒಂದು ರಿಸೀವಿಂಗ್ ಸೆಂಟರ್, ಮೂರು ಕ್ವಾರಂಟೈನ್ ಸೆಂಟರ್ ಇರಲಿವೆ. SSLC ಪರೀಕ್ಷೆ ನಡೆಯುವ ಯಾವುದೇ ಶಾಲೆ ಕ್ವಾರಂಟೈನ್ ಸೆಂಟರ್ ಆಗಿ ಉಳಿದಿಲ್ಲ. ಜಿಲ್ಲೆಯಲ್ಲಿ 14,034 ಮಕ್ಕಳು ಪರೀಕ್ಷೆ ಬರೆಯುತ್ತಾರೆ. ಒಟ್ಟು 51 ಪರೀಕ್ಷಾ ಕೇಂದ್ರವಿದೆ ಎಂದು ತಿಳಿಸಿದರು.

No Institutional Quarantine In Udupi For Outside State People

ಇದೇ ವೇಳೆ, ಸಾಮಾಜಿಕ ಜಾಲತಾಣದಲ್ಲಿ ಕೋವಿಡ್ ಆಸ್ಪತ್ರೆಗಳು ಹಣ ಪೀಕುತ್ತಿವೆ ಎಂದು ಸುಳ್ಳುಸುದ್ದಿ ಹಬ್ಬಿಸುತ್ತಿರುವವರಿಗೆ ಎಚ್ಚರಿಕೆ ನೀಡಿದ ಡಿಸಿ, ಜಿಲ್ಲಾಡಳಿತ ಅಥವಾ ಕೋವಿಡ್ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆಗಾಗಿ ಒಂದು ರುಪಾಯಿ ಹಣವನ್ನೂ ಯಾರಿಂದಲು ಪಡೆದಿಲ್ಲ. ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗಿತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸುಳ್ಳು ಸುದ್ದಿ ಹಬ್ಬಿಸಿದರೆ ಕಠಿಣ ಕ್ರಮ ಅನಿವಾರ್ಯ. ಹುಷಾರ್ ಎಂದು ಎಚ್ಚರಿಕೆ ನೀಡಿದರು.

English summary
No institutional quarantine for outside state people from today in udupi district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X