ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮಮಂದಿರ ಬಳಿಕ ಮಥುರಾ ಕೃಷ್ಣ, ಕಾಶಿ ವಿಶ್ವನಾಥ ಬಿಡುಗಡೆ: ಗೋ.ಮ.

|
Google Oneindia Kannada News

ಉಡುಪಿ, ನವೆಂಬರ್ 28: ಅಯೋಧ್ಯೆಯ ರಾಮಜನ್ಮ ಭೂಮಿಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣವಾದ ಬಳಿಕ ಮಥುರಾದ ಕೃಷ್ಣ ಹಾಗೂ ಕಾಶಿಯ ವಿಶ್ವನಾಥನ ಬಿಡುಗಡೆ ಆಗಬೇಕಿದೆ ಎಂದು ಬಿಜೆಪಿ ವಕ್ತಾರ ಗೋ ಮಧುಸೂದನ್ ಹೇಳಿದ್ದಾರೆ.

ಉಡುಪಿಯಲ್ಲಿ ಪರ್ಯಾಯ ಪೀಠಾಧೀಶ ಪಲಿಮಾರು ಮಠದ ವಿದ್ಯಾಧೀಶತೀರ್ಥರ ಮಹತ್ವಾಕಾಂಕ್ಷಿ ಯೋಜನೆಯಾದ ಉಡುಪಿ ಶ್ರೀಕೃಷ್ಣ ಮಠದ ಗರ್ಭ ಗುಡಿಗೆ ಚಿನ್ನದ ಹೊದಿಸುವ ಕಾರ್ಯಕ್ಕೆ ಬುಧವಾರ ರಾಜಾಂಗಣದಲ್ಲಿ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಪೇಜಾವರ ಶ್ರೀಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಪೇಜಾವರ ಶ್ರೀ

ಅಯೋದ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಆಗಬೇಕು. ಇಡೀ ದೇಶವೇ ಈ ಬಗ್ಗೆ ಸಂಕಲ್ಪ ಮಾಡಿದೆ. ಸಾಧು-ಸಂತರು, ಕೋಟ್ಯಂತರ ಜನ ಪ್ರಧಾನಿಗೆ ಕರೆ ಕೊಟ್ಟಿದ್ದಾರೆ. ರಾಮನಿಗೆ ಭವ್ಯವಾದ ಮಂದಿರ ಕಟ್ಟಲೇಬೇಕು ಎಂದು ಒತ್ತಾಯಿಸಿದ್ದಾರೆ. "ಪೆಹೆಲೆ ಮಂದಿರ್, ಬಾದ್ ಮೆ ಎಲೆಕ್ಷನ್" ಎಂದು ಕರೆ ನೀಡಿದ್ದಾರೆ ಎಂದರು.

No compromise on Ayodhya, next will Mathura and Kashi: Go Madhusudana

ರಾಮ ಮಂದಿರ ವಿಚಾರದಲ್ಲಿ ದೇಶದಾದ್ಯಂತ ದೊಡ್ಡ ಚರ್ಚೆ ನಡೆಯುತ್ತಿದೆ. ಬಾಬರ್ ನ ಮಸೀದಿ ಪರವಾಗಿ ನಿಂತವರಿಗೆ ಈಗ ಹೆದರಿಕೆ ಶುರುವಾಗಿದೆ. ಕೃಷ್ಣ ಜನ್ಮಸ್ಥಾನಕ್ಕೂ ಕೈ ಹಾಕುತ್ತಾರೆಂಬ ಹೆದರಿಕೆ ಅವರಿಗಿದೆ. ಕಾಶಿ ವಿಶ್ವನಾಥ ಮಂದಿರಕ್ಕೆ ಕೈ ಹಾಕುತ್ತಾರೆ ಎಂಬ ಆತಂಕವಿದೆ. ಈ ಮೂರು ದೇವಸ್ಥಾನ ನಮಗೆ ಬೇಕೇ ಬೇಕು ಎಂದರು.

ಮಂದಿರ ಅಲ್ಲೇ ಕಟ್ಟುವೆವು, ಸುಗ್ರೀವಾಜ್ಞೆ ಅಗತ್ಯವಿಲ್ಲ: ಅಮಿತ್ ಶಾಮಂದಿರ ಅಲ್ಲೇ ಕಟ್ಟುವೆವು, ಸುಗ್ರೀವಾಜ್ಞೆ ಅಗತ್ಯವಿಲ್ಲ: ಅಮಿತ್ ಶಾ

ಶ್ರೀ ರಾಮನ ಮಂದಿರದ ಬಳಿಕ ಮಥುರಾ, ಕಾಶಿ ವಿಶ್ವನಾಥ ಮಂದಿರದ ಬಿಡುಗಡೆ ಆಗಬೇಕಿದೆ. ರಾಮಮಂದಿರ ಶಿಲಾನ್ಯಾಸದ ಜೊತೆಗೆ ಇವೆರಡು ಬಿಡುಗಡೆ ಆಗಬೇಕು. ಕೃಷ್ಣ ಹುಟ್ಟಿದ ಮಥುರಾದಲ್ಲಿ ಔರಂಗಜೇಬ್ ಮಸೀದಿ ಕಟ್ಟಿಸಿದ. ಕಾಶಿ ವಿಶ್ವನಾಥ ಮಂದಿರದಲ್ಲಿಯೂ ಮಸೀದಿ ಕಟ್ಟಿಸಿದ. ಈ ಎರಡು ಮಸೀದಿ ಸಹ ಹೋಗಬೇಕಾಗಿದೆ ಎಂದು ಅವರು ಹೆಳಿದರು.

English summary
No compromise on the construction of Ram Mandir in Ayodhya. After that, will built other two temple in Mathura and Kashi, said BJP leader Go Madhusudana in Udupi Krishna mutt on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X