ರಾಜ್ಯದ ಉಸೇನ್ ಬೋಲ್ಟ್ ದಾಖಲೆಯನ್ನೇ ಮುರಿದ ನಿಶಾಂತ್ ಶೆಟ್ಟಿ!
ಉಡುಪಿ, ಫೆಬ್ರವರಿ 18: ರಾಜ್ಯದ ಉಸೇನ್ ಬೋಲ್ಟ್ ಖ್ಯಾತಿಯ ಕಂಬಳ ವೀರ ಶ್ರೀನಿವಾಸ್ ಗೌಡರ ದಾಖಲೆಯನ್ನು ಮೆಟ್ಟಿ ನಿಂತಿದ್ದಾರೆ ಮತ್ತೊಬ್ಬ ಕಂಬಳ ವೀರ.
Recommended Video
ಹೌದು ಶ್ರೀನಿವಾಸ್ ಗೌಡರು ಕಂಬಳ ಅಖಾಡದಲ್ಲಿ ದಾಖಲೆ ಮಾಡಿದ ಕೆಲವೇ ದಿನಕ್ಕೆ ದಾಖಲೆಯನ್ನು ಪುಡಿಗಟ್ಟಿದ್ದಾರೆ ಮತ್ತೊಬ್ಬ ಕಂಬಳ ಓಟಗಾರ ನಿಶಾಂತ್ ಶೆಟ್ಟಿ.
ಕಾರ್ಕಳದ ಬಜಗೌಳಿಯ ನಿವಾಸಿ ನಿಶಾಂತ್ ಶೆಟ್ಟಿ ಅವರು ವೇಣೂರಿನಲ್ಲಿ ನಡೆದ ಕಂಬಳ ಓಟದಲ್ಲಿ ನಿಶಾಂತ್ ಅವರು ಶ್ರೀನಿವಾಸ್ ಗೌಡ ಅವರಿಗಿಂತಲೂ ವೇಗವಾಗಿ ಓಡಿ ಹೊಸ ದಾಖಲೆ ಬರೆದಿದ್ದಾರೆ.

ವೇಣೂರಿನಲ್ಲಿ ನಡೆದ ಕಂಬಳ ಓಟದಲ್ಲಿ ನಿಶಾಂತ್ ಶೆಟ್ಟಿ ಅವರು 143 ಮೀಟರ್ ದೂರವನ್ನು 13.61 ಸೆಕೆಂಡ್‌ನಲ್ಲಿ ಕ್ರಮಿಸಿದ್ದಾರೆ. ಶ್ರೀನಿವಾಸ್ ಗೌಡ ಅವರು 142 ಮೀಟರ್ ದೂರವನ್ನು 13.62 ಸೆಕೆಂಡ್ ನಲ್ಲಿ ಓಡಿದ್ದರು. ಶ್ರೀನಿವಾಸ್ ಗೌಡ ಅವರಿಗಿಂತಲೂ ಒಂದು ಮೀಟರ್ ಹೆಚ್ಚಿನ ದೂರವನ್ನು ಒಂದು ಪ್ರಾಕ್ಷನ್ ಆಫ್ ಸೆಕೆಂಡ್ ಕಡಿಮೆ ಸಮಯದಲ್ಲಿ ನಿಶಾಂತ್ ಶೆಟ್ಟಿ ಓಡಿದ್ದಾರೆ.

ಐಕಳದ ಕಂಬಳದಲ್ಲಿ ಎರಡನೇ ಸ್ಥಾನ
ಐದಾರು ವರ್ಷದಿಂದ ಕಂಬಳ ಓಟದಲ್ಲಿ ಭಾಗವಹಿಸುತ್ತಿರುವ ನಿಶಾಂತ್ ಶೆಟ್ಟಿ, ಮೊನ್ನೆ ಐಕಳದಲ್ಲಿ ಶ್ರೀನಿವಾಸ್ ಗೌಡ ದಾಖಲೆಯ ಓಟ ಓಡಿದಾಗ ಅವರೊಂದಿಗೆ ಇವರೂ ಸ್ಪರ್ಧೆಯಲ್ಲಿದ್ದು ದ್ವಿತೀಯ ಸ್ಥಾನ ಗಳಿಸಿದ್ದರು.

ಈ ರೀತಿಯ ವೇಗದ ಓಟಗಳು ಕಂಬಳದಲ್ಲಿ ಸಾಮಾನ್ಯ: ನಿಶಾಂತ್ ಶೆಟ್ಟಿ
ನಿಶಾಂತ್ ಶೆಟ್ಟಿ ಅವರೇ ಹೇಳುವಂತೆ ಈ ರೀತಿಯ ಓಟಗಳು, ಒಬ್ಬರಿಗಿಂತಲೂ ಮತ್ತೊಬ್ಬರು ವೇಗವಾಗಿ ಓಡುವುದು ಕಂಬಳ ಅಂಗಳದಲ್ಲಿ ಸರ್ವೆ ಸಾಮಾನ್ಯ. ಪ್ರತಿ ವರ್ಷವೂ ಒಬ್ಬರಲ್ಲಾ ಒಬ್ಬರು ದಾಖಲೆಗಳನ್ನು ಮುರಿಯುತ್ತಲೇ ಇರುತ್ತಾರೆ ಎಂದಿದ್ದಾರೆ.

ಖ್ಯಾತನಾಮರಿಂದ ಶ್ರೀನಿವಾಸ್ ಗೌಡ ಗೆ ಪ್ರಶಂಸೆ
ಶ್ರೀನಿವಾಸ್ ಗೌಡ ಅವರು ಉಸೇನ್ ಬೋಲ್ಟ್ ದಾಖಲೆಯನ್ನು ಮುರಿದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅವರು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದರು. ಸಂಸದ ಶಶಿ ತರೂರ್, ಉದ್ಯಮಿ ಆನಂದ್ ಮಹೀಂದ್ರಾ ಮತ್ತು ಕೇಂದ್ರ ಸಚಿವ ಕಿರಣ್ ರಿಜುಜು ಶ್ರೀನಿವಾಸ್ ಗೌಡ ಬಗ್ಗೆ ಟ್ವೀಟ್ ಮಾಡಿದ್ದರು.

ಶ್ರೀನಿವಾಸ್ ಗೌಡಗೆ ಮೂರು ಲಕ್ಷ ಚೆಕ್
ನಿನ್ನೆ ಶ್ರೀನಿವಾಸ್ ಗೌಡ ಅವರು ಸಿಎಂ ಯಡಿಯೂರಪ್ಪ ಅವರನ್ನೂ ಭೇಟಿ ಆಗಿದ್ದರು. ಸಿಎಂ ಅವರು ಶ್ರೀನಿವಾಸ್ ಗೌಡ ಅವರಿಗೆ ಸನ್ಮಾನ ಮಾಡಿ ಬಹುಮಾನ ನೀಡಿದರು. ಕಾರ್ಮಿಕ ಇಲಾಖೆ ವತಿಯಿಂದ ಮೂರು ಲಕ್ಷ ರೂಪಾಯಿ ಚೆಕ್ ಅನ್ನು ಸಹ ಶ್ರೀನಿವಾಸ್ ಅವರಿಗೆ ನೀಡಲಾಯಿತು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications