ನವರಾತ್ರಿ ವಿಶೇಷ: ಉಡುಪಿ ಜಿಲ್ಲೆಯ ದುರ್ಗಾಪರಮೇಶ್ವರಿ ದೇವಾಲಯಗಳ ರೌಂಡ್ ಅಪ್
ಶನಿವಾರ (ಅ 14) ಮಹಾಲಯ ಅಮಾವಾಸ್ಯ ಕಳೆದ ನಂತರ ನವರಾತ್ರಿ ಅಥವಾ ದಸರಾ ಆರಂಭವಾಗಲಿದೆ. ಈ ವರ್ಷ ಅಧಿಕಮಾಸ ಇದ್ದಿದ್ದರಿಂದ ಎಲ್ಲಾ ಹಬ್ಬಗಳು ತಡವಾಗಿ ಆಚರಿಸಲಾಗುತ್ತಿದೆ. ದೇವಾಲಯಗಳ ಬೀಡಾಗಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನವರಾತ್ರಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ.
ಉಡುಪಿ ಜಿಲ್ಲೆಯಲ್ಲಿ ನಾಗಾರಾಧನೆ ಮತ್ತು ಭೂತರಾಧನೆಯ ಜೊತೆಗೆ ದುರ್ಗಾಪರಮೇಶ್ವರಿಯನ್ನು ಪೂಜಿಸುವುದು ಹೆಚ್ಚು. ಪರಶುರಾಮನ ಸೃಷ್ಟಿಯೆಂದು ಕರೆಯಲ್ಪಡುವ ಈ ಜಿಲ್ಲೆಯಲ್ಲಿ ಸಾಕಷ್ಟು ಪುರಾಣ ಪ್ರಸಿದ್ದ ದುರ್ಗೆಯ ದೇವಾಲಯಗಳಿವೆ. ಅದರಲ್ಲಿ ಒಂಬತ್ತು ದೇವಾಲಯಗಳ ಮಾಹಿತಿ ಈ ರೀತಿಯಿದೆ.

1. ಮಂದರ್ತಿ ದುರ್ಗಾಪರಮೇಶ್ವರಿ ದೇವಾಲಯ
ಜಿಲ್ಲೆಯ ಪ್ರಮುಖ ಈ ದೇವಾಲಯವು ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುತ್ತದೆ. ಉಡುಪಿಯಿಂದ ಸುಮಾರು 27 ಕಿ.ಮೀ ದೂರದಲ್ಲಿರುವ ಈ ದೇವಾಲಯದಲ್ಲಿ, ನವದುರ್ಗೆಯರಿಗೆ ಪೂಜೆ, ಚಂಡಿಹೋಮದೊಂದಿಗೆ ನವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕ್ಷೇತ್ರದ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ (http://surl.li/mbobp)
2. ಕಮಲಶಿಲೆ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಾಲಯ
ಜಿಲ್ಲೆಯ ಕುಂದಾಪುರದಿಂದ 35 ಕಿ.ಮೀ ದೂರದಲ್ಲಿರುವ ಈ ದೇವಾಲಯದ ಸುತ್ತಲು ಸುಂದರವಾದ ಪರ್ವತಗಳು, ನಿತ್ಯಹರಿದ್ವರ್ಣ ಕಾಡುಗಳಿಂದ ಸುತ್ತುವರಿದಿದೆ. ಕುಬ್ಜಾ ನದಿಯು ಅದರ ಪಕ್ಕದಲ್ಲಿ ಹರಿಯುತ್ತಿದೆ. ಕ್ಷೇತ್ರದ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ (https://shorturl.at/nBJL9).
3. ಕೊಲ್ಲೂರು ಮೂಕಾಂಬಿಕೆ ದೇವಾಲಯ
ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಬರುವ ಈ ದೇವಾಲಯವು ಮುಜರಾಯಿ ವ್ಯಾಪ್ತಿಯ ಶ್ರೀಮಂತ ದೇವಾಲಯಗಳಲ್ಲೊಂದು. ರಾಜ್ಯ ಮತ್ತು ಕೇರಳದಿಂದ ಸಾಕಷ್ಟು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಕೊಡಚಾದ್ರಿ ಶಿಖರದ ತಪ್ಪಲು ಪ್ರದೇಶದಲ್ಲಿರುವ ಈ ದೇವಾಲಯದಲ್ಲಿ ನವರಾತ್ರಿಯ ವೇಳೆ ವಿಶೇಷ ಪೂಜಾಕೈಂಕರ್ಯಗಳು ನಡೆಯುತ್ತದೆ. ಕ್ಷೇತ್ರದ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ (https://shorturl.at/nBJTW)

4. ಕುಂಜಾರುಗಿರಿ ದುರ್ಗಾಪರಮೇಶ್ವರಿ ದೇವಾಲಯ
ಉಡುಪಿ ಶ್ರೀಕೃಷ್ಣ ದೇವಾಲಯದಿಂದ ಆಗ್ನೇಯಕ್ಕೆ ಸುಮಾರು ಹನ್ನೊಂದು ಕಿಲೋಮೀಟರ್ ದೂರದಲ್ಲಿ ಗಿರಿಯ ಮೇಲಿರುವ ದೇವಾಲಯ ಇದಾಗಿದೆ. ಕುಂಜಾರುಗಿರಿ, ದುರ್ಗಾಬೆಟ್ಟ ಮತ್ತು ವಿಮಾನಗಿರಿ ಎಂಬ ಹೆಸರುಗಳಿಂದ ಜನಪ್ರಿಯವಾಗಿರುವ ಬೆಟ್ಟದ ಮೇಲಿರುವ ಇತಿಹಾಸ ಪ್ರಸಿದ್ದ ದೇವಾಲಯ ಮತ್ತು ನವರಾತ್ರಿಯ ಒಂಬತ್ತು ದಿನಗಳಲ್ಲೂ ಕಲ್ಪೋಕ್ತ ಪೂಜೆ ಸಹಿತ ವಿಶೇಷ ಪೂಜೆ ಪುನಸ್ಕಾರ ಇಲ್ಲಿ ನಡೆಯುತ್ತದೆ. ಕ್ಷೇತ್ರದ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ (https://shorturl.at/ikGR3)
5. ಅಂಬಲಪಾಡಿ ಮಹಾಕಾಳಿ ದೇವಾಲಯ
ಉಡುಪಿ ನಗರ ವ್ಯಾಪ್ತಿಯಲ್ಲಿ ಬರುವ ಈ ದೇವಾಲಯದಲ್ಲಿ ಪ್ರತೀ ಶುಕ್ರವಾರ ಮತ್ತು ನವರಾತ್ರಿಯಂದು ವಿಶೇಷ ಪೂಜೆ ನಡೆಯುತ್ತದೆ. ಶುಕ್ರವಾರದಂದು ನಡೆಯುವ ದರ್ಶನ ಕುಣಿಕೆಯ ವೇಳೆ ಭಕ್ತರು ತಮಗಿರುವ ಪ್ರಶ್ನೆಯನ್ನು (ಸಂತಾನ ದೋಷ, ಕಾಯಿಲೆ) ದರ್ಶನ ಪಾತ್ರಧಾರಿಯ ವೇಳೆ ಕೇಳಿ ಪರಿಹಾರ ಕಂಡುಕೊಳ್ಳುತ್ತಾರೆ. ಕ್ಷೇತ್ರದ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ (https://shorturl.at/ntRZ3)
6. ಬೈಲೂರು ಮಹಿಷಮರ್ಧಿನಿ ದೇವಾಲಯ
13ನೇ ಶತಮಾನದ ಈ ದೇವಸ್ಥಾನವು ಉಡುಪಿ ಹೃದಯ ಭಾಗದಿಂದ ಯಿಂದ ಕೇವಲ 2 ಕಿ.ಮೀ ದೂರದಲ್ಲಿದೆ. ವಿಗ್ರಹವು ತನ್ನ ತ್ರಿಶೂಲದ ಅಂಚಿನಿಂದ ಮಹಿಷಾಸುರನನ್ನು ಕೊಲ್ಲುವ ಭಂಗಿಯಲ್ಲಿದೆ. ಕ್ಷೇತ್ರಕ್ಕೆ ಸಂಪರ್ಕ ನಗರದಿಂದ ಉತ್ತಮ ರೀತಿಯಲ್ಲಿದೆ.
7. ಕಡಿಯಾಳಿ ಮಹಿಷಮರ್ಧಿನಿ ದೇವಾಲಯ
ರಜತ ಪೀಠಪುರವೆಂದು ಹೆಸರಾದ ಉಡುಪಿ ನಗರದ ಪೂರ್ವ ದಿಕ್ಕಿನಲ್ಲಿರುವ ಈ ದೇವಾಲಯವು ನಗರದ ಸಿಟಿ ಬಸ್ ನಿಲ್ದಾಣದಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿದೆ. ಮಹಿಷಮರ್ದಿನಿ ದೇವಿಯ ವಿಗ್ರಹವು ಕ್ರಿ.ಶ. 600-750ರವರೆಗಿನ ಶಿಲ್ಪದ ಶೈಲಿಯಲ್ಲಿ ಹೊಂದಿದೆ. ಬಾದಾಮಿ ಚಾಲುಕ್ಯರ ಶಿಲ್ಪ ಲಕ್ಷಣವು ವಿಗ್ರಹದಲ್ಲಿ ಕಾಣಸಿಗುತ್ತದೆ. ಕ್ಷೇತ್ರದ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ (https://rb.gy/rn00h)
8. ನೀಲಾವರ ಮಹಿಷಮರ್ಧಿನಿ ದೇವಾಲಯ
ಉಡುಪಿಯಿಂದ ಸುಮಾರು ಹದಿನೆಂಟು ಕಿಲೋಮೀಟರ್ ದೂರದಲ್ಲಿರುವ ಈ ದೇವಾಲಯವು ಸೀತಾ ನದಿ ತೀರದಲ್ಲಿದೆ. ಚತುರ್ಬಾಹುಯುಕ್ತ ಮಹಿಷಮರ್ಧಿನಿಯ ವಿಗ್ರಹವಾಗಿದ್ದು, ದೇವಿಯ ಬಲಗೈಯಲ್ಲಿ ಚಕ್ರ, ಎಡಗೈಯಲ್ಲಿ ಶಂಖ, ಮತ್ತೊಂದು ಎಡಗೈಯಲ್ಲಿ ಮಹಿಷಾಸುರನನ್ನು ಎತ್ತಿ ಹಿಡಿದಿರುವಂತೆ ಮತ್ತು ಬಲಗೈಯ್ಯಲ್ಲಿ ಹಿಡಿದಿರುವ ತ್ರಿಶೂಲದಿಂದ ಅವನ ಕುತ್ತಿಗೆಯನ್ನು ಇರಿಯುತ್ತಿರುವಂತೆ ದೇವಿಯ ಮೂರ್ತಿಯನ್ನು ರೂಪಿಸಲಾಗಿದೆ. ಕ್ಷೇತ್ರದ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ (https://rb.gy/xlweu)
9. ಕನ್ನರ್ಪಾಡಿ ಜಯದುರ್ಗಾ ಪರಮೇಶ್ವರಿ ದೇವಾಲಯ
ಉಡುಪಿಯಿಂದ ನೈಋತ್ಯಕ್ಕೆ ಐದು ಕಿಮೀ ದೂರದಲ್ಲಿರುವ, ಈ ದೇವಾಲಯದಲ್ಲಿ ಚೌಕಾಕಾರದ ಬಲಿಪೀಠವಿದ್ದು ಬಲವಾದ ಕಲ್ಲುಗಳಿಂದ ನಿರ್ಮಿಸಲಾಗಿದೆ. ದೇವಿಯ ಮೂರ್ತಿಯು ಎರಡು ತೋಳುಗಳನ್ನು ಹೊಂದಿದೆ ಮತ್ತು ಸೌಮ್ಯ ರೂಪದಲ್ಲಿದೆ. ದೇವಿಯ ಕೈಗಳು ಆಶೀರ್ವಾದದ ಭಂಗಿಯಲ್ಲಿವೆ. ದೇವಿಯ ವಾಹನ ಸಿಂಹವನ್ನು ಮೂರ್ತಿಯ ಮುಂದೆ ಕಾಣಬಹುದು. ಕ್ಷೇತ್ರದ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ (https://rb.gy/gzk0f)
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ












Click it and Unblock the Notifications