ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಾಯಿ-ಮಗ ನಾಪತ್ತೆ: ನಾಪತ್ತೆಗೂ ಮುನ್ನ ತಾಯಿ ಮಾಡಿದ್ದೇನು?

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜೂನ್.27: ಕೋಟೇಶ್ವರ ಅಂಕದಕಟ್ಟೆಯ ಎನ್ಆರ್ಐ ಅಪಾರ್ಟ್ ಮೆಂಟ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ತಾಯಿ-ಮಗ ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ನಾಪತ್ತೆಯಾದವರು ರಂಜೀತ್ ಸಿಂಗ್ ಎಂಬುವವರ ಪತ್ನಿ ಕುಂತಿದೇವಿ(28) ಹಾಗೂ ಮಗ ಸನ್ನಿ (7) ಎಂದು ಗುರುತಿಸಲಾಗಿದ್ದು, ಇವರು ಮೂಲತಃ ಮಧ್ಯ ಪ್ರದೇಶದವರು ಎಂದು ತಿಳಿದು ಬಂದಿದೆ.

ಸಾಲದ ಸುಳಿಯಲ್ಲಿ ಸಿಲುಕಿದ್ದ ಟೆಕ್ಕಿ 8 ತಿಂಗಳ ನಂತರ ಪತ್ತೆಸಾಲದ ಸುಳಿಯಲ್ಲಿ ಸಿಲುಕಿದ್ದ ಟೆಕ್ಕಿ 8 ತಿಂಗಳ ನಂತರ ಪತ್ತೆ

ನಾಪತ್ತೆಯಾದ ಮಹಿಳೆ ಕುಂತಿದೇವಿ, ಮಗ ಸನ್ನಿ ಓದುತ್ತಿದ್ದ ಸೈಂಟ್ ಪಿಯೂಸ್ ಆಂಗ್ಲ ಮಾಧ್ಯಮ ಶಾಲೆಗೆ ಹೋಗಿ ತನ್ನ ಗಂಡನಿಗೆ ಬೆಂಗಳೂರಿನಲ್ಲಿ ಅಪಘಾತವಾಗಿದೆ ಎಂದು ಶಿಕ್ಷಕಿಯ ಬಳಿ ಸುಳ್ಳು ಹೇಳಿ ಕರೆದುಕೊಂಡು ಹೋಗಿದ್ದಾಳೆ.

ಶಾಲೆಯಿಂದ ಮಗನನ್ನು ಕರೆದುಕೊಂಡು ಹೋದ ಹೆಂಡತಿ ಇದುವರೆಗೂ ಪತ್ತೆಯಾಗಿಲ್ಲ ಎಂದು ಪತಿ ರಂಜೀತ್ ಸಿಂಗ್ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Missing case of mother-son has come to light in Udupi.

ಹೆಚ್ಚಿದ ಗಾಂಜಾ ಮಾರಾಟ: ಉಡುಪಿಯ ಶಾಲಾ ಕಾಲೇಜು ವಠಾರಗಳಲ್ಲಿ ಗಾಂಜಾ ಮಾರಾಟ ಹೆಚ್ಚಾಗಿದ್ದು, ಇಂದ್ರಾಳಿ ರೈಲ್ವೇ ನಿಲ್ದಾಣದ ಸಮೀಪದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಬಿಹಾರ್ ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಿಹಾರ್ ರಾಜ್ಯದ ಕಟೋರಿಯಾ ಜಿಲ್ಲೆಯ ಭುಲುವಾಪುರ ನಿವಾಸಿ ಪ್ರಮೋದ್ ಕುಮಾರ್ ಯಾದವ್ (26) ಬಂಧಿತ ಆರೋಪಿ. ಈತನಿಂದ 2 ಕಿಲೋ, 122 ಗ್ರಾಂ ತೂಕದ ಗಾಂಜಾ ವಶಕ್ಕೆ ಪಡೆಯಲಾಗಿದ್ದು, ಅದರ ಅಂದಾಜು ಮೌಲ್ಯ 42,000 ರೂ. ಆಗಿದೆ.

ಉಡುಪಿ ಜಿಲ್ಲಾ ಎಸ್ಪಿ ಲಕ್ಷ್ಮಣ ನಿಂಬರ್ಗಿ ನಿರ್ದೇಶನದಲ್ಲಿ, ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಮಾರ್ಗದರ್ಶನದಲ್ಲಿ, ಉಡುಪಿ ಜಿಲ್ಲಾ CEN ಅಪರಾಧ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಸೀತಾರಾಮ ಪಿ. ಅವರಿಗೆ ಸಿಕ್ಕ ಖಚಿತ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ. ಈ ಕಾರ್ಯಾಚರಣೆಯಲ್ಲಿ ಸೆನ್ ಅಪರಾಧ (ಡಿ.ಸಿ.ಬಿ.) ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸೀತಾರಾಮ ಪಿ. ರವರ ಜೊತೆಗೆ ಪೊಲೀಸ್ ಉಪನಿರೀಕ್ಷಕ ಸಿ.ಹೆಚ್. ರಾಮಚಂದ್ರ ಭಟ್, ಸಹಾಯಕ ಪೊಲೀಸ್

ಉಪನಿರೀಕ್ಷಕ ಕೇಶವ ಗೌಡ, ಮತ್ತು ಸಿಬ್ಬಂದಿಯವರಾದ ಸತೀಶ್, ಕೃಷ್ಣಪ್ರಸಾದ್, ಪ್ರಸನ್ನ ಸಾಲ್ಯಾನ್, ನಾಗೇಶ್, ಸಂಜಯ್ ಶೆಟ್ಟಿ ಇದ್ದರು.

English summary
Missing case of mother-son has come to light in Udupi. missing people are identified as Ranjit Singh's wife Kunti Devi (28) and son Sunny (7). They were originally from Madhya Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X